ಸಿದ್ದುಗೆ ಸಿದ್ಧಗಂಗಾಶ್ರೀ ಶುಭ ಹಾರೈಕೆ ಏನು ಗೊತ್ತಾ?

ಪತ್ರದಲ್ಲೇನಿದೆ, ನೀವೇ ಓದಿಕೊಳ್ಳಿ:
'ಸಿದ್ದರಾಮಯ್ಯ ಅವರೇ, ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದೀರಿ ಎಂದು ತಿಳಿದು ತುಂಬಾ ಸಂತೋಷವಾಯಿತು. ನೀವು ರಾಜಕೀಯ ಕ್ಷೇತ್ರದಲ್ಲಿ ಮಾಡುತ್ತಾ ಬಂದಿರುವ ನಿಸ್ವಾರ್ಥ, ಪ್ರಾಮಾಣಿಕ ಸೇವೆಗೆ ಸಂದಿರುವ ಅವಕಾಶವಿದು ಎಂದು ಭಾವಿಸಿರುತ್ತೇವೆ.
ನಿಮ್ಮ ನೇರ ನುಡಿ, ಸದ್ಭಾವದ ದೂರದೃಷ್ಟಿ, ಸರ್ವ ಜನಾಂಗದ ಸರ್ವಾಭಿವೃದ್ಧಿಯ ದೃಷ್ಟಿ ನೀಡಿದ್ದು ಶ್ಲಾಘನೀಯವಾಗಿದೆ.
ಈಗಾಗಲೇ ರಾಜ್ಯದ ರಾಜಕೀಯದಲ್ಲಿ ಅತ್ಯುತ್ತಮ ಕೀರ್ತಿ ಪಡೆದಿರುವ ಸಚಿವರಾಗಿ ಏಳು ಬಾರಿ ಸಮರ್ಥ ಬಜೆಟ್ ಮಂಡಿಸಿರುವ ನಿಮಗೆ ಕರ್ನಾಟಕವನ್ನು ಹೇಗೆ ಮುಂದುವರೆಸಬೇಕು ಎಂಬ ದೂರದೃಷ್ಟಿ ಇದೆ ಎಂದು ನಾವು ಅರಿತಿದ್ದೇವೆ. ದೀನ, ದಲಿತ, ಅಲ್ಪಸಂಖ್ಯಾತರ, ಅನಾಥರ, ಅಸಹಾಯಕರ ಆಪದ್ಭಾಂಧವರಾಗಿ ರಾಜ್ಯದ ಸರ್ವ ಜನಾಂಗದ ಏಳಿಗೆಗೆ ತಾವು ಶ್ರಮಿಸುತ್ತೀರಿ ಎಂಬುದಾಗಿ ಭಾವಿಸಿರುತ್ತೇವೆ.
ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕ ರಾಷ್ಟ್ರದ ಒಂದನೇ ರಾಜ್ಯವಾಗಲಿ ಎಂಬ ಆಶಾಭಾವನೆ ನಮ್ಮದಾಗಿದೆ. ಪರಮಾತ್ಮ ನಿಮಗೆ ಆಯುರಾರೋಗ್ಯಾದಿ ಅನುಗ್ರಹಿಸಲಿ' ಎಂದು ನಾಡಿನ ಸಾಕ್ಷೀಪ್ರಜ್ಞೆ ಡಾ. ಶಿವಕುಮಾರ ಸ್ವಾಮೀಜಿ ಅವರು ತಮ್ಮ ಶುಭ ಹಾರೈಕೆ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications