ಒಡಿಶಾ ಮೂಲದ ದಂಪತಿಗಳು ಬೆಂಕಿಗಾಹುತಿ

ದಂಪತಿಗಳು ತಾವು ವಾಸಿಸುತ್ತಿದ್ದ ಶೆಡ್ ನಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದಾರೆ. ಮೃತರನ್ನು ಬಾಬು ಜಾನ್ (25) ಹಾಗೂ ಭಯಾನಿ ಜಾನ್ (22) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸಹ ಕಾರ್ಮಿಕರು ಶೆಡ್ ಗೆ ಆಗಮಿಸಿದ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ದಂಪತಿಗಳು ಕೆಲವು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಎರಡು ದಿನಗಳ ಹಿಂದೆ ಎಂಟು ಜನರೊಂದಿಗೆ ಒಡಿಶಾದಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ಆಗಮಿಸಿದ್ದರು ಎಂದು ಸಹ ಕಾರ್ಮಿಕರು ತಿಳಿಸಿದ್ದಾರೆ.
ರಾಮಭೋವಿ ಕಾಲೊನಿ ಬಳಿ ನೀರಿನ ಟ್ಯಾಂಕರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದರು. ಕಾಮಗಾರಿ ನಡೆಯುತ್ತಿದ್ದ ಸಮೀಪದ ಶೆಡ್ ನಲ್ಲಿ ವಾಸಿಸುತ್ತಿದ್ದರು. ಘಟನೆಗೆ ನಿಖರವಾದ ಕಾರಣ ಏನೆಂದು ತಿಳಿದು ಬಂದಿಲ್ಲ.
ಆನಾರೋಗ್ಯದ ನೆಪವೊಡ್ಡಿ ಮಾಲೀಕನಿಂದ 500 ರೂ. ಪಡೆದು ಮಂಗಳವಾರ ಕೆಲಸಕ್ಕೆ ತೆರಳದೇ ದಂಪತಿ ಶೆಡ್ ನಲ್ಲಿ ಉಳಿದಿದ್ದರು. ಮಧ್ಯಾಹ್ನದ ವೇಳೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಶೆಡ್ ನಲ್ಲಿ ಹೊಗೆ ಬರುವುದನ್ನು ಗಮನಿಸಿ ಸಹ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಸುಟ್ಟು ಕರಕಲಾಗಿದ್ದರು.
ಪೋಷಕರ ವಿರೋಧದ ನಡುವೆಯೇ ಇವರು ವಿವಾಹವಾಗಿದ್ದರು ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಹ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications