‘ಮಂಜುನಾಥ’ನನ್ನು ಬಡಿದೆಬ್ಬಿಸಿದ ಕೋರ್ಟ್

ಹೆಂಡತಿ ದುಡಿದ ಹಣದಲ್ಲೇ ಕುಡಿತ, ಜೂಜು ಇತ್ಯಾದಿ ಶೋಕಿ ಮಾಡಿಕೊಂಡು, ಮನೆಯಲ್ಲಿದ್ದ ಒಡವೆ ಮಸ್ತುಗಳನ್ನು ಗಿರವಿ ಇಟ್ಟು, ಅಲೆದಾಡುತ್ತಿದ್ದ ಗಂಡಸಿಗೆ ಛೀಮಾರಿ ಹಾಕಿರುವ ನ್ಯಾಯಾಲಯ ಕೆಲಸ ಮಾಡಿ ತಿಂಗಳಿಗೆ ಖರ್ಚಾಗುವ ಹಣವನ್ನು ಹೆಂಡತಿಗೆ ನೀಡಲೇಬೆಕೆಂದು ಕಟ್ಟಪ್ಪಣೆ ಹೊರಡಿಸಿದೆ.
ಏಳು ತಿಂಗಳ ಮಗುವಿನ ತಾಯಿ, ಶಶಿ ಸಲ್ಲಿಸಿದ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಪರವಾಗಿ ತೀರ್ಪು ನೀಡಿದ್ದು, ಶಶಿ ಅವರ ಪತಿಗೆ ಸರಿಯಾಗಿ ಸಂಸಾರ ನಿರ್ವಹಣೆ ಮಾಡುವಂತೆ ತಾಕೀತು ಮಾಡಿದೆ.
ಏನಿದು ಪ್ರಕರಣ : ಶಶಿ ತಮ್ಮ ಪತಿ ಮಹೇಶ್ ಕುಟುಂಬ ನಿರ್ವಹಣೆ ಮಾಡುತ್ತಿಲ್ಲ. ನಾನು ದುಡಿದ ಹಣವನ್ನು ತೆಗೆದುಕೊಂಡು ಹೋಗಿ ಕುಡಿದು ಖಾಲಿ ಮಾಡುತ್ತಾರೆ. ಪತಿಗೆ ಬುದ್ಧಿವಾದ ಹೇಳಿ ಎಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಪ್ರಕರಣ ಹೈ ಕೊರ್ಟ್ ಮೆಟ್ಟಿಲೇರಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಮಹೇಶ್ ಗೆ ಸರಿಯಾಗಿಯೇ ಬುದ್ಧಿವಾದ ಹೇಳಿದೆ ಅಲ್ಲದೆ, ಪ್ರತಿ ತಿಂಗಳು ಮನೆ ನಿರ್ವಹಣೆಗೆ 1500 ರೂ. ನೀಡಬೇಕೆಂದು ಆದೇಶ ನೀಡಿದೆ. ಮಹೇಶ್ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ ಆದ್ದರಿಂದ ಮನೆಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಮಹೇಶ್ ಪರ ವಕೀಲರು ವಾದಿಸಿದ್ದರು.
ತೀರ್ಪು ನೀಡುವ ವೇಳೆ ನ್ಯಾಯ ಮೂರ್ತಿಗಳು, ಕೆಲಸಕ್ಕೆ ಹೋಗುವುದಕ್ಕೆ ಪತಿ ಒಪ್ಪದಿರುವುದು ಪತ್ನಿ ಅಥವಾ ಮಗಳ ಸಮಸ್ಯೆಯಲ್ಲ. ಹಾಗಾಗಿ ಮನೆ ನಿರ್ವಹಣೆಗೆ ಮಹೇಶ್ ಹಣ ನೀಡಲೇಬೇಕು, ಪತ್ನಿಯ ಜೀವನ ನಿರ್ವಹಣೆಗೆ 1500 ಹಾಗೂ ಮಗಳ ಪಾಲನೆ ಪೋಷಣೆಗೆ 1000 ರೂ ನೀಡಲೇಬೇಕೆಂದು ನಾಗಪುರ ಹೈ ಕೋರ್ಟ್‌ನ ಆದೇಶಿಸಿದೆ.
ಕರ್ನಾಟಕದಲ್ಲಿ ಗುರು ಪ್ರಸಾದ್ ಮಾಡಿದ್ದ ಸಿನಿಮಾವನ್ನು ನ್ಯಾಯಮೂರ್ತಿಗಳು ನೋಡಿದ್ದರು ಎಂದು ಕಾಣುತ್ತದೆ. ಅಸಹಾಯಕವಾಗಿದ್ದು ಹೆಣ್ಣಿಗೆ ಕಾನೂನಿನ ಮೂಲಕ ರಕ್ಷಣೆ ನೀಡಿದ್ದಾರೆ. ಪತಿರಾಯನಿಗೆ ಸರಿಯಾಗಿ ಗ್ರಹಚಾರ ಬಿಡಿಸಿ ನೆಟ್ಟಗೆ ಸಂಸಾರ ಮಾಡು ಎಂದು ಆದೇಶ ನೀಡಿದ್ದಾರೆ.












Click it and Unblock the Notifications