ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರ ಡಿಸ್ಟಿಂಕ್ಷನ್; ಆದ್ರೆ ದೀಪದ ಕೆಳಗೆ ಕತ್ತಲು

By Srinath
|
Google Oneindia Kannada News

Maximum in Chickballapur Dist State Chief Electoral Officer Anilkumar Jha
ಬೆಂಗಳೂರು, ಮೇ 6: ರಾಜ್ಯದ ಮತದಾರರು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಆದರೆ ಅದೇನೋ ಹೇಳ್ತಾರಲ್ಲ - ದೀಪದ ಕೆಳಗೆ ಕತ್ತಲು ಅಂತ. ಹಾಗೆ...

ಇಡೀ ರಾಜ್ಯಕ್ಕೆ ಮಾದರಿಯಾಗಬೇಕಿದ್ದ ರಾಜಧಾನಿಯ ಸುಶಿಕ್ಷಿತ, ಜವಾಬ್ದಾರಿಯುತ ಮತದಾರ ಹೊಣೆಗೇಡಿತನ ಪ್ರದರ್ಶಿಸಿ 'ಅಟ್ಟರ್ ಫ್ಲಾಪ್' ಆಗಿದ್ದಾನೆ. ಇನ್ನು, ಈತ ನೀಡಿರುವ ಫಲಿತಾಂಶ ಹೇಗಿರುತ್ತದೋ ಬುಧವಾರ ಗೊತ್ತಾಗಲಿದೆ. ಆಗ ಮತ್ತಷ್ಟು ನಿರಾಸೆ ಕಟ್ಟಿಟ್ಟಬುತ್ತಿ ಎಂದು ಈಗಲೇ ಹೇಳಬಹುದು.

ಏನಪಾ ಅಂದರೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಅವರು ಸೋಮವಾರ ಸಂಜೆ ನೀಡಿರುವ ಅಧಿಕೃತ consolidated ಮಾಹಿತಿಯ ಪ್ರಕಾರ ಇಡೀ ರಾಜ್ಯದಲ್ಲಿ ಮತದಾರ ಡಿಸ್ಟಿಂಕ್ಷನಿನಲ್ಲಿ ಪಾಸ್ ಆಗಿದ್ದರೆ ರಾಜಧಾನಿಯ ಮತದಾರ ಏದುಸಿರುಬಿಟ್ಟುಕೊಂಡು ಶೇ. 57ರಷ್ಟು ಪ್ರಮಾಣದಲ್ಲಿ ಮತ ಚಲಾಯಿಸಿದ್ದಾನೆ. ಪಕ್ಕದಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರಮಾಣದಲ್ಲಿ ಮತದಾನವಾಗಿದೆ.

ಭಾನುವಾರ ರಾಜ್ಯಾದ್ಯಂತ ನಡೆದ (ಪಿರಿಯಾಪಟ್ಟಣ ಹೊರತುಪಡಿಸಿ) ಮತದಾನದಲ್ಲಿ ಶೇ 71.29 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಕಳೆದ 35 ವರ್ಷಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದ ಹೆಗ್ಗಳಿಕೆಯ ಸಾಧನೆ ಮಾಡಿದ್ದಾನೆ. ರಾಜ್ಯದ ಮತದಾರ ಏನೇ ತೀರ್ಪು ನೀಡಿರಲಿ, ಯಾವುದೇ ಪಕ್ಷ / ಅಭ್ಯರ್ಥಿಯನ್ನು ಚುನಾಯಿಸಿರಲಿ ಆದರೆ ನಿಜಕ್ಕೂ ಆತ ಅಭಿನಂದನಾರ್ಹ. ಆತನ ಶ್ರಮ ನಿರರ್ಥಕವಾಗದೆ ಮುಂದಿನ 5 ವರ್ಷ ಕಾಲ ರಾಜ್ಯ ಉತ್ತಮ ಆಡಳಿತ ಕಾಣುವಂತಾಗಲಿ ಎಂಬ ಸದಾಶಯ ಎಲ್ಲೆಡೆಯಿಂದಲೂ ವ್ಯಕ್ತವಾಗುತ್ತಿದೆ.

ರಾಜ್ಯದ 223 ವಿಧಾನಸಭಾ ಕ್ಷೇತ್ರಗಳ 2940 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿದೆ. ಇದೀಗ, ಮತದಾನ ದಾಖಲೆಯ ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಕೇಳಿ ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ನಿದ್ದೆಗೆಟ್ಟು ಕಾಯುವಂತಾಗಿದೆ.

ಚುನಾವಣಾ ಆಯೋಗಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿದೆ. ಅಲ್ಲಿ ಶೇ. 52.83 ರಷ್ಟು ಮಂದಿ ಮತ ಚಲಾಯಿಸಿದ್ದರೆ ಹಾಸನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ 77.95 ರಷ್ಟು ಮತದಾನವಾಗಿದೆ.

ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಚುನಾವಣಾ ಆಯೋಗ ಸೇರಿದಂತೆ ಅನೇಕ ಸಂಘಟನೆಗಳು ತೀವ್ರ ಪ್ರಯತ್ನ ನಡೆಸಿದ್ದವು. ಅದರ ಹೊರತಾಗಿಯೂ ರಾಜಧಾನಿ ಬೆಂಗಳೂರಿನ ಮತದಾರ ಮನೆಬಿಟ್ಟು ಹೊರ ಬರುವುದಕ್ಕೆ ಹಿಂಜರಿದಿದ್ದಾನೆ. ಇಲ್ಲಿ ಕೇವಲ ಶೇ 52.83ರಷ್ಟು ಮತದಾನ ನಡೆದಿದ್ದು ರಾಜ್ಯದ ಇತರೆ ಜಿಲ್ಲೆಗಳ ಮುಂದೆ ತಲೆತಗ್ಗಿಸುವಂತಾಗಿದೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಶೇ 64.68, 2004ರಲ್ಲಿ ಶೇ 65.17, 1999ರಲ್ಲಿ ಶೇ 66.65, 1994ರಲ್ಲಿ ಶೇ 68.59 ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆಗಿಂತ ಶೇ 20ರಷ್ಟು ಮತದಾನದಲ್ಲಿ ಸರಾಸರಿ ಹೆಚ್ಚಳವಾಗಿದೆ ಎಂದರು. ರಾಜ್ಯದ ಒಟ್ಟು ಪುರುಷ ಮತದಾರರ ಪೈಕಿ ಶೇ 71.84, ಮಹಿಳಾ ಮತದಾರರಲ್ಲಿ ಶೇ 70.10 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಂಗಳೂರು ನಗರ 57.38
ಬೆಂಗಳೂರು ಗ್ರಾ 82.49

ಚಿಕ್ಕಬಳ್ಳಾಪುರ - 83.50
ಬೆಳಗಾವಿ - 74.67
ಉತ್ತರಕನ್ನಡ - 73.66
ಹಾವೇರಿ - 79.91
ಬಳ್ಳಾರಿ - 73.16
ಚಿತ್ರದುರ್ಗ - 76.65
ದಾವಣಗೆರೆ - 75.98
ಶಿವಮೊಗ್ಗ - 74.76
ಉಡುಪಿ - 76.15
ಚಿಕ್ಕಮಗಳೂರು - 75.47
ತುಮಕೂರು - 79.32
ಬಾಗಲಕೋಟೆ - 72.94
ಕೋಲಾರ - 81.47
ರಾಮನಗರ - 82.94
ಮಂಡ್ಯ - 77.98
ಹಾಸನ - 78.77
ದಕ್ಷಿಣ ಕನ್ನಡ - 74.48
ಕೊಡಗು - 73.27
ಮೈಸೂರು - 65.83
ಚಾಮರಾಜನಗರ - 78.65
ವಿಜಾಪುರ - 66.07
ಯಾದಗಿರಿ - 64.92
ಗುಲ್ಬರ್ಗಾ - 63.75
ಬೀದರ್ - 66.43
ರಾಯಚೂರು - 64.83
ಕೊಪ್ಪಳ - 73.48
ಗದಗ - 72.90
ಧಾರವಾಡ - 67.16

English summary
Karnataka Votes - Maximum in Chickballapur Dist says State Chief Electoral Officer Anilkumar Jha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X