ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಶಾಸಕರ ಬಗ್ಗೆ ಒಂದಷ್ಟು ಕುತೂಹಲ ಸಂಗತಿಗಳು

By Srinath
|
Google Oneindia Kannada News

ಬೆಂಗಳೂರು, ಮೇ 11: ಹದಿನಾಲ್ಕನೆಯ ಶಾಸನಸಭೆಗೆ ಆರಿಸಿ ಬಂದಿರುವ 223 ಶಾಸಕರ ಪೈಕಿ ಕೋಟ್ಯಧಿಪತಿಗಳು 203 ಮಂದಿ ಇದ್ದಾರೆ. ಅಂದರೆ ಸರಾಸರಿಯಲ್ಲಿ ಲೆಕ್ಕ ಹಾಕಿದಾಗ ಇವರು ತಲಾ 23 ಕೋಟಿ ರೂ ಆಸ್ತಿವಂತರು. ಅದೇ ಹಿಂದಿನ ಚುನಾವಣೆಯಲ್ಲಿ ಇದರ ಅರ್ಧಕ್ಕಿಂತ ಕಡಿಮೆ ಅಂದರೆ ಶಾಸಕರ ತಲಾ ಆಸ್ತಿ 10 ಕೋಟಿ ರೂ ಇತ್ತು. ಅಲ್ಲಿಗೆ ಐದು ವರ್ಷದಲ್ಲಿ ನಮ್ಮನ್ನಾಳುವ ಶಾಸಕರ ಆಸ್ತಿ ದುಪ್ಪಟ್ಟು ಹೆಚ್ಚಾಗಿದೆ.

Karnataka Election Watch (KEW) ಸಂಸ್ಥೆಯು 218 ಶಾಸಕರು ಒದಗಿಸಿರುವ ಆಸ್ತಿ ವಿವರವನ್ನು ಅಧ್ಯಯನ ಮಾಡಿ ಈ ಮಾಹಿತಿ ಒದಗಿಸಿದೆ. 2008ರಲ್ಲಿ ಶೇ. 63ರಷ್ಟು ಮಂದಿ ಕೋಟ್ಯಧಿಪತಿಗಳು ಆಗಿದ್ದರು.

ಮರು ಆಯ್ಕೆಗೊಂಡ 92 ಶಾಸಕರ ಸ್ವಘೋಷಿತ ಆಸ್ತಿ ಅಫಿಡವಿಟ್ ಅನ್ನು ವಿಶ್ಲೇಷಿಸಿರುವ ಸದರಿ NGO ಸಂಸ್ಥೆ, ಈ 92 ಶಾಸಕರ ಸರಾಸರಿ ಆಸ್ತಿ ಆಗ 17.53 ಕೋಟಿ ರೂ. ಇತ್ತು. ಅದೀಗ 30.15 ಕೋಟಿ ಗೆ ತಲುಪಿದ್ದು, ಶೇ. 72ರಷ್ಟು ಏರಿಕೆ ಕಂಡಿದೆ ಎಂದು ಚುನಾವಣಾ ಕಾವಲು ಸಮಿತಿಯ ಅಧ್ಯಕ್ಷ ತ್ರಿಲೋಚನ್ ಶಾಸ್ತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಅಗ್ರರು:

ಕಾಂಗ್ರೆಸ್ ಶಾಸಕರು ಅಗ್ರರು:

ಅತಿ ಹೆಚ್ಚು ಆಸ್ತಿ ಏರಿಕೆ ಕಂಡಿರುವವರು ಶಾಸಕ ಡಿಕೆ ಶಿವಕುಮಾರ್ ಅವರು. 2008ರಲ್ಲಿ ಇವರ ಬಳಿ 75.5 ಕೋಟಿ ರೂ. ಇತ್ತು. ಅದೀಗ 251 ಕೋಟಿ ರೂ. ಗೆ ತಲುಪಿದೆ. ಅವರ ನಂತರ ಪ್ರಿಯಕೃಷ್ಣ ಅವರ ಆಸ್ತಿ ಏರಿಕೆ 767.7 ಕೋಟಿ ರೂ. ನಿಂದ 910.9 ಕೋಟಿಗೆ ಹೆಚ್ಚಾಗಿದೆ. ಇನ್ನು, ಸಂತೋಷ್ ಲಾಡ್ ಅವರದ್ದು 61.5 ಕೋಟಿ ರೂ. ಇದ್ದದ್ದು 186.4 ಕೋಟಿ ಆಗಿದೆ. ಈ ಮೂವರೂ ಕಾಂಗ್ರೆಸ್ ಶಾಸಕರು. ಅಂದಹಾಗೆ ಕೋಟ್ಯಧಿಪತಿಗಳು ಮತ್ತು ಅಪರಾಧ ಹಿನ್ನೆಲೆಯಿರುವವರಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚು.

ಇನ್ನು ಪಕ್ಷಾವಾರು ನೋಡಿದರೆ ಮುಖ್ಯವಾಗಿ ಕಾಂಗ್ರೆಸ್‌ನ 112 (ಶೇ.95), ಬಿಜೆಪಿ 37 (ಶೇ.93), ಜೆಡಿಎಸ್ 36 (ಶೇ.95), ಬಿಎಸ್‌ಆರ್ ಕಾಂಗ್ರೆಸ್ 3 (ಶೇ.75), ಕೆಜೆಪಿ 6 (ಶೇ.100) ಮಂದಿ ಕೋಟ್ಯಧಿಪತಿಗಳು ಇದ್ದಾರೆ. ಉಳಿದಂತೆ ಕೆಎಂಪಿ 145 ಕೋಟಿ ರೂ. (ಅಶೋಕ್ ಖೇಣಿ) ಎಸ್ ಕೆಪಿ (ಸರ್ವೋದಯ ಪಕ್ಷದ ಪುಟ್ಟಣ್ಣಯ್ಯ) 54 ಲಕ್ಷ, ಎಸ್ ಪಿ (ಸಿಪಿ ಯೋಗೀಶ್ವರ್) 13 ಕೋಟಿ, 7 ಪಕ್ಷೇತರರು 22 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಯೋಗೀಶ್ವರ್ ವಿರುದ್ಧ ಗರಿಷ್ಠ ಕೇಸುಗಳು:

ಯೋಗೀಶ್ವರ್ ವಿರುದ್ಧ ಗರಿಷ್ಠ ಕೇಸುಗಳು:

ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿರುವ 74 ಶಾಸಕರಲ್ಲಿ ಕಾಂಗ್ರೆಸ್ 37 ಕೇಸುಗಳು (ಶೇ.31), ಬಿಜೆಪಿ 13 (ಶೇ.33), ಜೆಡಿಎಸ್ 12 (ಶೇ.32), ಕೆಜೆಪಿ 3 (ಶೇ.50), ಬಿಎಸ್ಸಾರ್ 2 (ಶೇ.50), ಪಕ್ಷೇತರರು 4 (ಶೇ.44) ಹಾಗೂ ಅಶೋಕ್ ಖೇಣಿ, ಯೋಗೀಶ್ವರ್ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಯೋಗೀಶ್ವರ್ ವಿರುದ್ಧ ಗರಿಷ್ಠ ಕೇಸುಗಳು ದಾಖಲಾಗಿವೆ.ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿರುವ 74 ಶಾಸಕರಲ್ಲಿ 39 ಶಾಸಕರು ಗುರುತರ ಅಪರಾಧಗಳಾದ ಕೊಲೆ ಯತ್ನ, ಅಪಹರಣ, ದರೋಡೆ, ಅತ್ಯಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡ ಆರೋಪ ಪ್ರಕರಣಗಳ ಕುರಿತು ಘೋಷಿಸಿಕೊಂಡಿದ್ದಾರೆ

ಕೊಲೆ ಆರೋಪಹೊತ್ತ 5 ಶಾಸಕರು

ಕೊಲೆ ಆರೋಪಹೊತ್ತ 5 ಶಾಸಕರು

ಕೊಲೆಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ 5 ಶಾಸಕರು ಭಾಗಿಯಾಗಿದ್ದಾರೆ. ಅವರುಗಳು - ಕಾಂಗ್ರೆಸ್‌ ಪಕ್ಷದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಸಿರಗುಪ್ಪ ಶಾಸಕ ಬಿಎಂ ನಾಗರಾಜು, ಬೆಳಗಾವಿ ದಕ್ಷಿಣ ಕ್ಷೇತ್ರದ ಪಕ್ಷೇತರ ಶಾಸಕ ಸಾಂಬಾಜಿ ಲಕ್ಷಣ್ ಪಾಟೀಲ್, ಬಿಜೆಪಿಯ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ ಮತ್ತು ಬಿಎಸ್ಸಾರ್ ಪಕ್ಷದ ಅಧ್ಯಕ್ಷ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ ಶ್ರೀರಾಮುಲು.

5ನೇ ತರಗತಿಗಿಂತ ಹೆಚ್ಚು ಓದದ ಮೂವರು

5ನೇ ತರಗತಿಗಿಂತ ಹೆಚ್ಚು ಓದದ ಮೂವರು

ವಿದ್ಯಾರ್ಹತೆ: ವಿಶ್ಲೇಷಿಸಿದ 218 ಶಾಸಕರಲ್ಲಿ 5ನೆ ತರಗತಿ ಓದಿದವರು ಮೂವರು, 8ನೇ ತರಗತಿ - 9 ಮಂದಿ, ಎಸೆಸೆಲ್ಸಿ - 25 ಮಂದಿ, ಪಿಯುಸಿ - 39 ಮಂದಿ, ಪದವಿ - 65 ಮಂದಿ, ವೃತ್ತಿ ಶಿಕ್ಷಣ ಪದವಿ - 51 ಮಂದಿ, ಸ್ನಾತಕೋತ್ತರ ಪದವೀಧರರು - 21 ಮಂದಿ, ವೈದ್ಯ - 1 ಮಂದಿ, ಇತರೆ - 3 ಮಂದಿ.

ಮಹಿಳೆಯರ ಲೆಕ್ಕಾಚಾರ ಹೀಗಿದೆ:

ಮಹಿಳೆಯರ ಲೆಕ್ಕಾಚಾರ ಹೀಗಿದೆ:

ಈ ಬಾರಿ ವಿಧಾನಸಭೆಗೆ ಹೊಸದಾಗಿ ಆರಿಸಿ ಬಂದಿರುವ ಮಹಿಳೆಯರ ಸಂಖ್ಯೆ 5 (ಶೇ. 2). ಅದೇ 2008ರಲ್ಲಿ ಕೇವಲ 3 ಮಹಿಳೆಯರು ಹೊಸದಾಗಿ ವಿಧಾನಸಭೆ ಮಟ್ಟಿಲು ಹತ್ತಿದ್ದರು. 17 ಶಾಸಕಿಯರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 8 ಶಾಸಕರು 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಎನ್ನುತ್ತಾರೆ ತ್ರಿಲೋಚನ್ ಶಾಸ್ತ್ರಿ.

ರವಿ - ಮುನಿರಾಜು ಆಸ್ತಿ ಕರಗುತ್ತಿದೆ!

ರವಿ - ಮುನಿರಾಜು ಆಸ್ತಿ ಕರಗುತ್ತಿದೆ!

ಕುತೂಹಲದ ಸಂಗತಿಯೆಂದರೆ ಶಾಸಕ ಸಿಟಿ ರವಿ 2008ರಲ್ಲಿ 7.85 ಕೋಟಿ ಇದ್ದ ಆಸ್ತಿ ಈಗ 5.59 ಕೋಟಿಗೆ ಇಳಿಕೆಯಾಗಿದೆ (ಶೇ.54 ಕಡಿಮೆ) ಮತ್ತು ದಾಸರಹಳ್ಳಿ ಶಾಸಕ ಎಸ್ ಮುನಿರಾಜು 20.12 ಕೋಟಿಯಿಂದ 13.75 ಕೋಟಿಗೆ ಇಳಿಕೆಯಾಗಿದೆ (ಶೇ.32) ಎಂದು ಘೋಷಿಸಿದ್ದಾರೆ.

ಕಡಿಮೆ ಆಸ್ತಿವಂತರೂ ಇದ್ದಾರೆ:

ಕಡಿಮೆ ಆಸ್ತಿವಂತರೂ ಇದ್ದಾರೆ:

ಮೂವರು ಶಾಸಕರ ಆಸ್ತಿ 50 ಲಕ್ಷ ರೂ ಗಿಂತ ಕಡಿಮೆ ಇದೆ. ಕಾಂಗ್ರೆಸ್‌ನ ಜಗಳೂರು ಶಾಸಕ ಎಚ್ ಪಿ ರಾಜೇಶ್ (7.50 ಲಕ್ಷ ರೂ), ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲ್ (39.75 ಲಕ್ಷ) ಹಾಗೂ ಶಿರಹಟ್ಟಿ ಕ್ಷೇತ್ರದ ರಾಮಕೃಷ್ಣ ಸಿದ್ದಲಿಂಗಪ್ಪ 40.67 ಲಕ್ಷ ರೂ ಆಸ್ತಿ ಘೋಷಿಸಿದ್ದಾರೆ.

10 ಶಾಸಕರ ಬಳಿ ಪ್ಯಾನ್ ಕಾರ್ಡೇ ಇಲ್ಲ:

10 ಶಾಸಕರ ಬಳಿ ಪ್ಯಾನ್ ಕಾರ್ಡೇ ಇಲ್ಲ:

ಕೃಷಿಕರು ಎಂದು ಹೇಳಿಕೊಂಡು ಲಕ್ಷಾಂತರ ರೂ. ಆಸ್ತಿ, ಆದಾಯ ಹೊಂದಿದ್ದರೂ ಪ್ಯಾನ್‌ ಕಾರ್ಡ್ ಇಲ್ಲವೆಂದು ಕೆಎಸ್ ಪುಟ್ಟಣ್ಣಯ್ಯ, ಜಿ ರಾಮಕೃಷ್ಣ, ತಿಪ್ಪೇಸ್ವಾಮಿ, ಬಿಜಿ ಗೋವಿಂದಪ್ಪ ಮತ್ತಿತರ 10 ಶಾಸಕರು ಹೇಳಿಕೊಂಡಿದ್ದಾರೆ.

English summary
14th Karnataka Assembly- MLAs average wealth Rs 23 crore. he average asset per MLA in the 2013 Karnataka Assembly elections is Rs 23.54 crore, a nearly 135 per cent increase compared to the previous 2008 poll, when it was Rs 10.02 crore, according to the NGO Karnataka Election Watch (KEW).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X