ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರೂ ಗೆ ಬೆಂಗಳೂರು-ನೆಲಮಂಗಲ ರೈಲು ಪ್ರಯಾಣ

By Srinath
|
Google Oneindia Kannada News

ಬೆಂಗಳೂರು, ಏ.26: ರಾಜಧಾನಿಯ ಪಶ್ಚಿಮ ದಿಕ್ಕಿನಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ನೆಲಮಂಗಲ ಪಟ್ಟಣವು ಬೆಂಗಳೂರಿಗೆ ಮತ್ತಷ್ಟು ಹತ್ತಿರವಾಗಿದೆ. ಈಗಾಗಲೇ ನೈಸ್ ರಸ್ತೆ, ಎಲಿವೇಟೆಡ್ ರಸ್ತೆ ಅದೂ ಇದೂ ಅಂತ ನೆಲಮಂಗಲವು ಬೆಂಗಳೂರಿನ ಪಕ್ಕಕ್ಕೆ ಬಂದುಬಿಟ್ಟಿದೆ. ಆದಾಗ್ಯೂ ಈಗ ಮತ್ತೂ ಒಂದು ಸಂಚಾರ ವ್ಯವಸ್ಥೆ ಇವುಗಳ ಮಧ್ಯೆ ಜೀವಂತಿಕೆ ಪಡೆಯಲಿದೆ.

ರೈಲು ಬಂತು ರೈಲು: ಏನಪಾ ದೀರ್ಘ ಕಾಲದಿಂದ ನೆಲಮಂಗಲ ಜನ ಅಪೇಕ್ಷಿಸುತ್ತಿದ್ದ ಬೆಂಗಳೂರು-ನೆಲಮಂಗಲ ರೈಲು ಸಂಚಾರ ನಾಳೆ ಶನಿವಾರದಿಂದ ಓಡಾಟ ಆರಂಭಿಸಲಿದೆ. ಬೆಂಗಳೂರು-ಹಾಸನ ಮಾರ್ಗದಲ್ಲಿ ಬರುವ ನೆಲಮಂಗಲದ ರೈಲು ಸಂಚಾರಕ್ಕೆ 2012 ಏಪ್ರಿಲ್ ತಿಂಗಳಲ್ಲಿ ಅನುಮತಿ ದೊರೆತಿತ್ತು.

bangalore-nelamangala-train-services-from-april-26

ಒಂದಷ್ಟು ದಿನಗಳ ಕಾಲ ಈ ಮಾರ್ಗದಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ರೈಲು ಸಂಚರಿಸಲಿದೆ. ಮುಂದೆ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಓಡಾಟ ಹೆಚ್ಚಿಸಲಾಗುವುದು ಎಂದು ಬೆಂಗಳೂರು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ರೈಲು ಪ್ರಯಾಣ ಅಗ್ಗವಾಗಿರುತ್ತದೆ. ಜತೆಗೆ, ಟ್ರಾಫಿಕ್ ಜಂಜಾಟವಿಲ್ಲದೆ, ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿರುವುದರಿಂದ ಜನ ರೈಲಿಗೆ ಜೋತುಬೀಳುವುದು ಖಂಡಿತ. ನೆಲಮಂಗಲ ರೈಲಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ವಿಶ್ವ ದರ್ಜೆಯ ಸೌಕರ್ಯಗಳುಳ್ಳ ಬೆಂಗಳೂರು-ಚೆನ್ನೈ ಡಬಲ್ ಡೆಕರ್ ರೈಲು ನಿನ್ನೆಯಿಂದ ಶುಭಾರಂಭ ಮಾಡಿದೆ.

ಬೆಂಗಳೂರು-ನೆಲಮಂಗಲ ನಡುವಣ 27 ಕಿಮೀ ಅಂತರದ 30 ನಿಮಿಷಗಳ ರೈಲು ಸಂಚಾರಕ್ಕೆ ಪ್ರಯಾಣ ದರ ರೂ. 5 ನಿಗದಿಯಾಗಿದೆ. ಟ್ರೈನ್ ಸಂಖ್ಯೆ 52561 ಬೆಂಗಳೂರಿನಿಂದ ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಬಿಡುತ್ತದೆ. ಟ್ರೈನ್ ಸಂಖ್ಯೆ 56522 ಸಂಜೆ 4 ಗಂಟೆಗೆ ನೆಲಮಂಗಲದಿಂದ ಹೊರಡುತ್ತದೆ.

English summary
Bangalore -Nelamangala train services is to begin from April 26. The intra-city train service between Bangalore city and Nelamangala will start from Saturday. According to South Western Railway officials, initially there will be a single train daily. The Commissioner of Railway Safety had approved the track in April 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X