ಭಾರತದ ಇಮೇಲ್ ಮೇಲೆ ಅಮೆರಿಕದ ಕಣ್ಣು

ಬಿಟ್ರಿಶ್ ಪತ್ರಿಕೆ ಗಾರ್ಡಿಯನ್ ಭಾನುವಾರದ ತನ್ನ ವರದಿಯಲ್ಲಿ, ಅಮೆರಿಕಾದ ಎನ್‌ಎಸ್‌ಎಯ ತೀವ್ರ ಕಣ್ಗಾವಲಿನಲ್ಲಿರುವ ವಿಶ್ವದ ಐದು ರಾಷ್ಟ್ರಗಳ ಪೈಕಿ ಭಾರತವೂ ಸೇರಿದೆ. ದೇಶದ ಇಂಟರ್ ನೆಟ್ ಬಳಕೆದಾರ ಇ-ಮೇಲ್, ಫೇಸ್‌ಬುಕ್, ಟ್ವಿಟರ್ ನಂತಹ ಸಾಮಾಜಿಕ ತಾಣಗಳ ಸಂದೇಶಗಳ ಮೇಲೆ ಕಣ್ಣಿಡಲಾಗಿದೆ ಎಂದು ಹೇಳಿದೆ.
2013 ಮಾರ್ಚ್‌ನಲ್ಲಿ ಅಮೆರಿಕಾದ ಎನ್‌ಎಸ್‌ಎಯು ಭಾರತದಲ್ಲಿನ ಕಂಪ್ಯೂಟರ್ ಜಾಲಗಳಿಂದ ಸುಮಾರು 630 ಕೋಟಿಗೂ ಹೆಚ್ಚು ಗುಪ್ತಚರ ಮಾಹಿತಿ ತುಣುಕುಗಳನ್ನು ಸಂಗ್ರಹಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ. ಅಮೆರಿಕಾದ ಕಣ್ಗಾವಲಿನಲ್ಲಿರುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ.
ಇರಾನ್, ಪಾಕಿಸ್ತಾನ ಮೊದಲು : ಅಮೆರಿಕಾದ ಇರಾನ್ ಮತ್ತು ಪಾಕಿಸ್ತಾನ ದೇಶಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಿದೆ. ಇರಾನ್ ದೇಶದ 1400 ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಪಾಕಿಸ್ತಾನದಿಂದ 1350 ಮಾಹಿತಿಗಳನ್ನು ಕಲೆಹಾಕಲಾಗಿದೆ.
ಜೋರ್ಡಾನ್ ಮತ್ತು ಈಜಿಪ್ಟ್ ಮತ್ತು ಭಾತರ ಕೊನೆಯ ಮೂರು ಸ್ಥಾನಗಳಲ್ಲಿವೆ. ಪಾಕಿಸ್ತಾನದ ನೆರೆಯ ದೇಶವಾದ್ದರಿಂದ ಭಾರತದ ಮಾಹಿತಿಗಳನ್ನು ಸಂಗ್ರಹಿಸುತ್ತಿರಬಹುದು ಎಂದು ಗಾರ್ಡಿಯನ್ ವಿಶ್ಲೇಷಣೆ ನಡೆಸಿದೆ.
ಹೊಸ ಸಾಫ್ಟವೇರ್ : ವಿವಿಧ ದೇಶಗಳ ಗುಪ್ತಚರ ಮಾಹಿತಿಯನ್ನು ದಾಖಲಿಸಿಕೊಳ್ಳಲು ಹಾಗೂ ವಿಶ್ಲೇಷಿಸಲು ಎನ್‌ಎಸ್‌ಎ 'ಬೌಂಡ್‌ಲೆಸ್ ಇನ್‌ಫಾರ್ಮಾಂಟ್' ಎಂಬ ಹೆಸರಿನ ಈ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.
ಯಾಹೂ, ಮೈಕ್ರೋಸಾಫ್ಟ್, ಸ್ಕೈಪ್, ಫೇಸ್‌ಬುಕ್, ಯೂಟ್ಯೂಬ್ ಹಾಗೂ ಪಾಲ್‌ಟಾಕ್ ಬಳಕೆದಾರರ ದತ್ತಾಂಶಗಳನ್ನು ಅಮೆರಿಕ ಸರ್ಕಾರವು ನೇರವಾಗಿ ಸಂಗ್ರಹಿಸುತ್ತಿದೆ. ಸಂಸ್ಥೆಗಳಿಗೆ ತಿಳಿಯದಂತೆ ಅಮೆರಿಕಾ ಮಾಹಿತಿ ಸಂಗ್ರಹಿಸುತ್ತಿರಬಹುದು ಎಂದು ಪತ್ರಿಕೆ ಸಂದೇಹ ವ್ಯಕ್ತಪಡಿಸಿದೆ.












Click it and Unblock the Notifications