ಚಿತ್ರದಲ್ಲಿ : ಬೆಂಗಳೂರಲ್ಲಿ ಉತ್ತರ ಪ್ರದೇಶದ ಯುವರಾಜ
ಬೆಂಗಳೂರು, ಜೂ.13: ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗುರುವಾರ ಸಂಜೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಾಲಿಟ್ಟಿದ್ದಾರೆ. ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ಶಾಸಕ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಬಾಲಿವುಡ್ ನಟಿ ಕವಿತಾ ವರ್ಮಾ ಹಾಟ್ ಫೋಟೊ ಶೂಟ್ ಚಿತ್ರ ನೇರವಾಗಿ ನಿಮ್ಮ ಪರದೆಯಲ್ಲಿ ನೋಡಿ...ಮಹಾರಾಷ್ಟ್ರದಲ್ಲಿ ಮಳೆ, ಶೀತಗಾಳಿ ಜೋರಾಗಿದ್ದು, ಮಳೆ ಆಗಾಗ ಬಿಡುವು ನೀಡುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡರೂ ದೈನಂದಿನ ಕಾರ್ಯಗಳನ್ನು ಎಂದಿನಂತೆ ನಡೆಯುತ್ತಿದೆ. ದೆಹಲಿಯಲ್ಲೂ ಇದೇ ಪರಿಸ್ಥಿತಿ ಆರಂಭವಾಗಿದೆ.
ಈ ನಡುವೆ ಪೆಲಿಕಾನ್ ಹಕ್ಕಿಯೊಂದು ದೆಹಲಿಯ ಪ್ರಾಣಿ ಸಂಗ್ರಹಾಲಯದ ಕೆರೆಯೊಂದರಿಂದ ಹಾರಾಡುತ್ತಿರುವ ದೃಶ್ಯ ನಿಮಗಾಗಿ ನೀಡಲಾಗಿದೆ.
ಉಳಿದಂತೆ ಹಂಗೇರಿಯಲ್ಲಿ ಜಲ ಪ್ರವಾಹ ಮುಂದುವರೆದಿದ್ದು ರಾಜಧಾನಿ ಬುಡಾಪೆಸ್ಟ್ ನ ದಕ್ಷಿಣ ಭಾಗದಲ್ಲಿರುವ ಮೊಹಾಕ್ಸ್ ನಗರವನ್ನು ದನುಬೆ ನದಿ ಆಪೋಷನ ತೆಗೆದುಕೊಂಡಿದೆ. ಬುಧವಾರ ಸಿಕ್ಕ ವೈಮಾನಿಕ ಚಿತ್ರದಲ್ಲಿ ಎಲ್ಲೆಡೆ ನೀರು ಮಾತ್ರ ಕಾಣಿಸುತ್ತಿದೆ.
ದನುಬೆ, ವ್ಲಾತವ ಹಾಗೂ ಸಾಲೆ ನದಿಗಳು ಉಕ್ಕಿ ಹರಿಯುತ್ತಿದ್ದು ದಕ್ಷಿಣ ಜರ್ಮನಿ, ಚೆಕ್ ಗಣರಾಜ್ಯ, ಆಸ್ಟ್ರೀಯಾ, ಸ್ಲೊವಾಕಿಯಾ ಹಾಗೂ ಹಂಗೇರಿಯ ಬಹುಭಾಗವನ್ನು ಮುಳುಗಿಸಿಬಿಟ್ಟಿದೆ.
ಮಿಕ್ಕಂತೆ ಸೂರತ್ ನ ಕೃಷಿ ಬಜಾರ್ ನಲ್ಲಿ ಕಂಡ ನರೇಂದ್ರ ಮೋದಿ, ಹೈದರಾಬಾದಿನಲ್ಲಿ ಮುಂದುವರೆದ ತೆಲಂಗಾಣ ಪರ ಹೋರಾಟ, ಕೋಲ್ಕತ್ತಾದಲ್ಲಿ ನೀರಿಗಾಗಿ ಹಾಹಾಕಾರ, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ದೇಹ ಸ್ಥಿತಿ, ಇಂಗ್ಲೆಂಡಿನ ಚಾಂಪಿಯನ್ಸ್ ಟ್ರೋಫಿ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ.

ಬೆಂಗಳೂರಿನಲ್ಲಿ ಯುಪಿ ಸಿಎಂ
ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿರುವ ಅಖಿಲೇಶ್ ಯಾದವ್ ಅವರು ಶ್ರೀರಂಗಪಟ್ಟಣ, ಮೈಸೂರು ಪ್ರವಾಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲೇ ಅಖಿಲೇಶ್ ಗೆ ಸಣ್ಣ ಸನ್ಮಾನ ಮಾಡಲಾಗಿದೆ.
ಮೈಸೂರು ಪೇಟ,ಶ್ರೀಗಂಧದ ಹಾರ ತುರಾಯಿ ನಡುವೆ ಯುಪಿ ಸಿಎಂ ಕಂಡಿದ್ದು ಹೇಗೆ ಎಂಬುದನ್ನು ಪಿಟಿಐ ಛಾಯಾಗ್ರಾಹಕ ಶೈಲೇಂದ್ರ ಅವರು ನಮಗೆ ಕಳಿಸಿದ್ದಾರೆ.. ನೀವು ನೋಡಿ..
ಕವಿತಾ ವರ್ಮಾ
ಬಾಲಿವುಡ್ ನಟಿ ಕವಿತಾ ವರ್ಮಾ ಹಾಟ್ ಫೋಟೊ ಶೂಟ್ ಚಿತ್ರ

ಹಕ್ಕಿ ಹಾರಾಟ
ದೆಹಲಿಯ ಪ್ರಾಣಿ ಸಂಗ್ರಹಾಲಯದ ಕೆರೆಯೊಂದರಿಂದ ಹಾರುತ್ತಿರುವ ಪೆಲಿಕಾನ್ ಹಕ್ಕಿಗಳು

ಹಂಗೇರಿಯಲ್ಲಿ ಜಲ ಪ್ರವಾಹ
ಬುಡಾಪೆಸ್ಟ್ : ದನುಬೆ, ವ್ಲಾತವ ಹಾಗೂ ಸಾಲೆ ನದಿಗಳು ಉಕ್ಕಿ ಹರಿಯುತ್ತಿದ್ದು ದಕ್ಷಿಣ ಜರ್ಮನಿ, ಚೆಕ್ ಗಣರಾಜ್ಯ, ಆಸ್ಟ್ರೀಯಾ, ಸ್ಲೊವಾಕಿಯಾ ಹಾಗೂ ಹಂಗೇರಿಯ ಬಹುಭಾಗವನ್ನು ಮುಳುಗಿಸಿಬಿಟ್ಟಿದೆ.

ನೀರು ಸಿಕ್ಕರೆ ಪರಮಾನಂದ
ಕೋಲ್ಕತ್ತಾ: ನಲ್ಲಿನಿಂದ ನೀರು ಸುರಿಯುವುದನ್ನು ಕಂಡು ಹರುಷದಿಂದ ಇಬ್ಬರು ನಲ್ಲಿ ಕೆಳಗೆ ಸ್ನಾನಕ್ಕಿಳಿದು ಬಿಸಿಲ ತಾಪ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಹುಡುಗನೊಬ್ಬ ನೀರು ಹಿಡಿಯುವ ಸಾಹಸ ಮಾಡುತ್ತಿದ್ದಾನೆ. PTI Photo by Swapan Mahapatra

ಆಪಲ್ ಬೇಕಾ ಆಪಲ್
ಸೂರತ್: ಕೃಷಿ ಬಜಾರ್ ಉದ್ಘಾಟಿಸಿದ ನಂತರ ಅಚ್ಚುಕಟ್ಟಾಗಿ ಇಟ್ಟಿರುವ ಸೇಬು ಹಣ್ಣನ್ನು ನೋಡುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ತೆಲಂಗಾಣಕ್ಕಾಗಿ ಆಗ್ರಹ
ಹೈದರಾಬಾದ್: ತೆಲಂಗಾಣ ಪರ ಹೋರಾಟ ನಡೆಸಿರುವ ಉಸ್ಮಾನಿಯಾ ವಿವಿಯ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಚಲೋ ಅಸೆಂಬ್ಲಿ ಹೆಸರಿನಲ್ಲಿ ವಿದ್ಯಾರ್ಥಿ ಸಂಘಟನೆಗಳು ಬುಧವಾರ ಭಾರಿ ಗದ್ದಲ ಮಾಡಿದ್ದವು.

ನೆಲ್ಸನ್ ಮಂಡೇಲಾ ದೇಹ ಸ್ಥಿತಿ
ಪ್ರಿಟೋರಿಯಾ: ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲ(94) ಆರೋಗ್ಯ ಸುಧಾರಣೆಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ವರ್ಣ ಬೇಧ ನೀತಿ ವಿರುದ್ಧ ಹೋರಾಟ ನಡೆಸಿದ ಮಂಡೇಲ ಅವರ ಆರೋಗ್ಯ ಸುಧಾರಿಸುತ್ತಿದೆ.
ಚಿತ್ರದಲ್ಲಿ ಮಂಡೇಲ ಅವರ ಮೊಮ್ಮಗಳು ಟುಕ್ ವಿನಿ ಮಂಡೇಲ(ಎಡ), ಮಗಳು ಮಕಜಿವೆ ಮಂಡೇಲ(ಮಧ್ಯ) ಮತ್ತೊಬ್ಬ ಮೊಮ್ಮಗಳು ಎನ್ ದಿಲೆಕಾ ಮಂಡೆಲ
ಮಳೆಗೆ ಕ್ರಿಕೆಟ್ ಪಂದ್ಯ ಆಹುತಿ
ಬರ್ಮಿಂಗ್ ಹ್ಯಾಂ: ಬುಧವಾರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಏಕ ದಿನ ಕ್ರಿಕೆಟ್ ಪಂದ್ಯ ಮಳೆಯ ಕಾರಣ ರದ್ದಾಯಿತು. ಪಂದ್ಯ ನಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರೇಕ್ಷಕರು ಮೈದಾನದಲ್ಲಿ ಕುಳಿತು ಕಾದಿದ್ದು ಹೀಗೆ.

ಹಣ ವಿನಿಮಯ ದರ
ಭಾರತದಲ್ಲಿ ಈಗ ರುಪಾಯಿ ಮೌಲ್ಯ ಕುಸಿತದ್ದೇ ದೊಡ್ಡ ಸುದ್ದಿ. ವಿವಿಧ ದೇಶಗಳ ಹಣ ವಿನಿಮಯ ದರಗಳನ್ನು ಒಟ್ಟುಗೂಡಿಸಿ ಪಿಟಿಐ ಗ್ರಾಫಿಕ್ಸ್ ಚಿತ್ರದಲ್ಲಿ ನೀಡಲಾಗಿದೆ

ಫುಟ್ಬಾಲ್ ವಿಶ್ವಕಪ್
ರಿಯೋ ಡಿ ಜಿನೈರೋ: ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಇಂದಿನಿಂದ ಒಂದು ವರ್ಷ ಮಾತ್ರ ಇದೆ, ಬ್ರೆಜಿಲ್ ನಲ್ಲಿ ಜೀವಂತ ದಂತಕಥೆ ಪೀಲೆ ಅವರು ಕೌಂಟ್ ಡೌನ್ ಟೈಮರ್ ಕೆಳಗೆ ನಿಂತು ಕೈ ಬೀಸುತ್ತಿದ್ದಾರೆ.












Click it and Unblock the Notifications