ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು

ಆಕೆ ತೀರಿಹೋಗಿ ನಾಲ್ಕು ದಶಕಗಳೇ ಸಂದುಹೋಗಿವೆ. ಇಷ್ಟು ವರ್ಷಗಳ ಕಾಲ ಸುದ್ದಿಯಲ್ಲಿ ಇರದಿದ್ದ ಮನುಬೆನ್ ಅವರು ಇದ್ದಕ್ಕಿದ್ದಂತೆ ಸುದ್ದಿಗೆ ಗ್ರಾಸವಾಗಿದ್ದಾರೆ. 1943ರಿಂದ ಗಾಂಧೀಜಿ ಹತ್ಯೆಯಾಗಿ ಇಪ್ಪತ್ತು ದಿನಗಳವರೆಗೆ ಪ್ರತಿದಿನವೂ ಬರೆದ ಡೈರಿ ಅನೇಕ ವಿಸ್ಮಯಕಾರಿ ಮತ್ತು ತಿಳಿದಿರದ 'ನಗ್ನ' ಸತ್ಯ ಸಂಗತಿಗಳನ್ನು ಬಯಲು ಮಾಡಿದೆ. ಎರಡು ಸಾವಿರ ಪುಟಗಳಷ್ಟು ಇರುವ 10 ಡೈರಿಗಳ ಹೂರಣವನ್ನು ಇಂಡಿಯಾ ಟುಡೆ ಪತ್ರಿಕೆ ಪ್ರಕಟಿಸಿ ಸಂಚಲವನ್ನೆಬ್ಬಿಸಿದೆ.
ಗಾಂಧೀಜಿ ತನ್ನನ್ನು ತಾಯಿಯಂತೆ ಸಲಹುತ್ತಿದ್ದರು ಎಂದು ಹೇಳಿರುವ ಮನುಬೆನ್ ಯಾರಿಗೂ ತಿಳಿಯದ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಕಟು ಬ್ರಹ್ಮಚರ್ಯ ಪ್ರಯೋಗದ ಮುಖಾಂತರ ಮಾನವೀಯತೆಯ ಪಾಠಗಳನ್ನು ಕಲಿಸಿದ ಗಾಂಧೀಜಿಯವರ ಬಗ್ಗೆ ಯಾರಿಗೂ ಹಗುರವಾಗಿ ಮಾತನಾಡುವ ಹಕ್ಕಿಲ್ಲ, ಅದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಮನೆಯನ್ನು ಹತ್ತಿಕ್ಕಲು ಗಾಂಧೀಜಿ ಮಾಡುತ್ತಿದ್ದ ಬ್ರಹ್ಮಚರ್ಯದ ಪ್ರಯೋಗದಿಂದಾಗಿ ತಮ್ಮ ಮೇಲಾದ ಮಾನಸಿಕ ಪರಿಣಾಮಗಳ ಬಗ್ಗೆಯೂ ಅವರು ವಿಸ್ತೃತವಾಗಿ ಬರೆದಿದ್ದಾರೆ.
ಅವರ ಡೈರಿಯಲ್ಲಿನ ಒಂದು ಪ್ಯಾರಾ ಹೀಗಿದೆ : "ಇಂದು ರಾತ್ರಿ, ಸುಶೀಲಾಬೆನ್, ನಾನು ಮತ್ತು ಬಾಪು (ಗಾಂಧೀಜಿ) ಒಂದೇ ಮಂಚದ ಮೇಲೆ ಮಲಗಿದ್ದಾಗ ಬಾಪು ತಬ್ಬಿಕೊಂಡರು ಮತ್ತು ಬೆನ್ನಮೇಲೆ ಸವರಿದರು. ಪ್ರೀತಿಯನ್ನು ಧಾರೆಯೆರೆದು ನನ್ನನ್ನು ಮಲಗಿಸಿದರು. ಬಹುದಿನಗಳ ನಂತರ ಅವರು ನನ್ನನ್ನು ಆಲಂಗಿಸಿದರು. ಆಗ, ತಮ್ಮೊಂದಿಗೆ ಮಲಗಿದರೂ ಲೈಂಗಿಕ ತುಡಿತದಿಂದ ದೂರವುಳಿದು ಮುಗ್ಧತೆ ಉಳಿಸಿಕೊಂಡಿದ್ದಕ್ಕೆ ಪ್ರಶಂಸಿಸಿದರು. ಆದರೆ, ಇದು ಇತರ ಹುಡುಗಿಯರಿಗೆ ಸಾಧ್ಯವಾಗಿರಲಿಲ್ಲ. ವೀಣಾಸ ಕಂಚನ್ ಮತ್ತು ಲೀಲಾವತಿ (ಇತಹ ಸಹವರ್ತಿಗಳು) ತಾವಿನ್ನೆಂದೂ ಬಾಪೂಜಿಯೊಂದಿಗೆ ಮಲಗುವುದಿಲ್ಲ ಎಂದು ಹೇಳಿದ್ದರು."
ಭಾರತ ಬಿಟ್ಟು ಚಳವಳಿಯ ನಂತರ ಅಸ್ವಸ್ಥರಾಗಿದ್ದ ಕಸ್ತೂರಬಾ ಅವರ ಶುಶ್ರೂಷೆಗೆಂದು ಬಂದಿದ್ದವರು ಮನುಬೆನ್. ಕಸ್ತೂರಬಾ ಅವರ ಕೊನೆಯುಸಿರಿರುವವರೆಗೂ ಅವರ ಆರೈಕೆ ಮಾಡಿದರು. ನಂತರ ಬಾಪೂಜಿಯ ಸೇವೆಗೆ ನಿಂತರು. ಮನುಬೆನ್ ಅವರ ಸೇವೆಯನ್ನು ಅವರನ್ನು ಅಪಾರವಾಗಿ ಪ್ರೀತಿಸಿದ್ದ ಪ್ಯಾರೆಲಾಲ್ ಅವರು ಕೂಡ ಶ್ಲಾಘಿಸಿದ್ದಾರೆ. "ತಾಯಿ ಮಗಳನ್ನು ನೋಡಿಕೊಂಡಂತೆ ಬಾಪೂಜಿ ಮನುಬೆನ್‌ಳನ್ನು ನೋಡಿಕೊಂಡಿದ್ದರು. ಆಕೆಯ ವಿದ್ಯಾಭ್ಯಾಸ, ಆಹಾರ, ಬಟ್ಟೆ, ಮಲಗುವ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ತನ್ನ ತಾಯಿಯೊಂದಿಗೆ ಮಲಗಲು ಮಗಳು ಮುಜುಗರಪಟ್ಟುಕೊಳ್ಳುವುದಿಲ್ಲ" ಎಂದು ಪ್ಯಾರೆಲಾಲ್ ಮನುಬೆನ್ ಮುಗ್ಧತೆಯನ್ನು ಕೊಂಡಾಡಿದ್ದರು.
ಮನುಬೆನ್ ಅವರಿಗೆ ಪ್ಯಾರೆಲಾಲ್ ಅವರಿಂದ ಮದುವೆಯ ಪ್ರಸ್ತಾಪವೂ ಬಂದಿತ್ತು. ಅದನ್ನು ತಳ್ಳಿಹಾಕಿದ್ದ ಅವರು ಹೀಗೆ ಬರೆದಿದ್ದರು : "ತನ್ನ ಸೋದರನ್ನು ಮದುವೆಯಾಗೆಂದು ಸುಶೀಲಾಬೆನ್ ದುಂಬಾಲುಬಿದ್ದಿದ್ದರು. ಸಹೋದರನನ್ನು ಮದುವೆಯಾದರೆ ನರ್ಸ್ ಮಾಡುವುದಾಗಿ ಪುಸಲಾಯಿಸಿದ್ದರು. ಅದನ್ನು ತಳ್ಳಿಹಾಕಿ, ಇದರ ಬಗ್ಗೆ ಗಾಂಧೀಜಿ ಜೊತೆ ಪ್ರಸ್ತಾಪಿಸಿದ್ದೆ. ಅದಕ್ಕೆ ಅವರು, ಸುಶೀಲಾಬೆನ್ ತನ್ನ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇತ್ತೀಚಿನವರೆಗೆ ಆಕೆ ತನ್ನ ಮುಂದೆ ಬೆತ್ತಲಾಗಿ ಸ್ನಾನ ಮಾಡುತ್ತಿದ್ದಳು ಮತ್ತು ಮಲಗುತ್ತಿದ್ದಳು ಎಂದಿದ್ದರು. ನಾನು ಅತ್ಯಂತ ಶುದ್ಧವಾಗಿರಬೇಕು ಮತ್ತು ಬ್ರಹ್ಮಚರ್ಯ ಆಚರಿಸಲು ಸಹನಶೀಲೆಯಾಗಿರಬೇಕು ಎಂದಿದ್ದರು."
ಹೀಗೆ, ತಮ್ಮ ಮತ್ತು ಗಾಂಧೀಜಿ ನಡುವಿನ ಹಲವಾರು ವಿಷಯಗಳ ಬಗ್ಗೆ ಮನುಬೆನ್ ಸವಿಸ್ತಾರವಾಗಿ ತಮ್ಮ ಡೈರಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಗಾಂಧೀಜಿ ಸಾವಿನ ನಂತರವೂ ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಆಚರಿಸಿದ ಅವರು ಸುಮಾರು 21 ವರ್ಷಗಳ ಕಾಲ ಗುಜರಾತ್ ದಲ್ಲಿ ನೆಲೆಸಿದರು. ಅಲ್ಲಿ ಮಕ್ಕಳಿಗಾಗಿ ಶಾಲೆ, ಮಹಿಳೆಯರಿಗಾಗಿ ಭಗಿನಿ ಸಮಾಜ ಮುಂತಾದದವುಗಳನ್ನು ನಡೆಸಿದರು. ನಂತರ 1969ರಲ್ಲಿ ಏಕಾಂಗಿಯಾಗಿ ಜೀವಿಸಿ ದೆಹಲಿಯಲ್ಲಿ ಮರಣಹೊಂದಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications