ಆಧಾರ್ LPG ಸಿಲಿಂಡರ್: ಸಬ್ಸಿಡಿ ವಿತರಣೆ ಹೇಗೆ ಗೊತ್ತಾ?

aadhaar-lpg-tumkur-how-subsidy-distributed
ತುಮಕೂರು, ಮೇ 30: ಇನ್ನೇನು ಆಧಾರ್ ಕಾರ್ಡ್ ಮೂಲಕ ಅಡುಗೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಧನವನ್ನು ನೇರವಾಗಿ ಗ್ರಾಹಕರ ಖಾತೆಗೆ ಜಮಾ ಮಾಡುವ ಮಹತ್ವಾಕಾಂಕ್ಷಿ ಯೋಜನೆ ನಾಳಿದ್ದು ಜೂನ್ 1 ರಿಂದ ರಾಜ್ಯದಲ್ಲಿ ತುಮಕೂರಿನಲ್ಲಿ ಮಾತ್ರವೇ ಅಸ್ತಿತ್ವಕ್ಕೆ ಬರುತ್ತಿದೆ.

ಮೈಸೂರಿನಲ್ಲಿ ಪಿರಿಯಾಪಟ್ಟಣ ಚುನಾವಣೆ ಹಿನ್ನೆಲೆ ಕಾರಣ ಆ ಜಿಲ್ಲೆಯಲ್ಲಿ ಯೋಜನೆ ತಡಗವಾಲಿದೆ ಎಂಬ ಗೊಂದಲವೂ ಇದೆ. ಆದರೆ ತುಮಕೂರಿನಲ್ಲಿ ನಾಳಿದ್ದು ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ಚಾಲನೆ ನೀಡುವುದು ಖಚಿತ.

ಈ ಯೋಜನೆಯ ಬಗ್ಗೆ ಆದ್ಯವಾಗಿ ಮತ್ತಷ್ಟು ಹೇಳುವುದಾದರೆ...
ಮೊದಲನೆಯದಾಗಿ ಈಗಾಗಲೇ ಆಧಾರ್ ಸಂಖ್ಯೆ ಹೊಂದಿರುವ ಗ್ರಾಹಕರು ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಸೇರ್ಪಡೆ ಮಾಡಿದ್ದರೆ ಅಂಥವರಿಗೆ ಜೂನ್ 1 ರಿಂದಲೇ ಯೋಜನೆಯ ಅನ್ವಯ ಸಹಾಯ ಧನ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಅಂದರೆ ಇಲ್ಲಿ ಗ್ರಾಹಕರು ಮೊದಲು ಮಾರುಕಟ್ಟೆ ದರದಲ್ಲೇ ಅಡುಗೆ ಅನಿಲ ಸಿಲಿಂಡನ್ನು ಖರೀದಿ ಮಾಡಬೇಕು. ಸರಕಾರ ನಿಗದಿಪಡಿಸಿರುವ ಅಂದರೆ ಒಂದು ಅಡುಗೆ ಅನಿಲ ಸಿಲಿಂಡರಿಗೆ ಸುಮಾರು 420 ರೂ ನೀಡಿ ಸುಮ್ಮನಾಗುವಂತಿಲ್ಲ.

ಸಿಲಿಂಡರಿಗೆ ಮಾರುಕಟ್ಟೆ ದರ ಏನಿರುತ್ತದೋ ಅದನ್ನು ಮೊದಲು ಇನ್ವೆಂಸ್ಟ್ ಮೆಂಟಾಗಿ ಗ್ರಾಹಕರು ತುಂಬಬೇಕು. ಮಾರುಕಟ್ಟೆಯಲ್ಲಿ ಸಿಲಿಂಡರ್ ಬೆಲೆ 900 ಚಿಲ್ರೆ ಇದೆ ಅಂತಾದರೆ ಗ್ರಾಹಕರು 420 ರೂಪಾಯಿ ಜತೆಗೆ 480 ರೂ, ಅನ್ನು ಸಹ ಬಿಲ್ ಪಾವತಿ ಸಂದರ್ಭದಲ್ಲೇ ತುಂಬಬೇಕು.

ಆಗಷ್ಟೇ ನಿಮ್ಮ ಡೀಲರ್ ಸಿಲಿಂಡರ್ ವಿರತಣೆ ಮಾಡುವುದು. ಇಲ್ಲ. ನಾವು 420 ರೂ ಅಷ್ಟೇ ಕೊಡೋದು ಎಂದು ಸುಮ್ಮನಾಗುವಂತಿಲ್ಲ. ಮೊದಲು ಪೂರ್ತಿ ಹಣ ಕಟ್ಟಿ, ಬಳಿಕ ಹೆಚ್ಚುವರಿಯಾಗಿ ನೀವು ನೀಡಿರುವ ಮೊತ್ತವನ್ನು (ಸಬ್ಸಿಡಿ) ಕೇಂದ್ರ ಸರಕಾರ ನಿಮ್ಮ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ತುಂಬುತ್ತದೆ.

ದೇಶದ ಸಮಸ್ತ LPG ಗ್ರಾಹಕರೂ ಆಧಾರ್ ಕಾರ್ಡನ್ನು ಮಾಡಿಸಿಟ್ಟುಕೊಂಡರೆ ಜತೆಗೆ ಅದನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಸೇರ್ಪಡೆ ಮಾಡಿದರೆ ಎಲ್ಲರೂ ಈ ಯೋಜನೆಯ ಫಲಾನುಭವಿಗಳಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+