ಪತಿ ನಿಗೂಢ ಸಾವು ಎನ್ನಾರೈ ಮಹಿಳೆ ಕಂಗಾಲು

ಗುರುಪ್ರೀತ್ ಪಾಕಿವಾ ಅವರ ಪತಿ ಶವದ ಜೊತೆಗೆ 22ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿ ಜೋಸೆಫನ್ ಫೋಡೆಯವರ ಮೃತದೇಹವೂ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಫೋಡೆ, ಪಕಿವಾ ಇಬ್ಬರ ನಡುವೆ ಗೆಳೆತನಕ್ಕೂ ಮೀರಿದ ಸಲುಗೆ ಇತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಆಗ್ನೇಯ ಇಂಗ್ಲೆಂಡಿನ ಕೆಂಟ್ ನ ಎರಿತ್ ನಲ್ಲಿರುವ 31ರ ಹರೆಯದ ಸೂಪರ್ ಮಾರ್ಕೆಟ್ ಮ್ಯಾನೇಜರ್ ಪಕಿವಾ ಅವರು ಫೋಡೆಯ ಹುಟ್ಟುಹಬ್ಬದ ಸಂಭ್ರಮ ಆಚರಿಸಲು ಲಂಡನ್ನಿನ ಹೋಟೆಲ್ ಗೆ ಬಂದಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗುರುಪ್ರೀತ್ ಅವರಿಗೆ 4 ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಸಿಯಾರಾ ಲಿಯೋನ್ ಮೂಲದ ಈಕೆ ಈಗ ಆಘಾತಕ್ಕೆ ಒಳಗಾಗಿದ್ದು, ಕುಟುಂಬದ ಸದಸ್ಯರ ಆರೈಕೆಯಲ್ಲಿದ್ದಾರೆ. ಘಟನೆ ಬಗ್ಗೆ ಯಾರೊಂದಿಗೂ ಮಾತನಾಡಲು ಗುರ್ ಪ್ರೀತ್ ಸಿದ್ಧರಿಲ್ಲ. ನಮಗೂ ಆಕೆಯಷ್ಟೇ ಶಾಕ್ ಆಗಿದ್ದು, ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಕುಟುಂಬದ ಆಪ್ತರೊಬ್ಬರು ಹೇಳಿದರು.
ತಮ್ಮ ಕುಟುಂಬ ಸ್ನೇಹಿತೆಯಾಗಿರುವ ಫೋಡೆಯ ಜನ್ಮದಿನ ಆಚರಿಸಲು ತನ್ನ ಸೋದರ ಕೋಂಬಾ ಫಕಿವಾ ಹೋಟೆಲಿಗೆ ಕರೆದುಕೊಂಡು ಹೋಗಿದ್ದರು ಎಂದು ಕೋಂಬಾ ಅವರ ಸೋದರ ಸಹರ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ನೀರಿನಲ್ಲಿ ಮುಳುಗಿ ಸಾವು ಸಂಭವಿಸಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ವಿಷಪ್ರಾಶನ ನಡೆಸಲಾಗಿದೆಯೇ ಎಂಬುದರ ಬಗ್ಗೆ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಪಿಟಿಐ)












Click it and Unblock the Notifications