ಪಾಟೀಲ್ ಹೆಗಲಿಗೆ ಮೂರು ಖಾತೆಗಳ ಹೊಣೆ

ಭಾನುವಾರ ಸಂಜೆ ಅಧಿಕೃತ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖೀಕ ಖಾತೆಗಳ ಜವಾಬ್ದಾರಿಯನ್ನು ಪಾಟೀಲ್ ಅವರಿಗೆ ವಹಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಇದರೊಂದಿಗೆ ಪಾಟೀಲ್ ವಿಧಾನಪರಿಷತ್ ಪ್ರತಿಪಕ್ಷ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಪಾಟೀಲ್ ಅವರಿಗೆ ತವರು ಜಿಲ್ಲೆ ಬಾಗಲಕೋಟೆಯ ಉಸ್ತುವಾರಿಯನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ, ಈ ಕುರಿತು ಆಧಿಕೃತ ಆದೇಶ ಹೊರಬಿದ್ದಿಲ್ಲ. (ಫಲಿತಾಂಶ: ಜಿಲ್ಲಾವಾರು ಗೆದ್ದವರು, ಸೋತವರ ವಿವರ)
ಎಸ್.ಆರ್.ಪಾಟೀಲ್ ಶನಿವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರಿಗೆ ಭಾನುವಾರ ಖಾತೆಗಳ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ಖಾತೆಗಳ ಜವಾಬ್ದಾರಿಯ ಹೊರೆ ತಗ್ಗಿದೆ.
ಎಸ್.ಆರ್.ಪಾಟೀಲ್ ಅವರ ಸೇರ್ಪಡೆಯಿಂದಾಗಿ 21 ಸಂಪುಟ ದರ್ಜೆ ಸಚಿವರು ಮತ್ತು 8 ಮಂದಿ ರಾಜ್ಯ ಸಚಿವರು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದಾರೆ.(ಯಾವ ಖಾತೆ ಯಾರಿಗೆ)
ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವ್ಯವಹಾರ, ಆಡಳಿತ ಸುಧಾರಣೆ, ಹಣಕಾಸು, ಸಣ್ಣ ಉಳಿತಾಯ, ಲಾಟರಿ, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ಗಣಿ ಮತ್ತು ಭೂವಿಜ್ಞಾನ, ರೇಷ್ಮೆ, ಇಂಧನ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. (ನೂತನ ಸಚಿವರ ವ್ಯಕ್ತಿ ಚಿತ್ರಣ)












Click it and Unblock the Notifications