ಹೊಸ ಸರ್ಕಾರ : ಅಧಿಕಾರಿಗಳ ವರ್ಗಾವಣೆ

ಮಂಗಳವಾರ ಎಂಟು ಐಪಿಎಸ್ ಮತ್ತು ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ಸಮಯದಲ್ಲಿ ವರ್ಗಾವಣೆ ಆದ ಕೆಲವು ಅಧಿಕಾರಿಗಳು ಈಗ ಸ್ವ ಸ್ಥಾನಗಳಿಗೆ ಮರಳಲಿದ್ದಾರೆ.
ಮೊದಲು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಸಚಿವ ಸಂಪುಟ ವಿಸ್ತರಣೆಯಾದ ನಂತರ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಿರ ಸರ್ಕಾರದ ಮೂಲಕ ಜನಪರ ಸರ್ಕಾರ ನಡೆಸುವ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಘ್ರವೇ ಆಡಳಿತಯಂತ್ರಕ್ಕೆ ಮೇಜರಿ ಸರ್ಜರಿ ಮಾಡಲು, ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಕೈ ಹಾಕುವ ಸಾಧ್ಯತೆ ಇದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
* ಸೌಮೇಂದು ಮುಖರ್ಜಿ - ಡಿಐಜಿ ಸಿಐಡಿ ಬೆಂಗಳೂರು
* ಟಿ.ಜಿ.ಕೃಷ್ಣಭಟ್ - ಡಿಸಿಪಿ ಪೂರ್ವ ಬೆಂಗಳೂರು
* ಎಂ.ಎನ್.ನಾಗರಾಜ್ - ಎಸ್ಪಿ ಚಿತ್ರದುರ್ಗ
* ಲಾಭು ರಾಂ - ಎಸ್ಪಿ ದಾವಣಗೆರೆ
* ಅನುಪಮ್ ಅಗರ್ ವಾಲ್ - ಎಸ್ಪಿ ರಾಮನಗರ
* ಎಂ.ಎನ್.ಅನುಚೇತ್ - ಎಸ್ಪಿ ಮಡಿಕೇರಿ
* ಬಿ.ರಮೇಶ್ - ಡಿಸಿಪಿ (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ
* ರವಿ ಡಿ.ಚನ್ನಣ್ಣನವರ್ - ಎಸ್ಪಿ ಸಿಐಡಿ ಸೈಬರ್ ಸೆಲ್
ಐಎಸ್ ಅಧಿಕಾರಿಗಳು
* ಪ್ರದೀಪ್ ಸಿಂಗ್ ಕರೋಲಾ - ಅಧ್ಯಕ್ಷರು (ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ)
* ದರ್ಪಣ್ ಜೈನ್ - ವ್ಯವಸ್ಥಾಪಕ ನಿರ್ದೇಶಕ (ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ)
* ಡಾ.ಎಂ.ಎನ್.ಅಜಯ ನಾಗಭೂಷಣ ( ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ )
ಅಧಿಕಾರಿಗಳನ್ನು ಯಾವ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಚುನಾವಣಾ ಸಮಯದಲ್ಲಿ ಚುನಾವಣಾ ಆಯೋಗದ ಆದೇಶದಂತೆ ವರ್ಗಾವಣೆಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಮರಳಿ ಅಧಿಕಾರ ಸ್ವೀಕರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಹರ್ಷ ಗುಪ್ತ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವನಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. (ಚುನಾವಣೆ ಕಾಲೇ... 13 ಜಿಲ್ಲಾಧಿಕಾರಿಗಳ ಎತ್ತಂಗಡಿ)












Click it and Unblock the Notifications