ಚಿತ್ರ: ಬಲಿ ಹಾಕುತ್ತಿರುವ ಮಳೆ, ಜೀವ ಭಯದಲ್ಲಿ ಯಾತ್ರಿಗಳು
ನವದೆಹಲಿ, ಜೂ. 18: ಪರ್ವತ ತಪ್ಪಲಿನ ರಾಜ್ಯಗಳಾದ ಉತ್ತಾರಖಂಡ್, ಹಿಮಾಚಲ ಪ್ರದೇಶ ಹಾಗೂ ಹರ್ಯಾಣಗಳಲ್ಲಿ ಭಾರಿ ಮಳೆಯಾಗಿರುವ ಕಾರಣ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ಮೀರಿ ಹರಿದಿದೆ. ಸುಮಾರು 60 ಜನರನ್ನು ಬಲಿ ತೆಗೆದುಕೊಂಡಿರುವ ಪ್ರವಾಹ, ಸಾವಿರಾರು ಜನರನ್ನು ಬೀದಿಗೆ ತಬ್ಬಿದೆ.
ದೆಹಲಿ, ಹರ್ಯಾಣ, ಪಂಜಾಬ್, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಭಾಗಗಳಲಿ ಯಾತ್ರಾರ್ಥಿಗಳಾಗಿದ್ದ ಕ್ರಿಕೆಟರ್ ಹರ್ಭಜನ್ ಸಿಂಗ್ ಕುಟುಂಬ ಹಾಗೂ ಕರ್ನಾಟಕದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸುರಕ್ಷಿತವಾಗಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
ಉತ್ತರಾಖಂಡದಲ್ಲಿ 60 ಮಂದಿ ನಾಪತ್ತೆಯಾಗಿದ್ದು, ಯಮುನೋತ್ರಿ,ಗಂಗೋತ್ರಿ, ಕೇದರನಾಥ್ ಹಾಗೂ ಬದ್ರಿನಾಥ್‌ಗೆ ಚರ್ದಂಯಾತ್ರೆ ನಡೆಸುವುದನ್ನು ಅಧಿಕಾರಿಗಳು ನಿರೋಧಿಸಿದ್ದಾರೆ. ಉತ್ತರಾಖಂಡದಲ್ಲಿ ಧಾರಾಕಾರ ಮಳೆಸುರಿಯುವ ಕಾರಣ ವಾರ್ಷಿಕ ಕೈಲಾಶ್ ಮಾನಸ ಸರೋವರ್ ಯಾತ್ರೆಯ ಮೇಲೂ ನಿಷೇಧ ಹೇರಲಾಗಿದೆ.
ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಕಿನ್ನಾವುರ್ ಗೆ ತೀವ್ರ ಮಳೆಯು ಭಾರೀ ಪೆಟ್ಟು ನೀಡಿದ್ದು, ಭೂ ಕುಸಿತದ ಕಾರಣ ಒಂಭತ್ತು ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ರಸ್ತೆ ಸಂಚಾರದಲ್ಲಿಯೂ ಕೂಡ ಅಸ್ತವ್ಯಸ್ತವಾಗಿದೆ. ಸಾಂಗ್ಲಾ ಜಿಲ್ಲೆಯಲ್ಲಿ 800 ಮಂದಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರತಾಪಕ್ಕೆ ಒಟ್ಟು 1000 ಪ್ರವಾಸಿಗರು ಹಾಗೂ ಸ್ಥಳೀಯರು ಸಿಲುಕಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ.
ಭಾರತೀಯ ಸೇನೆ ಹಾಗೂ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸೇರಿಸಲು ಹರಸಾಹಸ ಪಡುತ್ತಿದ್ದಾರೆ. ಮಳೆ ರುದ್ರ ನರ್ತನದ ದೃಶ್ಯಗಳು ನಿಮ್ಮ ಮುಂದಿದೆ...

ಉತ್ತರಾಖಂಡ ಮಳೆಗೆ ಆಹುತಿ
ಕಿನ್ನಾವುರ್ ಜಿಲ್ಲೆಯಲ್ಲಿ 25 ಪ್ರವಾಸಿಗರು ಹಾಗೂ ದೂರದರ್ಶನ ತಂಡವೊಂದು ಮಳೆಯ ಅರ್ಭಟಕ್ಕೆ ಸಿಕ್ಕಿಬಿದ್ದಿದೆ.
ಉತ್ತರಾಖಂಡ ರಾಜ್ಯದ ಕೇದರ್ ನಾಥ್ ನ ಹಿಮಾಲಯ ಗುಡಿ ಬಳಿ ಯಿಂದ 5 ಶವಗಳನ್ನು ಇಂದು ಹೊರಕ್ಕೆ ತೆಗೆಯುವುದರೊಂದಿಗೆ ಮಳೆಗೆ ಅಹುತಿಯಾದವರ ಸಂಖ್ಯೆ 13ಕ್ಕೇರಿದೆ.ರಕ್ಷಣೆ ಮುಂದಾಗಿರುವ ಐಟಿಬಿಪಿ ಹಾಗೂ ಸ್ಥಳೀಯ ಪೊಲೀಸರ ತಂಡದ 8ಕ್ಕೂ ಅಧಿಕ ಸಿಬ್ಬಂದಿ ಕೂಡಾ ಮೃತಪಟ್ಟಿರುವ ಸುದ್ದಿ ಸಿಕ್ಕಿದೆ.
ಜೀವನದಿಗಳು ಜೀವ ತಿನ್ನುತ್ತಿದೆ
ಭಾರಿ ಮಳೆ ಗಂಗಾ, ಯಮುನಾ ಸೇರಿದಂತೆ ಪ್ರಮುಖ ನದಿಗಳಲ್ಲಿ ಪ್ರವಾಹವನ್ನು ಸೃಷ್ಟಿಸಿದ್ದು, ಅಸಂಖ್ಯಾತ ಸೇತುವೆಗಳು, ರಸ್ತೆಗಳು ಹಾಗೂ ಕಟ್ಟಡಗಳು ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿವೆ.
ಯಮುನಾ ನಗರ್ ಜಿಲ್ಲೆ ಸೇರಿದಂತೆ ಹರ್ಯಾಣದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾದ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಲೇ ಸಾಗುತ್ತಿದ್ದು, ನೆರೆಯ ಜಿಲ್ಲೆಗಳಾದ ಕರ್ನಾಲ್, ಪಾಣಿಪತ್ ಹಾಗೂ ಸೋನೆಪತ್ ಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರಾಖಂಡ್ ಪ್ರವಾಹ
ಉತ್ತರಾಖಂಡ್ : ರಸ್ತೆಯಲ್ಲಿದ್ದ ವಾಹನಗಳು ಪ್ರವಾಹ ಕೊಚ್ಚಿಕೊಂಡು ಹೋಗಿವೆ.

ಹೆದ್ದಾರಿ ಸ್ಥಿತಿ ನೋಡಿ
ಉತ್ತರಾಖಂಡ್ : ರಾಷ್ಟ್ರೀಯ ಹೆದ್ದಾರಿಗಳು, ಸೇತುವೆಗಳು ಕುಸಿದಿರುವುದರಿಂದ ಎಲ್ಲೆಡೆ ಸಂಪರ್ಕ ಕಡಿತಗೊಳ್ಳುತ್ತಿದೆ.

ರಕ್ಷಣಾ ಕಾರ್ಯ ಸಾಗಿದೆ
ವಿದ್ಯುತ್, ದೂರವಾಣಿ, ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು ಪರಿಹಾರ ಕಲ್ಪಿಸಲು ರಕ್ಷಣಾ ಪಡೆಗಳಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವನಿಗೆ ರಕ್ಷಣೆ ಎಲ್ಲಿ?
ಯಾತ್ರಿಗಳು ಮಳೆ, ಪ್ರವಾಹದಿಂದ ಅರ್ಧ ಮುಳುಗಿರುವ ಶಿವನನ್ನು ನೋಡಿ ಬೆರಗಾಗಿದ್ದಾರೆ.

ಇದು ಇಲ್ಲಿನ ಮುಖ್ಯರಸ್ತೆ
ಉತ್ತರಾಖಂಡ್: ಬಿಡುವು ಕೊಡದ ಮಳೆ ನಡುವೆ ನೀರು ತುಂಬಿರುವ ರಸ್ತೆಯಲ್ಲಿ ಸಾಗುತ್ತಿರುವ ಜನ

ಮುಂಬೈನಲ್ಲಿ ಮಳೆ
ಮುಂಬೈ: ಎಂಥಾ ಜೋರು ಮಳೆ ಬಿದ್ದರೂ ಎಂದಿನಂತೆ ಮುಂಬೈ ಜನ ನಿತ್ಯ ಜೀವನ ಬಂಡಿ ಸಾಗಿಸಿದ್ದಾರೆ

ದೆಹಲಿಯ ನೋಟ
ನವದೆಹಲಿ: ಇಲ್ಲಿ ತನ್ನ ಆರ್ಭಟ ತೋರದಿದ್ದರೂ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆದಿದೆ.












Click it and Unblock the Notifications