ಸ್ಪಾಟ್ ಫಿಕ್ಸಿಂಗ್: ರಾಜ್ ಕುಂದ್ರಾ ಅಮಾನತು

ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ರಾಜ್ ಕುಂದ್ರಾ ಅವರನ್ನು 10-12 ಗಂಟೆ ವಿಚಾರಣೆಗೆ ಒಳಪಡಿಸಿದ್ದರು. ರಾಜ್ ಕುಂದ್ರಾ ಅವರು ಬೆಟ್ಟಿಂಗ್ ಮಾಡಿದ್ದನ್ನು ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.
ಕುಂದ್ರಾ ಆಪ್ತ ಗೆಳೆಯ ಉಮೇಶ್ ಗೊಯಿಂಕಾ ಅವರು ಕುಂದ್ರಾ ಹೆಸರು ದುರ್ಬಳಕೆ ಮಾಡಿಕೊಂಡರು ಎಂದು ಶಿಲ್ಪಾ ಹೇಳಿದ್ದರು. ನಂತರ ಶಿಲ್ಪಾ ಶೆಟ್ಟಿ ಕೂಡಾ ಬೆಟ್ಟಿಂಗ್ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ ಕುಂದ್ರಾ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದ್ದು, ದೇಶ ಬಿಟ್ಟು ತೆರಳದಂತೆ ಆದೇಶಿಸಲಾಗಿತ್ತು.
ರಾಜ್ ಕುಂದ್ರಾ ಬಂಧನವನ್ನು ತಳ್ಳಿ ಹಾಕಿದ ದೆಹಲಿ ಪೊಲೀಸರು, ಸರಿಯಾದ ಸಾಕ್ಷಿ ಸಿಕ್ಕಿಲ್ಲ ಎಂದಿದ್ದರು. ಬ್ರಿಟಿಷ್ ನಾಗರೀಕ ರಾಜ್ ಕುಂದ್ರಾ ಬಂಧನ ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗಿದೆ. ಆದರೆ,ಪೊಲೀಸರಿಗೂ ಮುಂಚಿತವಾಗಿ ಜಗಮೋಹನ್ ದಾಲ್ಮಿಯಾ ನೇತೃತ್ವ ಬಿಸಿಸಿಐ ಅಧಿಕಾರಿಗಳು ಈ ಕ್ರಮವನ್ನು ಜರುಗಿಸಿರುವುದನ್ನು ಕುಂದ್ರಾ ಅವರ ಪರ ವಕೀಲರು ಖಂಡಿಸಿದ್ದಾರೆ.












Click it and Unblock the Notifications