ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಯಾಕೆ ಬಂತು ಇಂಥಾ ಬುದ್ಧಿ

By Srinath
|
Google Oneindia Kannada News

ap-bans-women-entry-into-pubs-after-10-pm
ಬೆಂಗಳೂರು, ಮೇ 6: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬೆಂಗಳೂರಿನ ಮತದಾರರನ್ನು ಸೆಳೆಯಲು ಬಿಜೆಪಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತಾ, ಮತ್ತೆ ತಮ್ಮ ಸರಕಾರವನ್ನು ಅಧಿಕಾರಕ್ಕೆ ತಂದಿದ್ದೇ ಆದರೆ ರಾಜಧಾನಿಯಲ್ಲಿ ಮದ್ಯ ಮಾರಾಟ ಮಾಡುವ ಬಾರ್ ಗಳನ್ನು ರಾತ್ರಿ 12 ರವರೆಗೆ ತೆರೆಯಲು ಅವಕಾಶ ನೀಡುವುದಾಗಿ ಆಶ್ಚಾಸನೆ ನೀಡಿತ್ತು.

ಇದೇನು ಶಿಸ್ತಿನ ಪಕ್ಷದ ನೈತಿಕ ಅಂಧಃಪತನವಾ? ಮೊದಲೇ ಬೆಂಗಳೂರು ಅಪರಾಧಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ಸೆಕೆಂಡ್ ಷೋ ಪಿಕ್ಚರ್ ಇದ್ದರೆ ಅಪಾಯವೆಂದು ಅದನ್ನು ತೆಗೆದುಹಾಕಿ ಯಾವುದೋ ಕಾಲವಾಗಿದೆ. ಅಂತಹುದರಲ್ಲಿ ಇದೇನಿದು ಶಿಸ್ತಿನ ಪಕ್ಷದ ತೆವಲು. ಮತದಾರರನ್ನು ಸೆಳೆಯಲು ಹೆಂಡ ಮಾರಾಟಕ್ಕೇ ಅದು ಜೋತುಬೀಳಬೇಕಿತ್ತಾ? Shame on BJP! ಅದೇ ಪಕ್ಕದ ಆಂಧ್ರ ನೋಡಿ...

ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶವು ರಾತ್ರಿ 10 ಗಂಟೆಯ ಬಳಿಕ ಕ್ಲಬ್‌- ಪಬ್‌ ಹಾಗೂ ಬಾರ್‌ ಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವುದಕ್ಕೆ ನಿಷೇಧ ಹೇರಿದೆ. ಮದ್ಯದಂಗಡಿಗಳು 11 ಗಂಟೆಯ ನಂತರ ಪುರುಷರಿಗೂ ಬಂದ್ ಆಗುತ್ತವೆ.

ರಾತ್ರಿ 10 ಗಂಟೆಯ ಬಳಿಕ ಕ್ಲಬ್‌ಗಳು, ಪಬ್‌ಗಳು ಹಾಗೂ ಬಾರ್‌ಗಳು ಮಹಿಳಾ ಗ್ರಾಹಕಿಯರನ್ನು ಸ್ಥಳದಿಂದ ನಿರ್ಗಮಿಸುವಂತೆ ಸೂಚಿಸಬೇಕು ಇಲ್ಲದಿದ್ದರೆ ಅವುಗಳ ಮದ್ಯ ಮಾರಾಟ ಪರವಾನಗಿಯನ್ನು ರದ್ದುಗೊಳಿಸಬೇಕಾದೀತು ಎಂದು ಆದೇಶಿಸಿದೆ. ಐಟಿ ವಲಯದಲ್ಲಿ ಹೈದರಾಬಾದಿನಲ್ಲಿ 1.2 ಲಕ್ಷ ಮಹಿಳಾ ಉದ್ಯೋಗಿಗಳು, ಜವಳಿ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಮಹಿಳೆಯರು ಇದ್ದಾರೆ.

ಈ ಸಂಬಂಧ ಮೇ 3ರಂದು ಅಧಿಸೂಚನೆಯೊಂದನ್ನು ಜಾರಿಗೊಳಿಸಿದ್ದು, ಆಂಧ್ರ ಸರಕಾರವು 21 ವರ್ಷಕ್ಕಿಂತ ಕೆಳ ವಯಸ್ಸಿವರು ಕಾನೂನುಬದ್ಧವಾಗಿ ಮದ್ಯ ಸೇವಿಸುವಂತಿಲ್ಲ ಎಂದಿದೆ. ಅಂದ ಹಾಗೆ, ಎಲ್ಲ ರಾಜ್ಯಗಳ ಪೈಕಿ ಮದ್ಯ ಸೇವನೆ ಪ್ರಮಾಣ ಆಂಧ್ರದಲ್ಲಿ ಅತಿ ಹೆಚ್ಚು.

ರಾತ್ರಿ ಹೊತ್ತಿನಲ್ಲಿ ಬಾರ್‌ ಹಾಗೂ ಕ್ಲಬ್‌ ಗಳಿಂದ ಹೊರಬರುವ ಪಾನಮತ್ತ ಮಹಿಳೆಯರು ಅಟೋ ಚಾಲಕರ ಜತೆ ಜಗಳವಾಡಿದ ಹಲವಾರು ಘಟನೆಗಳು ವರದಿಯಾಗಿರುವುದು ಈ ಕ್ರಮವನ್ನು ಕೈಗೊಳ್ಳಲು ಪ್ರೇರಣೆ ನೀಡಿತೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

English summary
Andhra Pradesh bans women's entry into pubs after 10 pm. Andhra Pradesh, one of the largest consumers of beer and cheap liquor in the country, has decided to ban the entry of women into clubs, pubs and bars after 10 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X