ಸದನ ಸ್ವಾರಸ್ಯ : ವಚನದಿಂದ ಸಿದ್ದುಗೆ ಗುದ್ದಿದ ದತ್ತಾ

vidhana soudha
ಬೆಂಗಳೂರು, ಜೂ.11 : ವಿಧಾನಸಭೆಯಲ್ಲಿ ಮಂಗಳವಾರ ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತಾ ಸಿಎಂ ಸಿದ್ದರಾಮಯ್ಯ ಅವರಿಗೆ ವಚನದ ಮೂಲಕ ಟಾಂಗ್ ಕೊಟ್ಟರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ ಪ್ರಾರಂಭಿಸಿದ ದತ್ತಾ, ಸ್ವ ರಚಿತ ಕವನವನ್ನು ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಗುದ್ದು ನೀಡಿದರು.

ಮಾತು ಪ್ರಾರಂಭಿಸಿದ ದತ್ತಾ, "ಕಾಂಗ್ರೆಸ್ ಸರ್ಕಾರದೊಳಗೆ ಜನತಾ ಪರಿವಾರವನ್ನು ಕಾಣದಂತೆ ತುರುಕಿರೆ, ಆಪ್ತರಿಗೆ ಆಯಕಟ್ಟಿನ ಖಾತೆಗಳನ್ನು ಸದ್ದಿಲ್ಲದೇ ನೀಡಿರೆ, ಹಿರಿಯ ನಾಯಕರನ್ನು ಅಲಕ್ಷಿಸಿಯೂ ಅಮ್ಮನ ಅಂಕಿತ ಪಡದೆ ಬಿಟ್ಟ ಅಣ್ಣ... ಸಿದ್ರಾಮಣ್ಣ". ಎಂದು ಸಿದ್ದರಾಮಯ್ಯ ಅವರಿಗೆ ಗುದ್ದು ನೀಡಿದರು.

ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ, ದುರುದ್ದೇಶದಿಂದ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿಸಬೇಡಿ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಮುಂದಿನ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಪರಿಷತ್ ನಲ್ಲಿ ಗಜ ಕಾಳಗ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಿಧಾನ ಪರಿಷತ್ ನಲ್ಲಿ ಗಜ ಕಾಳಗ ನಡೆಯಿತು. ಹಾಸನ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಆನೆಗಳ ಹಾವಳಿ ತಡೆಗಟ್ಟಲು ಕಾರಿಡಾರ್ ನಿರ್ಮಿಸುತ್ತಿದೆ ಎಂದು ಹೇಳಿತ್ತು. ಇಲ್ಲಿಯವರೆಗೂ ಕಾರಿಡಾರ್ ನಿರ್ಮಿಸಿಲ್ಲ ಎಂದು ಬಿಜೆಪಿಯ ಬಿ.ಶಿವಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಎಸ್ಎಂಎಸ್ : ಮಂಗಳವಾರ ವಿಧಾನಪರಿಷತ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ ನಂತರ ಸಿದ್ದರಾಮಯ್ಯ ಘೋಷಿಸಿದ ಯೋಜನೆಗಳ ಕುರಿತು ಬಂದಿರುವ ಎಸ್ಎಂಎಸ್ ಓದಿ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ನಗುವಿನ ಅಲೆ ಉಕ್ಕಿಸಿದರು. "ವಾಸಕ್ಕೆ ಆಶ್ರಯ ಮನೆಯಿರಲು, ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತ್ತಿರಲು, ರಾತ್ರಿ ನಷೆಗೆ ಅಗ್ಗದ ಮದ್ಯವಿರಲು, ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸಿದ್ದರಾಮಯ್ಯ" ಎಂಬ ಎಸ್ಎಂಎಸ್ ಓದಿದ ಹೊರಟ್ಟಿ ಸದನಲ್ಲಿ ನಗು ಎಬ್ಬಿಸಿದರು.

ಆಡಳಿತ ಪಕ್ಷದ ಸದಸ್ಯರು ಹಿಂದೆ ನಿಮ್ಮ ಸರ್ಕಾರ ಮಾಡಿದ್ದೇನು ಎಂದು ಶಿವಪ್ಪ ಅವರನ್ನು ಕೆಣಕಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗಜ ಕಾಳಗ ನಡೆಯಿತು. ಈ ವಿಷಯವಾಗಿಯೇ ಸುಮಾರು ಅರ್ಥಗಂಟೆಗೂ ಹೆಚ್ಚುಕಾಲ ಚರ್ಚೆ ನಡೆಯಿತು.

ಸಿದ್ದು ಉತ್ತರರಿಂದ ಸದನ ಆರಂಭ : ವಿಧಾನಸಭೆ ಅಧೀವೇಶನದ ಒಂಭತ್ತನೇ ದಿನ ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರಾರಂಭವಾಯಿತು. ಅಧಿವೇಶನ ಪ್ರಾರಂಭವಾಗುವುದಕ್ಕೂ ಮೊದಲು ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷಗಳು ಅಧಿವೇಶನಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಇಂದು ಉತ್ತರ ನೀಡುತ್ತಿದ್ದಾರೆ.

ಶಾಸಕರ ಕಿವಿ ಹಿಂಡಿದ ಸಿದ್ದು : ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿವೇಶನಕ್ಕೆ ಗೈರು ಹಾಜರಾಗುವ ಶಾಸಕರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು. ಕಡ್ಡಾಯವಾಗಿ ಸದನದಲ್ಲಿ ಎಲ್ಲಾ ಶಾಸಕರು ಹಾಜರಿರಬೇಕು ಎಂದು ತಾಕೀತು ಮಾಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾವ ಶಾಸಕರು ಗೈರು ಹಾಜರಾಗಬಾರದು ಎಂದು ಶಾಸಕರಿಗೆ ಮೌಖಿಕ ಆದೇಶ ನೀಡಿದರು.

ಸಿದ್ದು ಹೊಗಳಿದ ಕಾರಜೋಳ : ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಗೋವಿಂದ ಎಂ. ಕಾರಜೋಳ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳುವ ಮೂಲಕ ಬಿಜೆಪಿ ಶಾಸಕರಿಗೆ ಕೊಂಚ ಇರುಸು ಮುರುಸು ಉಂಟು ಮಾಡಿದ ಪ್ರಸಂಗ ನಡೆಯಿತು.

ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿಯಿಂದ ಅಂಬೆಗಾಲಿಟ್ಟುಕೊಂಡು ಮುಖ್ಯಮಂತ್ರಿಯ ಹುದ್ದೆಯವರೆಗೆ ಬೆಳೆದಿದ್ದಾರೆ ಎಂದು ಹೋಗಳಲು ಪ್ರಾರಂಭಿಸಿದ ಕಾರಜೋಳ, ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಟ್ಟು, ಎಲ್ಲಾ ಜಾತಿ, ಉಪ ಜಾತಿಯವರಿಗೆ ತಮ್ಮ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅನ್ನುವುದನ್ನು ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ ಎಂದು ಹೊಗಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+