ವರುಣಾ : ಜೆಡಿಎಸ್ ಅಭ್ಯರ್ಥಿ ಚೆಲುವರಾಜ್ ನಾಪತ್ತೆ

ಶುಕ್ರವಾರ ರಾತ್ರಿಯಿಂದ ಚೆಲುವರಾಜ್ ನಾಪತ್ತೆಯಾಗಿದ್ದಾರೆ. ಮೊಬೈಲ್ ಕರೆಗಳಿಗೂ ಅವರು ಉತ್ತರ ನೀಡುತ್ತಿಲ್ಲ ಎಂದು ಕಾರ್ಯಕರ್ತರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಚೆಲುವರಾಜ್ ಎಲ್ಲಿಗೆ ಹೋಗಿದ್ದಾರೆ? ಎಲ್ಲಿದ್ದಾರೆ ಎಂಬ ಬಗ್ಗೆ ಕುಟುಂಬದವರಿಗೂ ಮಾಹಿತಿ ಇಲ್ಲ.
ಮೈಸೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದ ಚೆಲುವರಾಜ್ ಸ್ವಯಂ ನಿವೃತ್ತಿ ಪಡೆದು ಸಿದ್ದರಾಮಯ್ಯ ವಿರುದ್ದ ಅಖಾಡಕ್ಕೆ ಧುಮುಕಿದ್ದರು. ಚೆಲುವರಾಜು ಅವರಿಗೆ ಇದು ಮೊದಲ ಚುನಾವಣೆಯಾದರೂ ಕ್ಷೇತ್ರದ ತುಂಬಾ ಓಡಾಡಿ ಪ್ರಚಾರ ನಡೆಸಿದ್ದರು.
ಕಾಪು ಕೈವಾಡ ಶಂಕೆ : ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಬೆಂಬಲಿಗರು ಚೆಲುವರಾಜ್ ಅವರನ್ನು ಅಪಹರಿಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ದೂರಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಮತ್ತು ಚೆಲುವರಾಜ್ ನಡುವೆ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಉಂಟಾಗಿತ್ತು. ಆದರೆ, ಮತದಾನಕ್ಕೆ ಮುನ್ನವೇ ಚೆಲುವರಾಜ್ ಕಾಣೆಯಾಗಿದ್ದಾರೆ.
ಪೊಲೀಸ್ ಅಧಿಕಾರಿಯಾಗಿದ್ದ ಚೆಲುವರಾಜ್ ಅವರನ್ನು ಹುಡುಕುವುದು ಸದ್ಯ ಪೊಲೀಸರಿಗೂ ಸವಾಲಿನ ಕೆಲಸವಾಗಿದೆ. ಅವರ ಮೊಬೈಲ್ ಫೋನ್ ನೆಟ್ ವರ್ಕ್ ಪ್ರದೇಶದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications