ಜನಸಂಖ್ಯೆ: ಚೀನಾ ಹಿಂದಿಕ್ಕಲಿದೆ ನಮ್ಮ ಭಾರತ

India to become world's most populous nation around 2028: UN
ವಿಶ್ವಸಂಸ್ಥೆ, ಜೂ.14: ವಿಶ್ವದಲ್ಲೆ ಎರಡನೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ 2028ರ ವೇಳೆಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಪೈಕಿ ಮೊಟ್ಟ ಮೊದಲ ಸ್ಥಾನ ಪಡೆಯಲಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ 2028ರ ವೇಳೆಗೆ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಪಡೆಯಲಿದೆ ಎಂದು ಹೇಳಲಾಗಿದೆ. 2025ರ ನಂತರ ಜನಸಂಖ್ಯೆ ಗತಿ ಹೆಚ್ಚುತ್ತ, 2028ರ ವೇಳೆಗೆ 1.54 ಬಿಲಿಯನ್ (150 ಕೋಟಿಗೂ ಅಧಿಕ) ಜನರು ದೇಶದಲ್ಲಿ ವಾಸ ಮಾಡುತ್ತಾರೆ.

ಹೆಚ್ಚುತ್ತಿರುವ ಜನಸಂಖ್ಯೆಯಿಂದ ವಿಶ್ವದಲ್ಲೆ ಅತಿ ಹೆಚ್ಚಿನ ಲಿಂಗಾನುಪಾತವು ಭಾರತದಲ್ಲೇ ನಡೆಯಲಿದೆ ಎಂದು ವರದಿ ಬಹಿರಂಗಪಡಿಸಿದೆ. ಇನ್ನೂ ವಿಶೇಷವೆಂದರೆ, 2050ರ ವೇಳೆಗೆ ವಿಶ್ವದ ಜನಸಂಖ್ಯೆ 9.6 ಬಿಲಿಯನ್ ಜನಸಂಖ್ಯೆಯಾಗಲಿದೆ.

ಪ್ರಸ್ತುತ 7.2 ಬಿಲಿಯನ್ ಜನಸಂಖ್ಯೆ ಇದ್ದು, 2025ರ ವೇಳೆಗೆ 8.1 ಬಿಲಿಯನ್ ಆದರೆ, 2050ರ ವೇಳೆಗೆ 9.6 ಬಿಲಿಯನ್ ಗೆ ಏರಿಕೆಯಾಗಲಿದೆ. ಭಾರತ, ಇಂಡೋನೇಷಿಯಾ, ಪಾಕಿಸ್ತಾನ, ಪಿಲಿಫೈನ್ಸ್, ಅಮೆರಿಕಾದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ.

ಮುಂದುವರೆದಿರುವ ರಾಷ್ಟ್ರಗಳಲ್ಲಿ ಜನಸಂಖ್ಯೆ ತುಸು ಏರಿಕೆಯಾದರೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗಲಿದೆ. ಸದ್ಯಕ್ಕೆ ಚೀನಾ ವಿಶ್ವದಲ್ಲೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದು, 2025ರ ವೇಳೆಗೂ ಇದೇ ಸ್ಥಾನವನ್ನು ಕಾಪಾಡಿಕೊಳ್ಳಲಿದೆ. 2028ರ ನಂತರ ಭಾರತ ಚೀನಾವನ್ನು ಹಿಂದಿಕ್ಕಿ ಮುಂದುವರಿಯಲಿದೆ.

ಇದೇ ವೇಳೆ ವರದಿಯಲ್ಲಿ ಲಿಂಗಾನುಪಾತ, ಭ್ರೂಣಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹದ ವಯಸ್ಸನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಸಲಹೆ ಮಾಡಿದೆ.

ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಟ್ಟಾರೆ ಜೀವಿತಾವಧಿ ಕಾಲವೂ ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿದೆ. ಜಾಗತಿಕ ಮಟ್ಟದಲ್ಲಿ 2045-2050ರ ವೇಳೆಗೆ 76 ವರ್ಷವಾಗುತ್ತದೆ. 2095-2100 ರ ವೇಳೆಗೆ 82 ವರ್ಷಕ್ಕೇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಮಾರು 233 ದೇಶಗಳ ಜನಸಂಖ್ಯಾ ದತ್ತಾಂಶ ಹಾಗೂ 2010 ಜನಸಂಖ್ಯೆ ಗಣತಿ ಮಾಹಿತಿ ಆಧಾರದ ಮೇಲೆ ವಿಶ್ವಸಂಸ್ಥೆ ಈ ವರದಿ ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+