ಟೆಕ್ಕಿ ದೋಚಿದ್ದ ಕಳ್ಳರು ದಿನದೊಳಗೆ ಜೈಲಿಗೆ

ಸಾಫ್ಟ್ ವೇರ್ ಇಂಜಿನಿಯರ್ ಗೌತಮ್ ಹಂಪಿ ನಗರದಿಂದ ಚಾಮರಾಜಪೇಟೆಯಲ್ಲಿರುವ ತಮ್ಮ ಮನೆಗೆ ಮಂಗಳವಾರ ಬೈಕ್‌ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಡ್ರಾಪ್ ಕೇಳುವ ನೆಪದಲ್ಲಿ ಇವರನ್ನು ಅಡ್ಡಗಟ್ಟಿ ಹಣ ಮತ್ತು ಮೊಬೈಲ್ ದೋಚಿದ್ದರು.
ಗೌತಮ್ ತಕ್ಷಣ ಕಾಟನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಒಂದು ದಿನದೊಳಗೆ ಇಬ್ಬರು ಆರೋಪಿಗಳಾದ ರಂಜಿತ್ ಹಾಗೂ ಸಲ್ಮಾನ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ವಿಜಯ್ ಕುಮಾರ್ ತಲೆ ಮರಿಸಿಕೊಂಡಿದ್ದಾನೆ.
ಏನಿದು ಘಟನೆ : ಗೌತಮ್ ಅವರು ಹಂಪಿ ನಗರದಿಂದ ಮನೆಗೆ ತೆರಳುತ್ತಿದ್ದರು. ಬೆಳಗ್ಗೆ ಘೋರಿಪಾಳ್ಯ ಮಾರ್ಗವಾಗಿ ಬೈಕ್‌ನಲ್ಲಿ ಮಂಗಳವಾರ ಬೆಳಗ್ಗೆ 8.15ರಲ್ಲಿ ತೆರಳುವಾಗ ಮಾರ್ಗ ಮಧ್ಯೆ ಘೋರಿಪಾಳ್ಯ ಜಂಕ್ಷನ್‌ನಲ್ಲಿ ಸಲ್ಮಾನ್ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ಹತ್ತಿಕೊಂಡಿದ್ದಾನೆ.
ಅಂಜನಪ್ಪ ಗಾರ್ಡ್‌ನ ಬಾಳೇಕಾಯಿ ಮಂಡಿ ಮಾರ್ಗವಾಗಿ ಓಲ್ಡ್ ಮೌಲಾ ಜಂಕ್ಷನ್ ಬಳಿ ಆಟೋದಲ್ಲಿ ಬಂದ ವಿಜಯ್ ಕುಮಾರ್ ಹಾಗೂ ರಂಜಿತ್ ಇವರನ್ನು ಅಡ್ಡಗಟ್ಟಿದ್ದಾರೆ. ನಂತರ ಚಾಕು ತೋರಿಸಿ ಚಾಕು ತೋರಿಸಿ ಮೊಬೈಲ್ ಹಾಗೂ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಘಟನೆ ಬಗ್ಗೆ 10.15ಕ್ಕೆ ಕಾಟನ್‌ಪೇಟೆ ಪೊಲೀಸರಿಗೆ ಗೌತಮ್ ದೂರು ನೀಡಿದ್ದರು. ತಕ್ಷಣ ತನಿಖೆ ಪ್ರಾರಂಭಿಸಿದ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಒಂದು ದಿನದೊಳಗೆ ಆರೋಪಿ ಸಲ್ಮಾನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತ ನೀಡಿ ಮಾಹಿತಿ ಮೇರೆಗೆ ರಂಜಿತ್ ಸಿಕ್ಕಿ ಬಿದಿದ್ದಾನೆ. ವಿಜಯ್ ಕುಮಾರ್ ಅವರಿಗಾಗಿ ಹುಡುಕಾಟ ಮುಂದುವರೆದಿದೆ.












Click it and Unblock the Notifications