ಸರಕಾರಕ್ಕೆ ಕಾಡಲಿದೆ ಅಸ್ಥಿರತೆ, ಕೋಡಿಶ್ರೀ ಮತ್ತೊಂದು ಭವಿಷ್ಯ

Kodimutt Seer another prediction in Hubli
ಹುಬ್ಬಳ್ಳಿ, ಮೇ 23: ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹುಬ್ಬಳ್ಳಿಯಲ್ಲಿ ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಅಸ್ಥಿರತೆ ಕಟ್ಟಿಟ್ಟಬುತ್ತಿ ಎಂದಿದ್ದಾರೆ.

ಪೂರ್ಣ ಬಲದೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಸರಕಾರಕ್ಕೆ ಅಸ್ಥಿರತೆ ತಪ್ಪಿದ್ದಲ್ಲ.

ನಾವು ಈ ಹಿಂದೆ ಹೇಳಿದ ಭವಿಷ್ಯವಾಣಿ ನಿಜವಾಗಿದೆ. ಕೈಲಾಸದಲ್ಲಿ ಗಂಟೆ ಬಾರಿಸೀತು ಎಂದು ಹೇಳಿದ್ದೆವು ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಶ್ರೀಗಳು ವ್ಯಾಖ್ಯಾನಿಸಿದ್ದಾರೆ.

ನಗರದ ಗೋಪನಕೊಪ್ಪ ಗ್ರಾಮದೇವತೆಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೋಡೀಮಠದ ಶ್ರೀಗಳು ಅಂಬಲಿ ಹಳಸೀತು ಎಂದು ನುಡಿದಿದ್ದೆವು.

ಅದರಂತೆ ಕಳೆದ ಬಿಜೆಪಿ ಸರಕಾರದಲ್ಲಿ ಮೂವರು ಮುಖ್ಯಮಂತ್ರಿ ಪಟ್ಟಕ್ಕೆ ಗುದ್ದಾಟ ನಡೆಸಿದರು, ಕಂಬಳಿ ಹಾಸೀತು ಅಂದರೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದು.

ಬಂಗಾರದ ಪಂಜರ ಭಾರವಾದಿತು, ಸ್ಫೋಟಕ ಸುದ್ದಿ ಬಂದೀತು, ಅಚ್ಚರಿಯ ಫ‌ಲಿತಾಂಶ ತಂದೀತು ಎಂದು ಹೇಳಿದ್ದೆವು ಅದರಂತೆ ಬಿಜೆಪಿಗೆ ಕಳೆದ ಚುನಾವಣೆ ಭಾರವಾಯಿತು, ಬೆಂಗಳೂರಿನಲ್ಲಿ ಸ್ಫೋಟ ನಡೆಯಿತು, ಅಚ್ಚರಿಯ ಫಲಿತಾಂಶವೆನ್ನುವಂತೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು ಎಂದೂ ನಾವು ನುಡಿದಿದ್ದೆವು ಎಂದು ಶ್ರೀಗಳು ಹೇಳಿದ್ದಾರೆ.

ಗುರುವಿನ ಆಶೀರ್ವಾದ ಇದ್ದರೆ ಮಾತ್ರ ಮನುಷ್ಯನಿಗೆ ಬೆಲೆ. ಮನುಷ್ಯ ಭೂಮಿಕೆ ಭಾರವಾಗಿ ಇರಬಾರದು ಅಂತಹವನಿಗೆ ಸುಖ,ಶಾಂತಿ ಲಭಿಸದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ.

ಕೋಡಿ ಶ್ರೀಗಳ ಚುನಾವಣಾ ಭವಿಷ್ಯದ ಸುತ್ತಮುತ್ತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+