ಸುಳ್ಯ ವಿವಾಹಿತ ಮಹಿಳೆಯ ರೇಪ್, ರಾಡ್ ಚುಚ್ಚಿ ಕೊಲೆ

ದಿಲ್ಲಿಯಲ್ಲಿ ನಡೆದಂತೆ ಹಳ್ಳಿಯಲ್ಲಿಯೂ:
ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಮಾರಣಾಂತಿಕ ಅತ್ಯಾಚಾರ ಪ್ರಕರಣವನ್ನು ಹೋಲುವ ಈ ಘಟನೆ ಬಗ್ಗೆ ಸ್ಥಳೀಯರು ಆತಂಕ/ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಅನುಮಾನಾಸ್ಪದವಾಗಿದೆ:
ಪಿರಿಯಾಪಟ್ಟಣದ ಬೆಟ್ಟದಪುರ ನಿವಾಸಿ ಮಹೇಶ ಎಂಬಾತ ಎರಡು ವರ್ಷಗಳ ಹಿಂದೆ ನಂದಿನಿ ಎಂಬ ಅನಾಥ ಯುವತಿಯನ್ನು ವಿವಾಹವಾಗಿದ್ದ. ಇತ್ತೀಚೆಗೆ ಅನಾರೋಗ್ಯದಿಂದ ನಂದಿನಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಮೀಪದ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದಿದ್ದ.
ಅಲ್ಲಿ ವೈದ್ಯರು ಪರೀಕ್ಷಿಸಿದಾಗ ನಂದಿನಿ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ನಿಂದ ಚುಚ್ಚಿರುವುದನ್ನು ಮನಗಂಡ ವೈದ್ಯರು ತಕ್ಷಣ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ನಂದಿನಿ ಮೃತಪಟ್ಟಿದ್ದರು ಎಂಬುದು ಗಮನಾರ್ಹ. ಈ ಬಗ್ಗೆ ಸುಳ್ಯ ಪೊಲೀಸರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪತಿ ಮಹೇಶ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆಕೆ ಅನಾರೋಗ್ಯದಿಂದಿರುವ ಬಗ್ಗೆ ತಿಳಿದಿದೆಯೇ ಹೊರತು ಅದಕ್ಕೆ ಕಾರಣ ಏನೆಂಬುದು ತಿಳಿದುಬಂದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.












Click it and Unblock the Notifications