ರಾಹುಲ್ ಗಾಂಧಿ ಪ್ರಧಾನಿಯಾಗುವುದು ನನ್ನ ಆಸೆ

ಬೆಂಗಳೂರು, ಮೇ 2: ಮಂಡ್ಯದಲ್ಲಿ ನಿನ್ನೆ ಅಂಬರೀಷ್ ಸ್ಟೇಜ್ ಹತ್ತಲಿಲ್ಲ. ಎಸ್ಸೆಂ ಕೃಷ್ಣ ಹಾಗೂ ರಾಹುಲ್ ಗಾಂಧಿ ಜೊತೆ ಕೂರಲಿಲ್ಲ ಎಂಬುದೇ ದೊಡ್ಡ ಸುದ್ದಿಯಾಗಿಬಿಟ್ಟಿತು. ರಾಹುಲ್ ಗಾಂಧಿ ಭಾಷಣ ಎಂದಿನಂತೆ ಬಿಜೆಪಿ ಸರ್ಕಾರ ಭ್ರಷ್ಟವಾಗಿದೆ, ಗಣಿ ಲೂಟಿಯಾಗುತ್ತಿದೆ ಎಂಬುದರ ಸುತ್ತವೇ ಸುತ್ತಿತು. ಈ ಮಧ್ಯೆ ಕೃಷ್ಣ ಅವರು ಮೈಕ್ ಹಿಡಿದಿದ್ದೇ ತಡ ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗಬೇಕು ಎಂದುಬಿಟ್ಟರು.

ದೇಶದ ಆಶಾಕಿರಣ ರಾಹುಲ್ ಗಾಂಧಿ ಅವರಲ್ಲಿ ಮುಂದಿನ ಪ್ರಧಾನಿ ಆಗುವ ಎಲ್ಲ ಲಕ್ಷಣಗಳಿವೆ ಎಂದು ಹಲವು ಬಾರಿ ಹೇಳಿರುವ ಕೃಷ್ಣ ಅವರು ಅಪ್ಪಿ ತಪ್ಪಿ ಕೂಡಾ ಮಂಡ್ಯ ನಗರ ಅಭ್ಯರ್ಥಿ ಅಂಬರೀಷ್ ಅವರಿಗೆ ವೋಟ್ ಮಾಡಿ ಎನ್ನಲಿಲ್ಲ.

Former SM Krishna chants Rahul for PM

ರಾಹುಲ್ ಸ್ತುತಿಗೆ ಭಾಷಣ ಮೀಸಲು: ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಮಾಜಿಇಂದಿರಾ ಮತ್ತು ಸೋನಿಯಾ ಅವರಲ್ಲಿರುವ ವಿಷಯ ಅರಿಯುವ ಸಂಕಲ್ಪವನ್ನು ನಾನು ರಾಹುಲ್ ಗಾಂಧಿಯಲ್ಲೂ ಕಂಡಿದ್ದೇನೆ.

ರಾಹುಲ್ ಗಾಂಧಿ ಇಡೀ ದೇಶವನ್ನು ಸುತ್ತಾಡುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಕೃಷಿಕರ ಮತ್ತು ಬಡವರ ಕಷ್ಟ ಅರಿತಿದ್ದು, ಕಾರ್ಮಿಕರ ನೋವು ನಲಿವುಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ರಾಷ್ಟ್ರ ನಾಯಕರಾದವರಿಗೆ ಮೊದಲು ಸಮಸ್ಯೆಗಳನ್ನು ಅರಿತು, ಅದಕ್ಕೆ ಪರಿಹಾರ ಒದಗಿಸುವ ತಂತ್ರಗಾರಿಕೆ ಇರಬೇಕು. ಅದು ರಾಹುಲ್ ಅವರಲ್ಲಿ ಕಂಡಿದ್ದೇನೆ. ಪ್ರಧಾನಿಯಾಗಲು ಅವರೇ ಸೂಕ್ತ ಎಂದರು.

ಇದಕ್ಕೂ ಮುನ್ನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳ ಪರವಾಗಿ ತಾನು ಹೆಚ್ಚು ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದನ್ನೆ ಮಾಧ್ಯಮಗಳು ದೊಡ್ಡದನ್ನಾಗಿಸಿ ಬಿಂಬಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನವಿ ಮಾಡಿದ್ದರು.

ತಮ್ಮ ನಿವಾಸದಲ್ಲಿ 83ನೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕೃಷ್ಣ ಅವರು, ನನಗೂ ವಯಸ್ಸಾಗಿದೆ, ದೇಹ ದಣಿದಿದೆ. ರಾಜ್ಯದೆಲ್ಲೆಡೆ ಸಂಚರಿಸಿ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಮಾಧ್ಯಮಗಳಲ್ಲಿ ತಾನು ಅಸಮಾಧಾನಗೊಂಡು ಪ್ರಚಾರಕ್ಕೆ ತೆರಳುತ್ತಿಲ್ಲ ಎಂದು ಬಿಂಬಿಸಲಾಗುತ್ತಿರುವುದು ಬೇಸರದ ಸಂಗತಿ ಎಂದರು.

ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ತಾನು ಪಾಲ್ಗೊಳ್ಳದಿರುವುದನ್ನೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ನೀಡಲಾಯಿತು ಎಂದರು.

ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ಮಾತನಾಡಿ, ಪಕ್ಷದಲ್ಲಿ ಕೃಷ್ಣರನ್ನು ಕಡೆಗಣಿಸಲಾಗಿದೆ. ಅವರು ಪಕ್ಷದ ವರಿಷ್ಠರು, ರಾಜ್ಯದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರೆಯುವುದನ್ನು ನಿಲ್ಲಿಸಿದರೆ ಸಾಕು. ಅದಕ್ಕಿಂತ ದೊಡ್ಡ ಉಡುಗೊರೆ ಅವರ ಹುಟ್ಟು ಹಬ್ಬಕ್ಕೆ ಮತ್ತೊಂದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+