ಟಾಪ್- 200 ಪಟ್ಟಿಯಿಂದ ಹೊರಗಾದ IITs, IISc

ಬೆಂಗಳೂರು, ಮೇ 11: ಐಐಟಿ/ಐಐಎಸ್ಸಿ ಹೆಸರುಗಳು ಕಿವಿಗೆ ಬಿದ್ದರೆ ಶಿಕ್ಷಣ ಪ್ರೇಮಿಗೆ ಏನೋ ಒಂಥರಾ ಹೆಮ್ಮೆ, ಮೈ ಜುಮ್ಮೆನ್ನುತ್ತದೆ. ದೇಶದ ಉನ್ನತ ಶಿಕ್ಷಣ ರಂಗದಲ್ಲಿ ಮೊದಲಿಂದಲೂ ಕೇಳಿಬರುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರುಗಳು ಇವು. ಆದರೆ ಈಗ ವಿಶ್ವ ಶೈಕ್ಷಣಿಕ ಕ್ಷಿತಿಜದಿಂದ IITs, IISc ಹೊರಬಿದ್ದಿವೆ.

QS World University Rankings 2012-13 ಅಧ್ಯಯನ ಪ್ರಕಾರ ವಿಶ್ವದ ಮೊದಲ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವೊಂದೂ ವಿಶ್ವವಿದ್ಯಾಲಯವು ಸ್ಥಾನ ಪಡೆದಿಲ್ಲ. IIT-Bombayಗೆ ಮಾತ್ರ 212ನೇ ಸ್ಥಾನ ಪ್ರಾಪ್ತಿಯಾಗಿದೆ.

ಅದರ ಮುಂದೆ (ಹಿಂದೆ) IIT-Kanpur 278ನೇ ಸ್ಥಾನದಲ್ಲಿದೆ. 2011-12ನೇ ಶೈಕ್ಷಣಿಕ ವರ್ಷದಲ್ಲಿ 200ನೇ ಸ್ಥಾನ ಗಳಿಸಿದ್ದ ನಗರದ Indian Institute of Science ಆ ಪಟ್ಟ ಬಿಟ್ಟುಕೊಟ್ಟಿದೆ.

Bangalore IISc- IITs out of Top-200 list- MIT tops

ಜಾಗತಿಕ ಮಟ್ಟದಲ್ಲಿ 70,000 ಶಿಕ್ಷಣ ತಜ್ಞರು ಮತ್ತು ನೇಮಕಾತಿ ಸಂಪನ್ಮೂಲ ವ್ಯಕ್ತಿಗಳನ್ನು ಸಂದರ್ಶಿಸಿ, ಅವರ ಅಮೂಲ್ಯ ಅನಿಸಿಕೆ/ಅನುಮೋದನೆಗಳಿಗೆ ಮಾನ್ಯತೆ ನೀಡುತ್ತಾ QS Rankings ಸಿದ್ಧಪಡಿಸಲಾಗುತ್ತದೆ.

ಹಾಗಾದರೆ ವಿಶ್ವದಲ್ಲಿ ಯಾವುದಪ್ಪಾ No. 1 ಯೂನಿವರ್ಸಿಟಿ ಅಂದರೆ Massachussets Institute of Technology (MIT). ಹಾರ್ವರ್ಡ್, ಬರ್ಕಲಿ, ಆಕ್ಸ್ ಫರ್ಡ್ ಯೂನಿವರ್ಸಿಟಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾಗಿ ಮುಂದುವರಿದಿವೆ.

ಅಂದಹಾಗೆ IIT-Madras ಮತ್ತು Bombay chemical and structural engineering ಶಿಕ್ಷಣದಲ್ಲಿ 39ನೇ ಸ್ಥಾನಗಳಿಸಿವೆ. ಸಮಾಧಾನಕರ ಸಂಗತಿಯೆಂದರೆ computer science and information systems ವಿಭಾಗದಲ್ಲಿ Bombay, Delhi ಮತ್ತು Kanpur IITಗಳು ಇನ್ನೂ ಹೆಸರುವಾಸಿಯಾಗಿದ್ದು, ಟಾಪ್-100 ನಲ್ಲಿವೆ.

ಆಂಗ್ಲ ಭಾಷೆ ಮತ್ತು ಸಾಹಿತ್ಯ ವಿಷಯದಲ್ಲಿ ದೆಹಲಿ ಯೂನಿವರ್ಸಿಟಿ ಟಾಪ್-100ನಲ್ಲಿ ಸ್ಥಾನ ಪಡೆದಿದೆ. ಕಾನೂನು, ರಾಜನೀತಿ, ಅಂತಾರಾಷ್ಟ್ರೀಯ ಸಂಬಂಧಗಳು ಮುಂತಾದ ವಿಷಯಗಳಲ್ಲಿ ಭಾರತದ ಯೂನಿವರ್ಸಿಗಳು ಹೇಳಹೆಸರಿಲ್ಲದಂತಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+