ಮಳೆ: ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆ ನೆರವು
ಬೆಂಗಳೂರು, ಜೂನ್ 19: ಉತ್ತರ ಭಾರತ ಅದರಲ್ಲೂ ಉತ್ತರಾಖಂಡದ ಯಾತ್ರಾ ಸ್ಥಳಗಳಲ್ಲಿ ವರುಣ ವೈಪರೀತ್ಯವುಂಟಾಗಿ ಗಂಗಾ ನದಿ ಹಾಗೂ ಅದರ ಉಪ ನದಿಗಳು ಉಕ್ಕಿ ಹರಿಯುತ್ತಿವೆ.
ದೇವರು ದಿಂಡಿರು ಎಂದು ಬದರಿನಾಥ, ಕೇದಾರನಾಥ, ಹೃಷಿಕೇಶಕ್ಕೆ ಹೋಗಿರುವ ರಾಜ್ಯದ ನೂರಾರು ಯಾತ್ರಾರ್ಥಿಗಳು ಭಾರಿ ಮಳೆ/ ಪ್ರವಾಹದಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕದ ನೂರಾರು ಯಾತ್ರಾರ್ಥಿಗಳು ಅರಣ್ಯ, ಗುಡ್ಡ, ರಸ್ತೆ, ಸಣ್ಣ ಹಳ್ಳಿಗಳಲ್ಲಿ ಉಳಿದುಕೊಂಡಿದ್ದು ತಿನ್ನಲು ಆಹಾರ, ಕುಡಿಯಲು ನೀರು ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಅನೇಕರು ಅನಾರೋಗ್ಯಪೀಡಿತರಾಗಿದ್ದು ಅವರಿಗೆ ಔಷಧೋಪಚಾರವೂ ದೊರಕುತ್ತಿಲ್ಲ.
ರಾಜ್ಯ ಸರಕಾರದ ನೆರವು:
ಸಂಕಷ್ಟದಲ್ಲಿ ಸಿಲುಕಿರುವವರ ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಮುಂದಾಗಿದೆ. ಕೆಲವು ತುರ್ತು ಸೇವೆಗಳನ್ನೂ ಒದಗಿಸಿದೆ. ತುರ್ತು ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು:

Bangalore - 080- 2225 3707
National Disaster Response Force (NDRF): 011- 2670 1728
Minsitry of Home affairs Contriol Room : 011- 2309 3563
Rudraprayaga Control Room (Uttarkhand Dist) : 01 364 2333727
Rudraprayaga DC Office: 01364 233370
ಇಂದು ಬೆಳಗ್ಗೆ ಅಧಿಕಾರಿಗಳ ತಂಡ ಪ್ರಯಾಣ: ಈ ಮಧ್ಯೆ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ್‌ರಾಜ್ ಸಿಂಗ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಯುಕ್ತ ಕರಿಗೌಡ ಅವರನ್ನು ಕನ್ನಡಿಗರ ರಕ್ಷಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಅಧಿಕಾರಿಗಳು ಇಂದು ಬುಧವಾರ ಬೆಳಗ್ಗೆ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications