ಲೋಕಸಭೆ ಕದನ : ಚುನಾವಣಾ ಸಮೀಕ್ಷೆಗಳ ಉಗ್ರಾಣ
ಬೆಂಗಳೂರು, ಮೇ. 22 : ಪ್ರಸ್ತುತ ಲೋಕಸಭೆಯ ಅವಧಿ ಇನ್ನೂ ಒಂದು ವರ್ಷ ಇರುವಾಗಲೆ ದೇಶದ ಚುಕ್ಕಾಣಿ ಯಾವ ಪಕ್ಷಕ್ಕೆ ಬಹುಮತ ಲಭಿಸಲಿದೆ, ಯಾವ ಪಕ್ಷ ಹಳ್ಳ ಹಿಡಿಯಲಿದೆ, ಯಾರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬ ಕುರಿತು ರಾಜಕೀಯ ಅಂಗಳದಲ್ಲಿ, ಮಾಧ್ಯಮಗಳಲ್ಲಿ, ಮತದಾರರಲ್ಲಿ ಭಾರೀ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
ಮುದ್ರಣ, ಟಿವಿ ಮಾಧ್ಯಮಗಳು ಸಮೀಕ್ಷೆ ನಡೆಸುವ ಸಂಸ್ಥೆಗಳ ಸಹಾಯದೊಂದಿಗೆ ಚುನಾವಣಾ ಸಮೀಕ್ಷೆ ಆರಂಭಿಸಿವೆ. ಎಬಿಪಿ ನ್ಯೂಸ್‌ಗಾಗಿ ಎಸಿ ನೀಲ್ಸನ್, ಹೆಡ್ ಲೈನ್ಸ್ ಟುಡೆಗಾಗಿ ಸಿ-ವೋಟರ್ ಮತ್ತು ಸಿಎನ್ಎನ್ ಐಬಿಎನ್‌ಗಾಗಿ ಜಿಎಫ್ಕೆ ಸಂಸ್ಥೆಗಳು ಚುನಾವಣಾ ಸಮೀಕ್ಷೆ ನಡೆಸಿ, ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಯುಪಿಎ ಸರಕಾರಕ್ಕೆ ನಡುಕ ತಂದಿಟ್ಟಿವೆ.
ಈ ಸಂಸ್ಥೆಗಳು ನಡೆಸುವ ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯಾಸತ್ಯತೆ ಹೊಂದಿರುತ್ತವೆ, ಎಷ್ಟರಮಟ್ಟಿಗೆ ನಿಜವಾಗುತ್ತವೆ ಎಂಬುದು ಚರ್ಚಾಸ್ಪದ ವಿಷಯ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಹಲವಾರು ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆ ನಡೆಸಿದ ನಂತರ ಈ ಸಮೀಕ್ಷೆಗಳು ಭಾರೀ ಓಘವನ್ನು ಪಡೆದುಕೊಂಡಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ಹೇಳಿದ್ದು ಈಗ ನಿಜವಾಗಿದೆ.

ಈಗ ನಡೆಸಿರುವ ಮೂರು ಸಮೀಕ್ಷೆಗಳು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಣಕ್ಕಿಳಿಸಿದರೆ ಭಾರೀ ಲಾಭ ಪಡೆದುಕೊಳ್ಳಲಿದೆ ಮತ್ತು ಯುಪಿಎ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದಿವೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಸಮೀಕ್ಷೆಗಳ ಪ್ರವಾಹವೇ ಹರಿದುಬರಲಿದೆ. ಮಾಧ್ಯಮ ಸಂಸ್ಥೆಗಳು ಕೂಡ ಜನರ ನಾಡಿಮಿಡಿತವನ್ನು ಅರಿಯಲು ತುದಿಗಾಲಲ್ಲಿ ನಿಂತಿವೆ. ಎಲ್ಲ ಸರ್ವೇಗಳ ಕೊಂಡಿಗಳು ಈ ಪುಟದಲ್ಲಿ ದೊರೆಯಲಿವೆ. ನಿರೀಕ್ಷಿಸುತ್ತಿರಿ.
| ಎಬಿಪಿ ನ್ಯೂಸ್ | ಹೆಡ್ ಲೈನ್ಸ್ ಟುಡೆ | |
| ಯುಪಿಎ | 136 | 131 |
| ಎನ್‌ಡಿಎ | 206 | 210 |
| ಇತರರು | 203 | 204 |
* ಸಿಎನ್ಎನ್ ಐಬಿಎನ್ ಸಮೀಕ್ಷೆ : ಯುಪಿಎ ಸೋಲು ಖಚಿತ
* ಎಬಿಪಿ ನ್ಯೂಸ್ ಸಮೀಕ್ಷೆ : ಕಾಂಗ್ರೆಸ್-ಯುಪಿಎ ಧೂಳೀಪಟ












Click it and Unblock the Notifications