ವಿಚ್ಛೇದಿತೆಯ ಗ್ಯಾಂಗ್ ರೇಪ್, ವಿಡಿಯೋ ಚಿತ್ರೀಕರಣ

ಬಾಧಿತ ಮಹಿಳೆ ಮೀರತ್ ನಿವಾಸಿ. ಕಳೆದ ಮೂರು ವರ್ಷಗಳಿಂದ ಆಕೆ ನೌಷಾದ್ ಎಂಬ ವ್ಯಕ್ತಿಯ ಜತೆ ವಾಸವಿದ್ದರು. ಆತ ಸದರಿ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಪೊಲೀಸ್ ವರಿಷ್ಠ ರಾಮ್ ಅಭಿಲಾಷ್ ತ್ರಿಪಾಠಿ ತಿಳಿಸಿದ್ದಾರೆ.
ತನಗೆ ಮತ್ತುಬರಿಸುವ ಔಷಧ ನೀಡಿ ನೌಷಾದ್ ಮತ್ತು ಅವನ ಗೆಳೆಯ ಓಂ ಪ್ರಕಾಶ್ ನನ್ನ ಮೇಲೆ ಅತ್ಯಾಚಾಋವೆಸಗಿದ್ದಾರೆ. ಅಲ್ಲದೆ ನಗ್ನಾವಸ್ಥೆಯಲ್ಲಿದ್ದ ನನ್ನ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಜತೆಗೆ ಅದನ್ನೆಲ್ಲ ಎಂಎಂಎಸ್ ಸಹ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಅಲವತ್ತುಕೊಂಡಿದ್ದಾರೆ.
ಬಾಧಿತ ಮಹಿಳೆ ವಿಚ್ಛೇದಿತೆ. ಮಹಿಳೆಗೆ ನಾಲ್ಕು ವರ್ಷದ ಮಗುವಿದೆ. 'ಅತ್ಯಾಚಾರ ಪ್ರಕರಣವನ್ನು ಬಹಿರಂಗಗೊಳಿಸಿದರೆ/ ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಆರೋಪಿಗಳು ಬೆದರಿಸಿದ್ದರು' ಎಂದು ಬಾಧಿತ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಪ್ರಕರಣದ ಸಂಬಂಧ ಪೊಲೀಸರು ಯಾರನ್ನೂ ಬಂಧಿಸಿಲ್ಲ.












Click it and Unblock the Notifications