ಸಮೀಕ್ಷೆ: ಬೆಂಗಳೂರಿನಲ್ಲಿ ಈ ಬಾರಿ ಹೆಚ್ಚು ಮತದಾನ

TOIDaksh Mood Survey ವರದಿ ಪ್ರಕಾರ 10ಕ್ಕೂ ಹೆಚ್ಚು ಮಂದಿಯನ್ನು ಸಮಿಕ್ಷೆಗೊಳಪಡಿಸಲಾಗಿ ಶೇ. 95ರಷ್ಟು ಮಂದಿ ಮೇ 5ರಂದು ಮತ ಚಲಾಯಿಸಲಿದ್ದಾರಂತೆ. ಆದರೆ ಇದನ್ನು ಉಳಿದೆಲ್ಲ ಮತದಾರರಿಗೂ ಅನ್ವಯಿಸಿಕೊಂಡು ಘಂಟಾಘೋಷವಾಗಿ ಹೇಳಬಹುದಾ? ಅನ್ನುವುದಕ್ಕಿಂತ ಇದು ನಿಜಕ್ಕೂ ಪ್ರೋತ್ಸಾಹದಾಯಕವಾಗಿದೆ ಎನ್ನಲಡ್ಡಿಯಿಲ್ಲ.
ಆದರೆ ಚುನಾವಣೆ ಆಯೋಗದ ಗುರಿ ಈ ಬಾರಿ ಶೇ. 75ರಷ್ಟು ದಾಖಲೆಯ ಮತದಾನ ಕಾಣುವುದಾಗಿದೆ. 2008ರಲ್ಲಿ ಆಯೋಗವು ಶೇ. 65ರಷ್ಟು ಮತ ಗುರಿ ಹೊಂದಿತ್ತು. ಆದರೆ ಆ ಬಾರಿ ಶೇ. 45ರಷ್ಟು ಮಂದಿ ಬೆಂಗಳೂರಿಗರು ದೊಡ್ಡ ಮನಸ್ಸು ಮಾಡಿ ಓಟು ಹಾಕಿದ್ದರು.
ಆದರೆ ಈ ಬಾರಿ ಕೇವಲ ಚುನಾವಣಾ ಆಯೋಗವೊಂದೇ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ. ಅನೇಕ ಖಾಸಗಿ ಸಂಸ್ಥೆಗಳು, ಎನ್ ಜಿಒಗಳು ಮತದಾನಕ್ಕಾಗಿ ಪ್ರಚಾರಾಂದೋಲನದಲ್ಲಿ ತೊಡಗಿವೆ. ಇನ್ನು ಮಾಧ್ಯಮಗಳೂ ಅಷ್ಟೇ ತನ್ನ ಶಕ್ತಿಮೀರಿ 'ಸ್ವಲ್ಪ ಮತಗಟ್ಟೆ ಕಡೆ ಹೋಗಿ, ಮತದಾನ ಮಾಡಿ ಬನ್ನಿ' ಎನ್ನುತ್ತಿವೆ.
ಗಮನಾರ್ಹವೆಂದರೆ ಈ ಬಾರಿ 35 ಲಕ್ಷಕ್ಕೂ ಅಧಿಕ ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ನೋಂದಾಯಿತ ಮತದಾರರು 70.37 ಲಕ್ಷ ಮತ್ತು ರಾಜ್ಯದಲ್ಲಿ ಒಟ್ಟು 4.26 ಕೋಟಿ ಇದ್ದಾರೆ. ಸೋ, ಅರ್ಹ ಮತದಾರರೇ, ದಯವಿಟ್ಟು ಮತಗಟ್ಟೆವರೆಗೂ ಹೋಗಿ, ದಯವಿಟ್ಟು ಓಟು ಮಾಡಿ ಬನ್ನಿ. ಆದರೆ ಯಾವ ಪಕ್ಷ/ಅಭ್ಯರ್ಥಿಗೆ ಮತ ಹಾಕಬೇಕು ಎಂಬುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ.












Click it and Unblock the Notifications