ಹರಿದ್ವಾರ : ಸಾಧುಸಂತರ ಸಂಗಮದಲ್ಲಿ ಮೋದಿ

ಈ ಸಂದರ್ಭದಲ್ಲಿ ಮೋದಿ ಅವರನ್ನು 'ವಿಕಾಸಪುರುಷ' ಎಂದು ಸಂಬೋಧಿಸಿದ ಯೋಗಗುರು ಬಾಬಾ ರಾಮದೇವ್ ಅವರು, ಮೋದಿ ಅವರಲ್ಲಿ ಅಸಾಧ್ಯ ಆಧ್ಯಾತ್ಮಿಕ ಶಕ್ತಿ ಇದ್ದಿದ್ದರಿಂದಲೇ ಇಂಥ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರೊಬ್ಬರಿಗೆ ಮಾತ್ರ ಕೊಳೆತು ಹೋಗಿರುವ ಭಾರತದ ರಾಜಕೀಯವನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವಿರುವುದು ಎಂದು ನುಡಿದರು.
ದೇಶದ ಅಭಿವೃದ್ಧಿ ಕುರಿತು ದೇಶದೆಲ್ಲೆಡೆ ಪ್ರಖರ ಭಾಷಣ ಮಾಡುತ್ತಿರುವ, ಬಿಜೆಪಿ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವೇದಿಕೆ ಏರುತ್ತಿದ್ದಂತೆ 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಬಾಬಾ ರಾಮದೇವ್ ಅವರು ಮೋದಿ ಅವರನ್ನು 'ವಿಕಾಸಪುರುಷ' ಎಂದು ಹೇಳಿ ಸ್ವಾಗತಿಸಿದರು.
ಆಚಾರ್ಯಕುಲಂ ವಿದ್ಯಾಪೀಠದ ಉದ್ಘಾಟನೆಗೆ ಬರುವ ಮುನ್ನ ಬಾಬಾ ರಾಮದೇವ್ ಅವರ ಪತಂಜಲಿ ವಿದ್ಯಾಪೀಠದಲ್ಲಿ ಹೋಮಹವನವನ್ನು ನರೇಂದ್ರ ಮೋದಿ ನಡೆಸಿದರು. ಸಭಿಕರನ್ನು ಉದ್ದೇಶಿಸಿ ಬಾಬಾ ರಾಮದೇವ್ ಅವರು ಮಾತನಾಡಿದ ನಂತರ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. ಹಾಗೆಯೆ, ಈ ಸಮಾರಂಭದ ವಿಡಿಯೋ ನೋಡಬೇಕಿದ್ದರೆ ಈ ತಾಣ ಸಂದರ್ಶಿಸಿ.











Click it and Unblock the Notifications