Get Updates
Get notified of breaking news, exclusive insights, and must-see stories!

ಚಲನಚಿತ್ರ ಅಕಾಡೆಮಿಯಿಂದ ನಟಿ ತಾರಾ ವಜಾ

Actress Tara removed from Karnataka Film Academy
ಬೆಂಗಳೂರು, ಜೂ. 15 : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಂದು ತಿಂಗಳು ಪೂರೈಸಿದ್ದರೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ರಾಜೀನಾಮೆ ನೀಡದಿದ್ದ ಚಿತ್ರನಟಿ ತಾರಾ ವೇಣು ಅವರನ್ನು ವಜಾ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಸೇರಿದಂತೆ ಇತರ ನಿಗಮ, ಮಂಡಳಿ, ಅಕಾಡೆಮಿ ಅಧ್ಯಕ್ಷರಿಗೆ ರಾಜೀನಾಮೆ ನೀಡಬೇಕೆಂದು ಸೂಚಿಸಲಾಗಿತ್ತು. ತಾರಾ ಅವರು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರಿಂದ ಅವರಿಗೆ ರಾಜೀನಾಮೆ ಮೊದಲೇ ಸೂಚಿಸಲಾಗಿತ್ತು.

'ಹಸೀನಾ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ತಾರಾ ಅವರು 2012ರ ಆಗಸ್ಟ್ 24ರಂದು ಡಾ. ರಾಜಕುಮಾರ್ ಅವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಇನ್ನೊಂದು ವರ್ಷ ಕಾಲಾವಧಿ ಇರುವಾಗಲೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲಾಗಿದೆ. ಅವರಿಗಿಂತ ಮೊದಲು ಟಿ.ಎಸ್. ನಾಗಾಭರಣ ಅವರು ಆ ಸ್ಥಾನವನ್ನು ಅಲಂಕರಿಸಿದ್ದರು.

ಈಗ ತಾರಾ ಅವರ ವಜಾದಿಂದ ಖಾಲಿಯಾಗಿರುವ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಸಂಗತಿ ಭಾರೀ ಕುತೂಲಹ ಮೂಡಿಸಿದೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವ ವ್ಯಕ್ತಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನ ಒಲಿಯುತ್ತದೆ ಎಂಬುದು ತಿಳಿಯುತ್ತಿದ್ದಂತೆ ಹಲವಾರು ಘಟಾನುಘಟಿಗಳು ಆ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಬಿಜೆಪಿ ನಾಯಕ 'ಮುಖ್ಯಮಂತ್ರಿ' ಚಂದ್ರು ಅವರಿಗೂ ಸ್ಥಾನ ತೊರೆಯಬೇಕೆಂದು ಸೂಚನೆ ನೀಡಲಾಗಿತ್ತು. ತಾರಾ ಅವರು ಸ್ಪರ್ಧಿಸಿದಾಗ 'ಗಿರಿಕನ್ಯೆ' ಜಯಮಾಲಾ ಅವರು ಕೂಡ ಸ್ಪರ್ಧಿಸಿದ್ದರು. ಈ ಬಾರಿ ಅವರ ಹೆಸರು ಕೂಡ ಕೇಳಿಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+