ಎರಡನೇ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

tb jayachandra
ಬೆಂಗಳೂರು, ಮೇ 24 : ವಿಧಾನಸಭೆ ಅಧಿವೇಶನ ಪ್ರಾರಂಭವಾಗಲು ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಇಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪುಟ ಸಭೆ ನಡೆಸಿದರು. ನೂತನ ಸಚಿವ ಸಂಪುಟ ರಚನೆಯಾದ ಬಳಿಕ ನಡೆದ ಎರಡನೇ ಸಭೆ ಇದಾಗಿದ್ದು, ಹಲವಾರು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಶುಕ್ರವಾರ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದರು. ಸರ್ಕಾರಿ ಅಧಿಕಾರಿಗಳ ಪೂರ್ಣ ಪ್ರಮಾಣದ ವರ್ಗಾವಣೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಸಂಪುಟ ವಿಸ್ತರಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.

ಗೋ ಹತ್ಯೆ ನಿಷೇಧ ಕಾನೂನು, ಗೂಂಡಾ ಕಾಯ್ದೆ ಜಾರಿ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಕುರಿತು ಯಾವುದೇ ಚರ್ಚೆ ನಡೆಸದೆ, ಸಭೆಯನ್ನು ಮುಕ್ತಾಯಗೊಳಿಸಲಾಗಿದೆ.

ಸಂಪುಟ ಸಭೆಯ ತೀರ್ಮಾನಗಳು

* ಜೂನ್ 30ರೊಳಗೆ ನೌಕರರ ವರ್ಗಾವಣೆ ಪೂರ್ಣ
* ಹಾರನಹಳ್ಳಿ ರಾಮಸ್ವಾಮಿ ಮಾರ್ಗದರ್ಶಿ ಸೂತ್ರದಂತೆ ವರ್ಗಾವಣೆ
* ಕೆಪಿಎಸ್ ಸಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಒಪ್ಪಿಗೆ
* ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಮಾತ್ರ ವರ್ಗಾವಣೆಗೆ ಕೌನ್ಸಿಲಿಂಗ್
* ಲೋಕಾಯುಕ್ತಕ್ಕೆ ರಿಜಿಸ್ಟ್ರಾರ್ ಆಗಿ ದೇಶಪಾಂಡೆ, ವಿಧ್ಯಾಧರ ನೇಮಕ

(ಮೊದಲ ಸಂಪುಟ ಸಭೆ ನಿರ್ಣಯಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+