ಸಿದ್ದರಾಮಯ್ಯ V/S ಎಚ್ ಡಿ ಕುಮಾರಸ್ವಾಮಿ !

ಏಕೆಂದರೆ ಅಲ್ಲೇ ಇರುವುದು ಸ್ವಾರಸ್ಯ. ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆಗಿಬಿಟ್ಟರೆ... ರಣ ಹಸಿವು ಅನುಭವಿಸುತ್ತಿರುವ ಜೆಡಿಎಸ್ ನೇತಾ ದೇವೇಗೌಡರು ದಿಢಿಗ್ಗನೆ ಎದ್ದು ಕುಳಿತುಬಿಡುತ್ತಾರೆ. ಅಸಲಿಗೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ನೀಡಲಾರದೆ ಅಲ್ವೇ ಅವರನ್ನು ಪಕ್ಷದಿಂದ ಹೊರಹಾಕಿದ್ದು. ಅಂತಹುದರಲ್ಲಿ ತಮ್ಮ ಕಣ್ಣೆದುರಿಗೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಬಿಟ್ಟರೆ ದೇವೇಗೌಡರು ನಿದ್ದೆಗೆಡಿಸಿಕೊಳ್ಳುವುದಿಲ್ವೇ!?
ಹಾಗಂತಲೇ, ತಮ್ಮ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನು ಫೀಲ್ಡಿಗೆ ಬಿಡುತ್ತಾರೆ. ಜತೆಗೆ ತಮ್ಮ ಪುತ್ರನೇ ಮುಖ್ಯಮಂತ್ರಿ ಆಗಲಿಲ್ಲವಲ್ಲಾ ಎಂಬ ಕೊರಗೂ ಅವರನ್ನು ಬಾಧಿಸತೊಡಗುತ್ತದೆ. ಸೋ, ಅತ್ತ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಂತೆ ಇತ್ತ ವಿರೋಧಪಕ್ಷದ ನಾಯಕನನ್ನಾಗಿ ತಮ್ಮ ಪುತ್ರ ಕುಮಾರಸ್ವಾಮಿಯನ್ನು ಸಜ್ಜುಗೊಳಿಸುತ್ತಾರೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ' ಅವರನ್ನು ಕಾಡಲು, ಅವರನ್ನು ನೇರಾನೇರ ಸದೆಬಡಿಯಲು ಕುಮಾರಸ್ವಾಮಿಯೇ ಸರಿ ಎಂಬ ತೀರ್ಮಾನಕ್ಕೆ ಬರುವ ಗೌಡರು ಶತಾಯಗತಾಯ ಕುಮಾರಸ್ವಾಮಿಯನ್ನೇ ವಿರೋಧಪಕ್ಷದ ನಾಯಕನಾಗುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿಯೇ, ಈಗ ಬಿಜೆಪಿ ಜತೆ ಫಾರ್ಟಿ-ಫಾರ್ಟಿ ಸಮ ತೂಕದಲ್ಲಿರುವಾಗ, ತಮ್ಮ ಜೆಡಿಎಸ್ ಪಕ್ಷದ ವತಿಯಿಂದ ಕುಮಾರಸ್ವಾಮಿಯೇ ವಿರೋಧಪಕ್ಷದ ನಾಯಕನಾಗಲಿ ಎಂದು ಪದ್ಮನಾಭನಗರದಿಂದ ಫರ್ಮಾನು ಹೊರಡಿಸುತ್ತಾರೆ.
ಇಂಟರೆಸ್ಟಿಂಗ್ ಅಂದರೆ ಇದಕ್ಕೆ ಸ್ವತಃ ಬಿಜೆಪಿಯೇ ಮುಂದೆ ಬಂದು ದೇವೇಗೌಡರ ಜತೆ ಕೈಜೋಡಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಒಂದು ವೇಳೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದಿದ್ದರೆ ಹಾಲುಂಡ ಸಂತೋಷದಲ್ಲಿ ದೇವೇಗೌಡರು 'ವಿರೋಧ ಪಕ್ಷದ ನಾಯಕನ ಸ್ಥಾನದ ಗೊಡವೆ ನಮಗೆ ಬೇಡ ಕುಮಾರ! ನೀನು ಬೇಕಾದರೆ ಶಾಸಕನಾದರೂ ಆಗು. ಇಲ್ಲಾಂದ್ರೆ ನನ್ಜತೆ ದಿಲ್ಲಿಯಲ್ಲೇ ಇದ್ದುಬಿಡು' ಎಂದು ಹೇಳಲೂಬಹುದು. ಎಲ್ಲ ಗೌಡರ ಚಿತ್ತವನ್ನು ಅವಲಂಬಿಸುತ್ತದೆ; ಜತೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೋ/ಇಲ್ವೋ ಎಂಬುದನ್ನೂ ಅವಲಂಬಿಸುತ್ತದೆ! ಅಲ್ಲಿಯವರೆಗೂ, ಕೆಪಿಸಿಸಿ ಕಚೇರಿ ರೌಂಡ್ ಹಾಕೋಣ ಬನ್ನಿ.












Click it and Unblock the Notifications