ಬಿಜಾಪುರ : ಸಿಂಧಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ಸಾವು

ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ದ್ಯಾವಪ್ಪ ಗೌಡ ಪಾಟೀಲ್ ಮೃತಪಟ್ಟಿದ್ದಾರೆ. ಸಜ್ಜನ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಪಾಟೀಲರು ಈ ಬಾರಿ ಬಿರುಸಿನಿಂದ ಪ್ರಚಾರ ಕಾರ್ಯ ಕೈಗೊಂಡಿದ್ದರು. ಪಾಟೀಲ್ ಪರವಾಗಿ ಮತ ಯಾಚಿಸಲು ಜೆಡಿಯು ಮುಂಖಡ ಶರದ್ ಯಾದವ್ ಸಿಂಧಗಿಗೆ ಭಾನುವಾರ ಆಗಮಿಸಬೇಕಾಗಿತ್ತು.
ಮಹಾರಾಷ್ಟ್ರದಿಂದ ಪಾಟೀಲರ ಮೃತದೇಹವನ್ನು ಇಂದು ರಾತ್ರಿ ಸ್ವ ಗ್ರಾಮಕ್ಕೆ ತರಲು ಸಿದ್ದತೆ ನಡೆದಿದ್ದು, ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪಾಟೀಲರು ಮೃತಪಟ್ಟಿರುವುದರಿಂದ ಕ್ಷೇತ್ರದಲ್ಲಿ ಚುನಾವಣೆಗೆ ತಡೆ ಉಂಟಾಗಬಹುದೇ ಎಂಬ ಪ್ರಶ್ನೆ? ಈಗ ಉದ್ಭವವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ನಿಯಮದಂತೆ ಕ್ಷೇತ್ರದ ಅಭ್ಯರ್ಥಿ ಮೃತಪಟ್ಟರೆ ಅಲ್ಲಿ ಚುನಾವಣೆ ನಡೆಸುವಂತಿಲ್ಲ. ಆದ್ದರಿಂದ ಚುನಾವಣೆ ಮುಂದೂಡುವ ಸಂಭವವಿದೆ.
ಕ್ಷೇತ್ರದ ಅಭ್ಯರ್ಥಿಗಳು
ಕಾಂಗ್ರೆಸ್ - ಶರಣಪ್ಪ ಟಿ.ಸುಣಗಾರ್
ಬಿಜೆಪಿ -ರಮೇಶ ಭೂಸನೂರ
ಜೆಡಿಎಸ್ - ಎಂ.ಸಿ.ಮನಗೂಳಿ
ಬಿಎಸ್ಆರ್ - ರಾಜು ತಾಳಿಕೋಟೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications