KRS ದಾಖಲೆ: ಪಾತಾಳ ಕಚ್ಚಿದ ಕಾವೇರಿ ನೀರು

ಮಂಡ್ಯ, ಜೂನ್ 13- ಈ ದಾಖಲೆ ಖಂಡಿತ ನಮಗೆ ಬೇಡ; ನಮ್ಮ ಕಾವೇರಿ ಮಾತೆಗೂ ಇದು ಶ್ರೇಯಸ್ಕರವಲ್ಲ. ಬುಧವಾರ ಬೆಳಗ್ಗೆ 6 ಗಂಟೆಯ ವೇಳೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ 62.92 ಅಡಿಗೆ ಕುಸಿದಿದೆ.

ಇದು ಕಳೆದ 68 ವರ್ಷಗಳಲ್ಲೇ ಕನಿಷ್ಠ ಮಟ್ಟದ ನೀರು ಶೇಖರಣೆಯಾಗಿದೆ. 1945ರಲ್ಲಿ 63.28 ಅಡಿ ನೀರಿತ್ತು. 2003ರ ಮೇ 10ರಂದು ನೀರಿನ ಪ್ರಮಾಣ 65 ಅಡಿಯಿತ್ತು. ಇನ್ನು 2005ರಲ್ಲಿ 71.54 ಅಡಿಯಿತ್ತು.

ಅಂದಹಾಗೆ ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯವಿರುವುದು 124.8 ಅಡಿ. ಕರ್ನಾಟಕದ ಮಟ್ಟಿಗೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಜನರಿಗೆ ನೀರು ಪೂರೈಸುವ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಸೆಕೆಂಡಿಗೆ 227 ಚದರ ಅಡಿ ಪ್ರಮಾಣದಲ್ಲಿ ನೀರಿನ ಒಳಹರಿವು ಇತ್ತು. ಹೊರಹರಿವು 764 ಕ್ಯುಸೆಕ್ಸ್ ದಾಟಿತ್ತು.

mandya-krs-water-level-dips-to-record-68-year-low

ಆದರೆ, ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಅಗತ್ಯವಿರುವ ಕುಡಿಯುವ ನೀರು ಪ್ರಮಾಣ ದಿನವೊಂದಕ್ಕೆ 1,200 ಕ್ಯುಸೆಕ್ಸ್. ಈಗಿನ ಸಂಗ್ರಹಣೆಯಲ್ಲಿ ಇನ್ನು 10 ದಿನಗಳ ಕಾಲವಷ್ಟೇ ಕುಡಿಯುವ ನೀರು ಪೂರೈಸಬಹುದು.

ಪರಿಸ್ಥಿತಿ ಹೀಗೇ ಮುಂದುವರಿದರೆ ಜೂನ್ ಅಂತ್ಯಕ್ಕೆ ನೀರಿಗೆ ಆಹಾಕಾರ ಕಾಣಿಸಿಕೊಳ್ಳಲಿದೆ ಎಂದು Cauvery Neeravari Nigam Ltd (CNNL), Executive Engineer ವಿಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಸಮಾಧಾನಕರ ಸಂಗತಿಯೆಂದರೆ ಮಡಿಕೇರಿಯಲ್ಲಿ ಕಾವೇರಿ ನದಿ ಪಾತ್ರಗಳಲ್ಲಿ ಒಂದೆರಡು ದಿನದಿಂದ ಉತ್ತಮ ಮಳೆಯಾಗುತ್ತಿದೆ.

2012ರ ಏಪ್ರಿಲ್ 9ರಂದು 93.63 ನೀರಿತ್ತು. 2012ರ ಜೂನ್ 1ರಂದು 110 ಅಡಿಯಿತ್ತು. ಆದರೆ ಸುಪ್ರೀಂಕೋರ್ಟಿನ ಹಂಸಕ್ಷೀರ ನ್ಯಾಯದಲ್ಲಿ ನಮಗೆ ನೀರು ಇಲ್ಲ ಕ್ಷೀರವೂ ಇಲ್ಲದಂತಾಗಿದೆ. ಒಂದೇ ಸಮನೆ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ KRS ಇಂದು ದಾಖಲೆಯ ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+