ಬಿಜೆಪಿಗೆ ತಕ್ಕ ಪಾಠ ಕಲಿಸಿದ ಸಂತೃಪ್ತಿ ಸಿಕ್ಕಿದೆ: ಶೋಭಾ

ಮಾಜಿ ಸಿಎಂ ಯಡಿಯೂರಪ್ಪ ಸಾರಥ್ಯದ ಕರ್ನಾಟಕ ಜನತಾ ಪಕ್ಷಕ್ಕೆ ಇನ್ನೂ ಆರೇ ತಿಂಗಳು. ಆದರೂ ಈ ಅಲ್ಪಾವಧಿಯಲ್ಲೇ ರಾಜ್ಯದ ಮೂಲೆಮೂಲೆಗೂ ತಲುಪಿ, ಪಕ್ಷವನ್ನು ಕಟ್ಟಲಾಗಿದೆ. ಇನ್ನೂ ಹೆಚ್ಚು ಕಾಲಾವಕಾಶ ಇದ್ದಿದ್ದರೆ ಪಕ್ಷವು ಇನ್ನೂ ಒಳ್ಳೆಯ ಸಾಧನೆ ಮಾಡುತ್ತಿತ್ತು ಎಂದು ಚುನಾವಣೋತ್ತರ ಪ್ರತಿಕ್ರಿಯೆಯಲ್ಲಿ ಶೋಭಾ ಹೇಳಿದ್ದಾರೆ.
ತಾವು ಬಿಜೆಪಿಯ ಸಚಿವ ಎಸ್ ಸುರೇಶ್ ಕುಮಾರ್ ಅವರೆದುರು ರಾಜಾಜಿನಗರ ಕ್ಷೇತ್ರದಲ್ಲಿ ಸೋತಿರುವ ಬಗ್ಗೆ ಮಾತನಾಡಿದ ಶೋಭಾ ಅವರು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ವೈಯಕ್ತಿಕ ಸ್ಪರ್ಧೆ ತನಗೆ ಎರಡನೆಯ ಪ್ರಾಶಸ್ತ್ರ್ಯವಾಗಿತ್ತು. ಪಕ್ಷಕ್ಕೆ ಸಂಬಂಧಪಟ್ಟಂತೆ ಬಿಜೆಪಿಯನ್ನು ಸೋಲಿಸುವುದು ಮೊದಲ ಆದ್ಯತೆ/ಗುರಿಯಾಘಿತ್ತು. ಅದು ಈಡೇರಿದೆ ಎಂಬ ಸಂತೃಪ್ತಿ ಇದೆ ಎಂದು ಅವರು ತಮ್ಮ ಸೋಲನ್ನು ವಿಶ್ಲೇಷಿಸಿದರು.
ಬಿಜೆಪಿ ಆಧಾರರಹಿತ ಆರೋಪಗಳನ್ನು ಮಾಡುತ್ತಿತ್ತು. ಅದೇ ಆ ಪಕ್ಷಕ್ಕೆ ಭಾರಿ ಮುಳುವಾಯಿತು ಎಂದೂ ಶೋಭಾ ಹೇಳಿದರು. ನಾನು ರಾಜಾಜಿನಗರ ಕ್ಷೇತ್ರಕ್ಕೆ ಹೊಸಬಳು. ಆದರೂ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಿದೆ. 2008ರ ಚುನಾವಣೆಯಲ್ಲಿ ಶೋಭಾ ಅವರು ಪಕ್ಕದ ಯಶವಂತಪುರ ಕ್ಷೇತ್ರದಿಂದ ಆರಿಸಿಬಂದಿದ್ದರು.












Click it and Unblock the Notifications