ಮದುವೆಗೆ ಹೋಗಬೇಡ ಎಂದರೆ, ಮಸಣ ಸೇರಿದಳು

ರಿಚ್ ಮಂಡ್ ವೃತ್ತದ ಸಮೀಪದ ಬಾಲ್ಡ್ ವಿನ್ ಕಾಲೇಜಿನಿಲ್ಲಿ ಸಂಧ್ಯಾ (19) ಬಿ.ಕಾಂ.ಓದುತ್ತಿದ್ದಳು. ಪಾರ್ವಥಿನ್ ಮತ್ತು ಕುಮುದಾ ದಂಪತಿಯ ಮಗಳಾದ ಸಂಧ್ಯಾ ಸ್ನೇಹಿತೆಯ ಮದುವೆ ಸೋಮವಾರ ನಿಗದಿಯಾಗಿತ್ತು.
ಒಂದು ದಿನ ಮುಂಚಿತವಾಗಿ ಅಂದರೆ, ಭಾನುವಾರ ರಾತ್ರಿ ಸ್ನೇಹಿತೆ ಜೊತೆಗೆ ನಾನು ಮದುವೆಗೆ ತೆರಳುತ್ತೇನೆ ಎಂದು ಪೋಷಕರ ಬಳಿ ಅನುಮತಿ ಕೇಳಿದ್ದಾಳೆ. ಭಾನುವಾರ ರಾತ್ರಿಯಾಗುತ್ತಿದ್ದರಿಂದ ಮನೆಯವರು ನಿರಾಕರಿಸಿದ್ದಾರೆ.
ಭಾನುವಾರ ರಾತ್ರಿ ಬೇಡ, ಸೋಮವಾರ ಬೆಳಗ್ಗೆ ಹೋಗು ಎಂದು ಮನೆಯವರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಬೇಸರಗೊಂಡ ಆಕೆ, ಭಾನುವಾರ ಮನೆಯವರೆಲ್ಲ ಮಲಗಿದ ಬಳಿಕ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಸೋಮವಾರ ಬೆಳಗ್ಗೆ ಸಂಧ್ಯಾಳ ಸಹೋದರಿ ದಿವ್ಯ ತಂಗಿಯನ್ನು ಎಬ್ಬಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಒಂದು ದಿನ ಮುಂಚಿತವಾಗಿ ಮದುವೆಗೆ ತೆರಳಲು ಅವಕಾಶ ನೀಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಿವ್ಯಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಹೆಣ್ಣೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೇವಲ ಮನೆಯವರಿಂದ ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡಳೆ ಅಥವ ಬೇರೆ ಕಾರಣವಿದೆಯೇ ಎಂದು ತನಿಖೆ ಆರಂಭಿಸಿದ್ದಾರೆ.












Click it and Unblock the Notifications