ನಂಗಾ ನಾಚ್ ರೆಸಾರ್ಟ್ ಮಾಲೀಕ ಬಂಧನ

Bangalore Rural Police arrested SR Resort Valley owner
ದೊಡ್ಡಬಳ್ಳಾಪುರ, ಮೇ.30: ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ರೆಸಾರ್ಟಿನಲ್ಲಿ ನಡೆದಿರುವ ಅಶ್ಲೀಲ ನೃತ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬೆಂಗಳೂರು ಗ್ರಾಮಾಂತರ ವಿಭಾಗದ ಪೊಲೀಸರು ಎಸ್ ಆರ್ ರೆಸಾರ್ಟ್ ಮಾಲೀಕ ಸಂಪಂಗಿ ರಾಮಯ್ಯ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರೆಸಾರ್ಟ್ ನಲ್ಲಿ ನಂಗಾ ನಾಚ್ ನಡೆದಿರುವ ಬಗ್ಗೆ ಇರುವ ಸಿಡಿ ಸತ್ಯಾಸತ್ಯತೆ ಬಗ್ಗೆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಗೃಹ ಸಚಿವ ಕೆಜೆ ಜಾರ್ಜ್ ಅವರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ರೆಸಾರ್ಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಸುವುದು ಕಂಡು ಬಂದರೆ ಕಠಿಣ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದ್ದರು.

ಹೆಚ್ಚುವರಿ ಪೊಲೀಸ್ ಅಧಿಕಾರಿ ನಾಗರಾಜ್ ನೇತೃತ್ವದ ದೊಡ್ಡ ಬಳ್ಳಾಪುರ ಪೊಲೀಸರು ಎಸ್ ಆರ್ ರೆಸಾರ್ಟ್ ಮಾಲೀಕ ಸಂಪಂಗಿ ರಾಮಯ್ಯ ಹಾಗೂ ಅವರ ಪುತ್ರ ಚಂದ್ರು ಅವರನ್ನು ಬುಧವಾರ (ಮೇ.29) ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ. ಇದರ ಜೊತೆಗೆ ರೆಸಾರ್ಟ್ ನಲ್ಲಿ ನಡೆದ ಅಶ್ಲೀಲ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿ ದೊಡ್ಡಬಳ್ಳಾಪುರ ಸಿಪಿಐ ಸಿದ್ದಲಿಂಗಪ್ಪ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಸಿದ್ದಲಿಂಗಪ್ಪ ಅವರು ಪೊಲೀಸ್ ದಿರಿಸಿನಲ್ಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮದ್ಯ ಸೇವಿಸುತ್ತಿರುವ ಕ್ಲಿಪ್ಪಿಂಗ್ ಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಅವರು ನೀಡಿದ ಸಿಡಿಯಲ್ಲಿ ಇದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಠಾಣಾಧಿಕಾರಿ ಹೇಳಿದ್ದಾರೆ.

ಎಸ್.ಆರ್.ವ್ಯಾಲಿ ರೆಸಾರ್ಟಿನಲ್ಲಿ ಯುವತಿಯರ ಬೆತ್ತಲೆ ನೃತ್ಯ ನಡೆದಿರುವುದು ಕಾನೂನು ಬಾಹಿರವಾಗಿದೆ. ಪ್ರವಾಸೋದ್ಯಮ ಇಲಾಖೆ ಬಗ್ಗೆ ಮಾಹಿತಿ ನೀಡಲಾಗಿದ್ದು, ರೆಸಾರ್ಟ್ ಲೈಸನ್ಸ್ ರದ್ಧತಿಗೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆದರೆ, ರೆಸಾರ್ಟ್ ಮಾಲೀಕ ರಾಮಯ್ಯ ಅವರು, ನಮ್ಮ ರೆಸಾರ್ಟ್ ನಲ್ಲಿ ಕೆಲ ವರ್ಷಗಳ ಹಿಂದೆ ಈ ರೀತಿ ಕೃತ್ಯ ನಡೆದಿದ್ದು ನಿಜ, ಪ್ರಭಾವಿ ನಾಯಕರ ಒತ್ತಡದಿಂದ ಕಾರ್ಯಕ್ರಮ ನಡೆದಿತ್ತು. ನನಗೆ ನಂತರ ತಿಳಿಯಿತು. ಕೆಲ ಸಂಘಟನೆಗಳು ನನಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಮಾಡಲು ಯತ್ನಿಸಿದರು. ನಾನು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೆ ಎನ್ನುತ್ತಾರೆ. ರೆಸಾರ್ಟ್ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬ ಸತ್ಯ ಇನ್ನೂ ಹೊರ ಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+