ಚಿತ್ರಗಳಲ್ಲಿ : ಮುಂಬೈ ಮಳೆ, ಪ್ಯಾರೀಸ್ ನಲ್ಲಿ ನಡಾಲ್ ಕಲೆ

ಮುಂಬೈ, ಜೂ.10: ನೈರುತ್ಯ ಮುಂಗಾರು ನಿರೀಕ್ಷೆಗೂ ಮುನ್ನ ಆರ್ಭಟಿಸುತ್ತಾ ಒಂದು ದಿನ ಮುಂಚಿತವಾಗಿ ಮುಂಬಯಿಗೆ ಪ್ರವೇಶ ಪಡೆದಿದ್ದರಿಂದ ಮುಂಬೈ ತತ್ತರಿಸಿದೆ. ಭಾನುವಾರ ಆರಂಭವಾದ ಅರ್ಭಟ ಸೋಮವಾರ ಕೂಡಾ ಮುಂದುವರೆದಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಮುಂಬೈನಲ್ಲಿ 32 ಎಂಎಂ ಮತ್ತು ಉಪನಗರಗಳಲ್ಲಿ 36.7 ಎಂಎಂ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಹೇಳಿದೆ.ಮುಂದಿನ 48 ಗಂಟೆಯೊಳಗೆ ಮುಂಬೈ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದೂ ಮುನ್ಸೂಚನೆ ನೀಡಿವೆ.

ದಾದಾರ್ ಸೇರಿದಂತೆ ತಗ್ಗು ಪ್ರದೇಶಗಳಾದ ಜೋಗೇಶ್ವರಿ, ವಿಕ್ರೋಲಿ, ಮಜ್ ಗಾಂವ್, ಮಲಾಡ್ ಮತ್ತು ಇತರ ಪ್ರದೇಶಗಳಲ್ಲಿ ನೀರು ತುಂಬಿದೆ. ಸೋಮವಾರ ಬೆಳಗ್ಗೆ ರಸ್ತೆಗಳಲ್ಲಿ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಶ್ಚಿಮ ಮತ್ತು ಮಧ್ಯ ರೈಲ್ವೇ ಮಾರ್ಗಗಳಲ್ಲಿ ರೈಲುಗಳು ನಿಗದಿತ ಅವಧಿ ಪ್ರಕಾರ ಸಂಚಾರ ನಡೆಸುತ್ತಿದ್ದವು. ವಿಮಾನ ಹಾರಾಟ ಸ್ಥಗಿತಗೊಂಡಿದೆ.

ಉಳಿದಂತೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ 8ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದು ನಿಂತ ಸ್ಪಾನಿಷ್ ವೀರ ರಫೆಲ್ ನಡಾಲ್ ಚಿತ್ರ, ಶೇನ್ ವಾರ್ನೆ, ಎಲೆಜಬೆತ್ ಹರ್ಲೆ ಹಾಗೂ ಮೈಕಲ್ ವಾಗನ್ ಮತ್ತೆ ಫೀಲ್ಡಿಗಿಳಿದಿದ್ದಾರೆ. ಮಾಂಟ್ರಿಯಲ್ ನಲ್ಲಿ ಎಫ್ 1 ಗೆದ್ದಿದ್ದು ಯಾರು, ಜಿದಾನೆ ಮತ್ತೆ ಅಂಗಳಕ್ಕೆ ಎಂಟ್ರಿ, ಜರ್ಮನಿಯಲ್ಲಿ ಮುಂದುವರೆದ ಪ್ರವಾಹ ಎಲ್ಲವೂ ಇಂದಿನ ಚಿತ್ರಗಳ ಪ್ಯಾಕೇಜಿನಲ್ಲಿದೆ ನೋಡಿ...

ಮುಂಬೈ ಮಹಾ ಮಳೆ

ಮುಂಬೈ ಮಹಾ ಮಳೆ

ಮುಂಬೈ : ರೈಲುಗಳ ಸ್ಥಗಿತದಿಂದ ರಸ್ತೆಗಳಲ್ಲಿ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, BEST ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.

ಮಳೆಯಲ್ಲಿ ಸಾಗಿದೆ ಜೀವನ

ಮಳೆಯಲ್ಲಿ ಸಾಗಿದೆ ಜೀವನ

ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಒಂದು ವಾರದಿಂದ ಸುರಿದ ಮುಂಗಾರು ಪೂರ್ವ ಮಳೆ ಅನಾಹುತಗಳಲ್ಲಿ 10 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ನಡಾಲ್ ಗೆ ಕಿರೀಟ

ನಡಾಲ್ ಗೆ ಕಿರೀಟ

ಜಮೈಕಾದ ವೇಗ 'ದೂತ' ಉಸೇನ್ ಬೋಲ್ಡ್ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ನಡಾಲ್

ಕ್ಷಮಿಸಿ ಅಡ್ವಾಣಿ ಇಲ್ಲಿಲ್ಲ

ಕ್ಷಮಿಸಿ ಅಡ್ವಾಣಿ ಇಲ್ಲಿಲ್ಲ

ಗೋವಾದ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಂತರ ಅಧ್ಯಕ್ಷ ರಾಜನಾಥ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಸದಸ್ಯರು

ಜಿದಾನೆ ಮತ್ತೆ ಅಂಗಳಕ್ಕೆ

ಜಿದಾನೆ ಮತ್ತೆ ಅಂಗಳಕ್ಕೆ

ಸ್ಪೇನ್: ರಿಯಲ್ ಮ್ಯಾಡ್ರಿಡ್ ಹಾಗೂ ಫ್ರಾನ್ಸ್ ನ ದಿಗ್ಗಜ ಜಿನೆದಿನ್ ಜಿದಾನ್ ಮತ್ತೊಮ್ಮೆ ಯುವೆಂಟಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದರು. ಲೆಜೆಂಡ್ಸ್ ಪಂದ್ಯದಲ್ಲಿ ಪಾಲ್ಗೊಂಡು ಉತ್ತಮ ಆಟ ಪ್ರದರ್ಶಿಸಿದರು.

ದೆಹಲಿಯಿಂದ ಬಂದ ಚಿತ್ರ

ದೆಹಲಿಯಿಂದ ಬಂದ ಚಿತ್ರ

ಆಸ್ಟ್ರೇಲಿಯಾದ ಜಲಸೇನೆ ಮುಖ್ಯಸ್ಥರ ಜೊತೆ ಭಾರತದ ಜಲಸೇನೆ ಮುಖ್ಯಸ್ಥರು

ಮುಂಗಾರು ಆಗಮನ

ಮುಂಗಾರು ಆಗಮನ

ಮುಂಗಾರು ಪ್ರವೇಶವನ್ನು ವೀಕ್ಷಿಸುತ್ತಿರುವ ಮುಂಬೈ ಜನತೆ, ಚಿತ್ರಕೃಪೆ: ಲೈವ್ ಮಿಂಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+