ಮಾಜಿ ಸಿಎಂ ಮೇಲೆ ಕಾಮೆಂಟಿಗೆ ವಕೀಲೆ ಬಂಧನ

Hyd: Shocking FB post against Rosaiah
ಹೈದರಾಬಾದ್, ಮೇ.13: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಮುಕ್ತವಾಗಿ ಕಾಮೆಂಟ್ ಹಾಕಿದ್ದ ವಕೀಲರೊಬ್ಬರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತಮಿಳುನಾಡಿನ ಹಾಲಿ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಕಾಮೆಂಟ್ ಹಾಕಿದ ಆರೋಪವನ್ನು ವಕೀಲರ ಮೇಲೆ ಹೊರೆಸಲಾಗಿದೆ.

ತಮಿಳುನಾಡಿನ ರಾಜ್ಯಪಾಲ ರೋಶಯ್ಯ ಹಾಗೂ ಕಾಂಗ್ರೆಸ್ ಶಾಸಕ ಎ ಕೃಷ್ಣ ಮೋಹನ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ವಕೀಲೆಯ ಹೆಸರು ಜಯ ವಿದ್ಯಾಲ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕಾಶಂ ಜಿಲ್ಲೆಯ ಮೂಲದವರಾದ ಜಯಾ ಅವರು PUCL ವಕೀಲರ ಸಂಘದ ಸದಸ್ಯೆಯಾಗಿದ್ದಾರೆ. ಎಪ್ರಿಲ್ ನಲ್ಲಿ ಜಯಾ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಶಾಸಕ ಕೃಷ್ಣ ಮೋಹನ್ ವಿರುದ್ಧ ಅವಹೇಳನಕಾರಿ ಸಾಲುಗಳನ್ನು ಹಾಕಿದ್ದರು. ಕೃಷ್ಣ ಮೋಹನ್ ಅವರನ್ನು ಮತಿವಿಕಲ ಎಂದು ಜರೆದಿದ್ದರು. ಇದರಿಂದ ಕೋಪಗೊಂಡ ಶಾಸಕ ಕೃಷ್ಣ ಮೋಹನ್ ಅವರು ಏ.18 ವಿರುದ್ಧ ದೂರು ನೀಡಿದ್ದರು.

ಇದರ ಜೊತೆಗೆ ತಮಿಳುನಾಡಿನ ರಾಜ್ಯಪಾಲ ರೋಶಯ್ಯ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಶಾಸಕ ಕೃಷ್ಣ ಮೋಹನ್ ಅವರು ಹಲವಾರು ಭೂ ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ವಕೀಲೆ ಜಯಾ ಪೋಸ್ಟ್ ಮಾಡಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅನ್ವಯ ವಕೀಲೆ ಜಯಾ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕ ಕೃಷ್ಣ ಮೋಹನ್ ಹಾಗೂ ರಾಜ್ಯಪಾಲ ರೋಶಯ್ಯ ವಿರುದ್ಧ ಅವಹೇಳನಕಾರಿ ಸಾಲುಗಳನ್ನು ಹಾಕಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+