ಮಂಗಳೂರು, ಶಿವಮೊಗ್ಗದಲ್ಲಿ ಸಿಕ್ತು ಲಕ್ಷ ಲಕ್ಷ ಹಣ

ಮಂಗಳೂರಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ ನೇತೃತ್ವದಲ್ಲಿ ಗೋಲ್ಡನ್ ಕಾಸ್ಟ್ ಲ್ ಅಪಾರ್ಟ್ ಮೆಂಟ್ ನ ರಫೀಕ್ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಯಿಲ್ಲದ 63 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮೀನು ವ್ಯಾಪಾರಿಯಾಗಿರುವ ರಫೀಕ್ ನನ್ನು ಬಂಧಿಸಲಾಗಿದೆ.
ಮೀನು ವ್ಯಾಪಾರದಿಂದ ಬಂದ ಹಣವಿದ್ದು ಎಂದು ರಫೀಕ್ ಹೇಳಿದ್ದಾರೆ. ಆದರೆ, ಯಾವುದೇ ದಾಖಲೆಗಳು ಪತ್ತಯಾಗಿಲ್ಲ. ವಿಚಾರಣೆ ನಡೆಸುತ್ತಿರುವ ಪೊಲೀಸರು ರಾಜಕೀಯ ಪಕ್ಷಗಳಿಗೆ ಸೇರಿದ ಹಣವಿರಬಹುದು ಎಂದು ಶಂಕಿಸಿದ್ದಾರೆ.
ಶಿವಮೊಗ್ಗ : ಸೊರಬ ತಾಲೂಕಿನ ಆನವಟ್ಟಿಯ ಬಾರಂಗಿ ಚೆಕ್ ಪೋಸ್ಟ್ ಬಳಿ ಬೈಕ್ ನಲ್ಲಿ ಸಾಗಿಸುತ್ತಿದ್ದ 11 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುರೇಶ್ ಮತ್ತು ರಮೇಶ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು : ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಟೆಂಪೋದಲ್ಲಿ ಸಾಗಿಸಲಾಗುತ್ತಿದ್ದ 134 ಟಿವಿ ಮತ್ತು 1000 ಕೈ ಗಡಿಯಾರಗಳನ್ನು ಹನುಮಂತನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬನಶಂಕರಿ ನಿವಾಸಿಗಳಾದ ನವೀನ್, ಬಸವನಗೌಡ, ರಮೇಶ್ ಎಂಬುವವರನ್ನು ಬಂಧಿಸಲಾಗಿದೆ. ತುಮಕೂರಿನಿಂದ ಟಿವಿ ಮತ್ತು ವಾಚುಗಳನ್ನು ತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿ : ಹೊಸಪೇಟೆಯಲ್ಲಿ ಬೈಕ್ ನಲ್ಲಿ ಸಾಗಿಸುತ್ತಿದ್ದ 8.4 ಲಕ್ಷ ರೂ.ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 13.08 ಕೋಟಿ ರೂ.ಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications