ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್

ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದೆ ಎನ್ನುವುದಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಪಕ್ಷದ ಪರ ಪ್ರಚಾರಕ್ಕೆ ನಾವು ಕ್ಷೇತ್ರಗಳನ್ನು ಸುತ್ತಾಡುತ್ತಿದ್ದಾಗ ನಮಗೆ ಆದ ಅನುಭವದ ಮಾತುಗಳು.
ಹೋದ ಸಲ ಬಿಜೆಪಿಯನ್ನು ಬೆಂಬಲಿಸಿದ ಬಹುತೇಕರು ಅದರಲ್ಲಿ ಮುಖ್ಯವಾಗಿ ಯುವಕರು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದ ನಾಯಕರಿಂದ ಅವಮಾನವಾಗಿದೆ.
ಈ ಬೆಳವಣಿಗೆ ಬಿಜೆಪಿಯ ಪಾಲಿಗೆ ಒಳ್ಳೆದಲ್ಲ. ಕಳೆದ ಐದು ವರ್ಷಗಳಲ್ಲಿನ ಸರಕಾರದ ದುರಾಡಳಿತ ನೋಡಿ ಜನ ರೋಸಿ ಹೋಗಿದ್ದಾರೆ. ಪರ ಊರಿನಿಂದ ಬಂದು ಮಂಗಳೂರು ಮತ್ತು ಉಡುಪಿಯಲ್ಲಿ ನೆಲೆಸಿರುವವರು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿದ್ದಾರೆಂದು ಖಾದರ್ ಹೇಳಿದ್ದಾರೆ.
ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು, ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ, ಸಾಲು ಸಾಲು ಹಗರಣಗಳಿಂದಾಗಿ ಈ ಬಾರಿ ಬರೀ ಈ ಎರಡು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದೆಲ್ಲಡೆ ನೆಲಕಚ್ಚಲಿದೆ ಎಂದು ಖಾದರ್ ವಿಶ್ವಾಸದ ಮಾತನ್ನಾಡಿದ್ದಾರೆ.












Click it and Unblock the Notifications