ಸ್ಪೆಲ್ಲಿಂಗ್ ಪರೀಕ್ಷೆ ಗೆದ್ದ ಮಂಗಳೂರು ಮೂಲದ ಬಾಲಕ

ಏಷ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ ಬಂದರು ನಗರಗಳ ಬಗ್ಗೆ ಸೇರಿದಂತೆ ಐದಕ್ಕೆ ಐದು ಸರಿಯಾದ ಉತ್ತರವನ್ನು ನೀಡಿದ್ದಾನೆ. 12ರ ಹರೆಯದ ಸಾತ್ವಿಕ್ ಕಾರ್ಣಿಕ್ ಈಕ್ವಡಾರ್ ನ ಬೆಟ್ಟ ಚಿಂಬೊರಾಜೋ(Chimborazo) ಬಗ್ಗೆ ಸರಿಯಾದ ಉತ್ತರವನ್ನು ನೀಡಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ.13 ವರ್ಷ ವಯಸ್ಸಿನ ಕಾನಾರಾಡ್ ಒಬೆರ್ಹಾಸ್ ರನ್ನರ್ ಅಪ್ ಆಗಿದ್ದಾರೆ.
ದಕ್ಷಿಣ ಬೋಸ್ಟನ್ ನ ನೊರ್ಫ್ಲೊಕ್ ನವನಾಗಿರುವ ಕಾರ್ಣಿಕ್, ಕಿಂಗ್ ಫಿಲಿಫ್ ರೀಜನಲ್ ಮಿಡ್ಲ್ ಸ್ಕೂಲ್ ನಲ್ಲಿ 7ನೇ ಗ್ರೇಡ್ ವಿದ್ಯಾರ್ಥಿ. ಆತ ಪ್ರಶಸ್ತಿಯೊಂದಿಗೆ 25 ಸಾವಿರ ಅಮೆರಿಕನ್ ಡಾಲರ್ ಕಾಲೇಜ್ ಸ್ಕಾಲರ್ ಶಿಪ್ ಪಡೆಯಲಿದ್ದಾನೆ. ಇಷ್ಟೇ ಅಲ್ಲದೆ ಗ್ಯಾಲಪಗೋಸ್ ದ್ವೀಪಗಳಿಗೆ ಉಚಿತ ಪ್ರಯಾಣ ಮತ್ತು ನ್ಯಾಷನಲ್ ಜಿಯೋಗ್ರಾಫಿ ಸೊಸೈಟಿಗೆ ಅಜೀವ ಸದಸ್ಯತ್ವ ಪಡೆಯಲಿದ್ದಾನೆ. ಅಂತಾರಾಷ್ಟ್ರೀಯ ಜಿಯೋಗ್ರಾಫಿಕ್ ಸ್ಪರ್ಧೆಯಲ್ಲಿ ಅಮೆರಿಕ ಪರವಾಗಿ ಕಾರ್ಣಿಕ್ ಸ್ಪರ್ಧಿಸಬಹುದಾಗಿದೆ.
ಸುಮಾರು 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಕೆಲವು ಸುತ್ತಿನ ಬಳಿಕ 54 ಮಂದಿ, ಇದರ ಬಳಿಕ ಹತ್ತು ಮತ್ತು ಅಂತಿಮವಾಗಿ ಮೂರು ಮಂದಿ ಸ್ಪರ್ಧೆಯಲ್ಲಿದ್ದರು. ಅಂತಿಮ ಹತ್ತು ಸ್ಪರ್ಧಿಗಳಲ್ಲಿ ಎಂಟು ಮಂದಿ ಭಾರತೀಯ ಮೂಲದವರು ಎಂಬುದು ವಿಶೇಷ.
ಮಂಗಳೂರು ಮೂಲದ ಸಾಫ್ಟ್ ವೇರ್ ವೃತ್ತಿನಿರತ ದಂಪತಿಯ ಪುತ್ರನಾದ ಸಾತ್ವಿಕ್ ಕಾರ್ಣಿಕ್ ಕುಟುಂಬಿಕರು 2002ರ ಬಳಿಕ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.
ಕಾರ್ಣಿಕ್ ಕುಟುಂಬ: ಸತತ ಮೂರನೇ ವರ್ಷ ಕಾರ್ಣಿಕ್ ಕುಟುಂಬದ ಸದಸ್ಯರೊಬ್ಬರು ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. 2011ರಲ್ಲಿ ಸಾತ್ವಿಕ್ ಸೋದರ ಕಾರ್ತಿಕ್ 5ನೇ ಸ್ಥಾನ ಹಾಗೂ 2012ರಲ್ಲಿ 6ನೇ ಸ್ಥಾನ ಗಳಿಸಿದ್ದರು. 1989ರಿಂದ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಈ ಸ್ಪರ್ಧೆಯನ್ನು ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿದೆ.(ಪಿಟಿಐ)












Click it and Unblock the Notifications