ಚುನಾವಣೆ ಕಾಲೇ... 13 ಜಿಲ್ಲಾಧಿಕಾರಿಗಳ ಎತ್ತಂಗಡಿ

ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತ ಮಟ್ಟದ 143 ಕಿರಿಯ ಮತ್ತು ಹಿರಿಯ ಶ್ರೇಣಿ ಅಧಿಕಾರಿಗಳ ವರ್ಗಾವಣೆಗೂ ಸೂಚನೆ ನೀಡಲಾಗಿದ್ದು ಪಟ್ಟಿ ಸಿದ್ಧಗೊಂಡಿದೆ. ಒಂದೆರಡು ದಿನಗಳಲ್ಲಿ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯವಾಗಿ ವಿ ಪೊನ್ನುರಾಜ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದರೆ ಪಿ ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಮಿಕ ಆಯುಕ್ತರಾಗಿದ್ದ (ಅದಕ್ಕೂ ಮುನ್ನ ಕೆಎಂಎಫ್ ಎಂಡಿ) ದೆಹಲಿ ಮೂಲದ ಹರ್ಷ ಗುಪ್ತಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ (ಎನ್ ಪ್ರಕಾಶ್ ಅವರ ಸ್ಥಾನಕ್ಕೆ) ವರ್ಗ ಮಾಡಲಾಗಿದೆ.
ಉಳಿದಂತೆ, ಶಂಭು ದಯಾಳ್ ಮೀನಾ- ಅಬಕಾರಿ ಇಲಾಖೆ ಆಯುಕ್ತ, ನವೀನ್‌ರಾಜ್ ಸಿಂಗ್- ರಾಮನಗರ ಜಿಲ್ಲಾಧಿಕಾರಿ, ಡಾ. ಎಂಎನ್ ಅಜಯ ನಾಗಭೂಷಣ್- ಮಂಡ್ಯ ಜಿಲ್ಲಾಧಿಕಾರಿ, ಸಿ ಶೀಖಾ- ಮೈಸೂರು ಜಿಲ್ಲಾಧಿಕಾರಿ,
ಡಾ ಜೆ ರವಿಶಂಕರ್- ಚಿತ್ರದುರ್ಗ ಜಿಲ್ಲಾಧಿಕಾರಿ, ವಿ ಅನ್ಬುಕುಮಾರ್- ಹಾವೇರಿ ಜಿಲ್ಲಾಧಿಕಾರಿ, ಡಾ.ಕೆಜಿ ಜಗದೀಶ- ಗುಲ್ಬರ್ಗ ಜಿಲ್ಲಾಧಿಕಾರಿ ಮತ್ತು ಮನೀಶ್ ವೌದ್ಗಿಲ್- ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಉಜ್ವಲ್‌ಕುಮಾರ್ ಘೋಷ್- ರಾಯಚೂರು ಜಿಲ್ಲಾಧಿಕಾರಿ ಹಾಗೂ ಪಿ ರಾಜೇಂದ್ರ ಚೋಲನ್ ಯಾದಗಿರಿ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.












Click it and Unblock the Notifications