'ಮೋದಿಗಿಂತ ಆದಿ ಶಂಕರಾಚಾರ್ಯ ದೊಡ್ಡ ಕೊಲೆಪಾತಕಿ'

Posted By:
Subscribe to Oneindia Kannada
Adi Shanakarcharya is more hatchetman than Narendra Modi
ಮಂಡ್ಯ, ಮೇ.19: ಗುಜರಾತಿನಲ್ಲಿ ನರಮೇಧ ನಡೆಸಿದ ಆರೋಪ್ ಹೊತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿಗಿಂತ ಆದಿ ಶಂಕರಾಚಾರ್ಯ ದೊಡ್ಡ ಕೊಲೆಗಡುಕ ಎಂದು ವಿಚಾರವಾದಿ ಪ್ರೊ ಎಚ್.ಎಲ್ ಕೇಶವಮೂರ್ತಿ ಅವರು ಹೇಳಿಕೆ ನೀಡಿದ್ದಾರೆ.

ಗೋಕುಲ ಪ್ರಕಾಶನ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೇಶವಮೂರ್ತಿ, 9ನೇ ಶತಮಾನದ ಆದಿ ಶಂಕರಾಚಾರ್ಯ ಅವರನ್ನು ಹಿಂದೂ ಧರ್ಮ ಪುನರುತ್ಥಾನ ಮಾಡಿದ ಮಹಾನ್ ದಾರ್ಶನಿಕ ಎಂದು ಹಲವಾರು ಮಂದಿ ಬಣ್ಣಿಸುತ್ತಾರೆ.

ಆದರೆ, ವಾಸ್ತವದಲ್ಲಿ ಶಂಕರಾಚಾರ್ಯ ಅಂದಿನ ಕಾಲದಲ್ಲೇ ಸಾವಿರಾರು ಬೌದ್ಧರನ್ನು ಕೊಲೆ ಮಾಡಿಸಿದ್ದಲ್ಲದೆ ಬೌದ್ಧಸ್ತೂಪವನ್ನು ನಾಶಪಡಿಸಿದ್ದರು. ಎಲ್ಲೆಡೆ ಹಿಂದೂ ಧರ್ಮ ಸ್ಥಾಪನೆ, ಪುನರುತ್ಥಾನ ಹೆಸರಿನಲ್ಲಿ ಅನ್ಯಾಯ ಎಸಗಲಾಯಿತು. ಒಂದು ಧರ್ಮದ ಉದ್ಧಾರಕ್ಕಾಗಿ ಇನ್ನೊಂದು ಧರ್ಮ ನಾಶ ಪಡಿಸುವುದು ಎಷ್ಟು ಸರಿ ಎಂದು ಪ್ರೊ.ಕೇಶವಮೂರ್ತಿ ಪ್ರಶ್ನಿಸಿದ್ದಾರೆ.

ಹಾಗೇ ನೋಡಿದರೆ ಗುಜರಾತಿನಲ್ಲಿ ಒಂದು ಸಮುದಾಯದ ಹತ್ಯೆಗೆ ಕಾರಣರಾದ ನರೇಂದ್ರ ಮೋದಿ ಅವರ ಪಾತಕಕ್ಕಿಂತ ಆದಿ ಶಂಕರಾಚಾರ್ಯ ಅವರ ಕೊಲೆಗಡುಕತನವೇ ಹೆಚ್ಚಾಗಿ ಕಂಡು ಬರುತ್ತದೆ ಎಂದು ವಿವಾದಿತ ಹೇಳಿಕೆಯನ್ನು ಕೇಶವಮೂರ್ತಿ ನೀಡಿದ್ದಾರೆ.

ಭಾರತೀಯ ತತ್ವಜ್ಞಾನಿ, ಅದ್ವೈತ ಸಿದ್ಧಾಂತದ ಪ್ರವರ್ತಕ ಶಂಕರರು ಪ್ರತಿಪಾದಿಸಿದ ಕೆಲವು ಜೀವನತತ್ತ್ವಗಳನ್ನು ಇಲ್ಲಿ ಮೆಲುಕು ಹಾಕಿ...

"ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ
ನ ಚ ಶ್ರೋತ್ರಜಿಹ್ವೇ
ನ ಚ ಘ್ರಾಣ ನೇತ್ರೇ
ನ ಚ ವ್ಯೋಮ ಭೂಮಿರ್ನತೇಜೋನವಾಯುಃ
ಚಿದಾನಂದರೂಪಃ ಶಿವೋಹಂ ಶಿವೋಹಂ" (" ಆತ್ಮ ಷಟ್ಕ")

"ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವು ನಾನಲ್ಲ. ಜ್ಞಾನೇಂದ್ರಿಯಗಳಾದ ಕಿವಿ, ನಾಲಗೆ, ಮೂಗು, ಕಣ್ಣು, ಚರ್ಮ ಇವು ನಾನಲ್ಲ. ಪಂಚಭೂತಗಳಾದ ಆಕಾಶ, ಭೂಮಿ, ತೇಜಸ್ಸು, ವಾಯು, ಜಲ ಇವು ನಾನಲ್ಲ. ಚಿದಾನಂದರೂಪನಾದ ಶಿವನೇ ನಾನು, ಶಿವನೇ ನಾನು, ಶಿವನೇ ನಾನು." ಇಂಥ ಜೀವನದೃಷ್ಟಿಯನ್ನು ರೂಢಿಸಿಕೊಂಡರೆ ನಮಗೆ ಈ ಜೀವಿತದಲ್ಲಿ ಮೋಹಜನ್ಯ ಕಳವಳವೆಂಬುದಿಲ್ಲ ಎಂದು ಸಾರಿದ್ದರು.

ಬೌದ್ಧ, ಕಾಪಲಿಕ, ಗಣಪತ್ಯ, ಶಾಕ್ತ ಸೇರಿದಂತೆ ಹತ್ತು ಹಲವು ವಿಭಿನ್ನ ಸಂಪ್ರದಾಯ, ಆಚರಣೆಗಳಿಗೆ ಕಟ್ಟುನಿಟ್ಟಿನ ಮಾರ್ಗವನ್ನು ಆದಿ ಶಂಕರರು ಸಾರಿದ್ದರು. ಇನ್ನಷ್ಟು ಇಲ್ಲಿ ಓದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Adi Shanakarcharya was more danger hatchetman than Narendra Modi. Shanakaracharya killed Buddhist community in India which is crime said Prof HL Keshavamurthy in Mandya. He was speaking at the book release function organised by Gokula Publication
Please Wait while comments are loading...