ಲೈಂಗಿಕ ಕಿರುಕುಳ ವಿರುದ್ಧ ಕ್ರಮ: ಪ್ರೇಮ್ ಜಿ ವಿವಿ ಮಾದರಿ

ಈ ಸುದ್ದಿಯ ಹಿನ್ನೆಲೆಯಲ್ಲಿ 'ಕಾರ್ಪೊರೆಟ್ ಕಂಪನಿಗಳಲ್ಲಿ ಲೈಂಗಿಕ ಕಿರುಕುಳ ಎಂಬ ಪಿಡುಗು ಅವ್ಯಾಹತವಾಗಿದೆ' ಎಂಬ ಮಾತಿಗೆ ಮತ್ತೆ ಬಲ ಬಂದಿದೆ. ಆದರೆ ಈ ಮಧ್ಯೆ, ಪ್ರತಿಷ್ಠಿತ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯವು ತನ್ನ ಕ್ಯಾಂಪಸ್ಸಿನಲ್ಲಿ ನಡೆದಿರುವ ಮೂರು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ.
ಮೂರೂ ಪ್ರಕರಣಗಳಲ್ಲಿ ವ್ಯಕ್ತಿಗತ ವಿವರ ನೀಡದಿದ್ದರೂ ಬೆಂಗಳೂರಿನ Azim Premji University ತನ್ನ websiteನಲ್ಲಿ ಪ್ರಕರಣಗಳ ಬಗ್ಗೆ ಸ್ಥೂಲ ನೋಟ ಬೀರಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಲೈಂಗಿಕ ಕಿರುಕುಳ ಎಂಬ ಪಿಡುಗು ಹೆಚ್ಚಾಗುತ್ತಿರುವಗ ಇಂದಿನ ದಿನಗಳಲ್ಲಿ ಯಾವುದೇ ಕಾರ್ಪೊರೆಟ್ ಕಂಪನಿ ಅಥವಾ ವಿಶ್ವವಿದ್ಯಾನಿಲಯವು ಲೈಗಿಂಕ ಹಗರಣದ ಬಗ್ಗೆ ಹೀಗೆ ಸಾರ್ವಜನಿಕವಾಗಿ ಹೇಳಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ.
ಅಷ್ಟೇ ಅಲ್ಲ. ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯವು ಅಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಿದ್ದು, ವಿದ್ಯಾರ್ಥಿಗಳಿಗೆ ಆ ಬಗ್ಗೆ ವಿಶೇಷ ಪ್ರವಚನಗಳನ್ನೂ ನೀಡುತ್ತಿದೆ. ಅಂದಹಾಗೆ ಇಲ್ಲಿನ ವಿವಿಯಲ್ಲಿ 215 ಶಿಕ್ಷಣಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 70 ಮಂದಿ ಬೋಧಕ ವರ್ಗದವರು ಇದ್ದಾರೆ.












Click it and Unblock the Notifications