ಅಡ್ವಾಣಿ ಅವರ ರಾಜೀನಾಮೆ ಪತ್ರದಲ್ಲೇನಿದೆ?

What is there in LK Advani's resignation letter
ಆತ್ಮೀಯ ರಾಜನಾಥ್ ಸಿಂಗ್,

ಜೀವನಪರ್ಯಂತ ಜನ ಸಂಘ ಮತ್ತು ಭಾರತೀಯ ಜನತಾ ಪಕ್ಷಕ್ಕಾಗಿ ಕೆಲಸ ಮಾಡಿದ್ದು ನನಗೆ ಭಾರೀ ಹೆಮ್ಮೆಯ ಸಂಗತಿಯಾಗಿತ್ತು ಮತ್ತು ಅನಂತ ಸಂತೃಪ್ತಿಯನ್ನು ನೀಡಿದೆ.

ಆದರೆ, ಕೆಲ ಸಮಯದಿಂದ ಪಕ್ಷ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮತ್ತು ಪಕ್ಷ ಸಾಗುತ್ತಿರುವ ದಾರಿಯ ಬಗ್ಗೆ ರಾಜಿಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಡಾ. ಮುಖರ್ಜಿಜಿ, ಪಂಡಿತ್ ದೀನದಯಾಳ್, ನಾನಾಜಿ ಮತ್ತು ವಾಜಪೇಯಿಜಿ ಅವರು ಕಟ್ಟಿದ ಆದರ್ಶಪ್ರಾಯವಾದ ಪಕ್ಷ ಇದಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಅವರಿಗೆ ದೇಶ ಮತ್ತು ದೇಶದ ಜನರ ಬಗ್ಗೆ ಅಪಾರವಾದ ಕಾಳಜಿಯಿತ್ತು. ಆದರೆ, ಪಕ್ಷದ ಹಲವಾರು ನಾಯಕರು ಇಂದು ಸ್ವಂತ ಕಾರ್ಯಸೂಚಿಯನ್ನು ಹೊಂದಿದ್ದಾರೆ.

ಆದ್ದರಿಂದ ಪಕ್ಷದ ಎಲ್ಲ ಮೂರು ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಅವು, ರಾಷ್ಟ್ರೀಯ ಕಾರ್ಯಕಾರಣಿ, ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ. ಈ ಪತ್ರವನ್ನು ನನ್ನ ರಾಜೀನಾಮೆ ಎಂದು ಪರಿಗಣಿಸಬೇಕಾಗಿ ಕೋರುತ್ತಿದ್ದೇನೆ.

ಇಂತಿ ನಿಮ್ಮ ವಿಶ್ವಾಸಿ,

ಎಲ್.ಕೆ. ಅಡ್ವಾಣಿ

ಬಿಜೆಪಿಯ ಭೀಷ್ಮ, ಉಕ್ಕಿನ ರಾಜಕಾರಣಿ ಎಂದು ಕರೆಯಿಸಿಕೊಂಡಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರ ರಾಜೀನಾಮೆ ಪತ್ರದಲ್ಲಿ ಪಕ್ಷದ ಕಾರ್ಯನಿರ್ವಹಣೆ ಬಗ್ಗೆ, ನಾಯಕರ ಬಗ್ಗೆ ಸಿಟ್ಟು, ಅಸಹನೆ ತಾಂಡವವಾಡುತ್ತಿದೆ. ಪಕ್ಷ ಹಿಂದಿನಂತಿಲ್ಲ ಎಂದು ಅವರು ನೋವು ಕೂಡ ತೋಡಿಕೊಂಡಿದ್ದಾರೆ.

ಆದರೆ, ರಾಜೀನಾಮೆ ಪತ್ರವನ್ನು ಬಿಜೆಪಿ ಸ್ವೀಕರಿಸುತ್ತದಾ? ಎಂಬುದು ಸದ್ಯದ ಪ್ರಶ್ನೆ. ಹಾಗೆಯೆ, ಪಕ್ಷದ ಬಗ್ಗೆ ಬೇಸರವೇ ಆಗಿದ್ದರೆ ರಾಜೀನಾಮೆ ನೀಡುವ ಬದಲು ರಾಜಕೀಯ ಸನ್ಯಾಸವನ್ನೇ ಸ್ವೀಕರಿಸಬಹುದಿತ್ತಲ್ಲ ಎಂಬ ಪ್ರಶ್ನೆಯನ್ನೂ ಓದುಗರು ಕೇಳುತ್ತಿದ್ದಾರೆ. ಸಂಸತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವೇಕೆ? [ರಾಜೀನಾಮೆ ಬಗ್ಗೆ ಯಾರು ಏನು ಹೇಳಿದರು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+