Get Updates
Get notified of breaking news, exclusive insights, and must-see stories!

ಕಾವೇರಿ ಅಧಿಸೂಚನೆ ಜಯಲಲಿತಾಗೆ ಬರ್ತ್ ಡೆ ಗಿಫ್ಟ್

cauvery-tribunal-final-award-birth-day-to-jayalalithaa
ಚೆನ್ನೈ, ಫೆ.20: ತಮಿಳುನಾಡಿನ ಜಯಾಗೆ ಇನ್ನೂ ನಾಲ್ಕು ದಿನ ಇದೆ ಹುಟ್ಟುಹಬ್ಬಕ್ಕೆ. ಆದರೆ ಸುಪ್ರೀಂ ಆಣತಿಯಂತೆ ಕೇಂದ್ರ ಸರಕಾರವು ನ್ಯಾಯಮಂಡಳಿ ತೀರ್ಪನ್ನು ಅಧಿಸೂಚನೆ ಹೊರಡಿಸುವ ಮೂಲಕ ಇಂದೇ ತಮಿಳ್ ಸೆಲ್ವಿ ಜಯಾಗೆ ಬರ್ತ್ ಡೆ ಗಿಫ್ಟ್ ಕೊಟ್ಟುಬಿಟ್ಟಿದೆ.

ಆಯಮ್ಮನೂ ಅಷ್ಟೇ. ಈ ಅವಕಾಶವನ್ನು ಸರಿಯಾಗಿಯೇ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ. ಕೇಂದ್ರ ಸರಕಾರ ಕೊನೆಗೂ ಕಾವೇರಿ ಅಧಿಸೂಚನೆ ಹೊರಡಿಸಿದ್ದು ತನ್ನ ಬುದ್ಧಿಮತ್ತೆ/ಶ್ರಮಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.

ಇತ್ತ, ಕಾವೇರಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಕರ್ನಾಟಕಕ್ಕೆ ಮರಣಶಾಸನವಾಗಿದ್ದರೆ ಅತ್ತ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಹುಟ್ಟುಹಬ್ಬದ ಬಳುವಳಿಯಾಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.

ಅತ್ತ ಕೇಂದ್ರ ಸರಕಾರ ಕಾವೇರಿ ಅಧಿಸೂಚನೆಯನ್ನು ಹೊರಡಿಸುತ್ತಿದ್ದಂತೆ ಇತ್ತ ಸುದ್ದಿಗಾರರೊಂದಿಗೆ ಮಾತನಾಡಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಎಂದಿನಂತೆ 'ಇದು ತಮ್ಮದೇ ಜಯಾ' ಎಂದು ಹೇಳಿಕೊಂಡಿದ್ದಾರೆ.

ಬಳಿಕ, ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಯಾ 'ಈ ಜಯದಿಂದಲೇ ಸುಮ್ಮನಾಗಿಬಿಡಬೇಡಿ. ಜನರ ಮನ ಗೆಲ್ಲುವಂತೆ ಕೆಲಸ ಮಾಡಿ. ಜನರಿಗಾಗಿ ದುಡಿಯಿರಿ. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ 40 ಸಂಸದೀಯ ಸ್ಥಾನಗಳನ್ನು ತನಗೆ ದಕ್ಕಿಸಿಕೊಡಿ. ಆಗ ಇಂತಹ ಹತ್ತಾರು ಕಾವೇರಿ ಜಯವನ್ನು ತಮಿಳುನಾಡು ಪರವಾಗುವಂತೆ ಮಾಡಬಹುದು' ಎಂದು AIADMK ಅಧಿನಾಯಕಿ ತಮ್ಮ ಪಕ್ಷದ ಕಟ್ಟಾಳುಗಳಿಗೆ ತಿಳಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+