ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳೋದೇನು?

ಈಗಾಗಲೇ ಒಂದಲ್ಲ, ಎರಡಲ್ಲ. ಹತ್ತಾರು ಸಮೀಕ್ಷೆಗಳು ಹತ್ತಾರು ನಮೂನೆಯ ಫಲಿತಾಂಶಗಳನ್ನು ನೀಡಿವೆ. ಇದರ ನಂಬಿಕಾರ್ಹತೆ/ ಖಚಿತತೆಯನ್ನು ಪಕ್ಕಕ್ಕಿಟ್ಟು ನೋಡಿದಾಗ ಮತದಾರನ ಮನಸ್ಥಿತಿಯನ್ನು ಅರಿಯಲು ಕಣದಲ್ಲಿರುವ ಅಭ್ಯರ್ಥಿಗಳಿಗೆ ಒಂದಷ್ಟು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಒಬ್ಬ ನಾಯಕರು (ಎಚ್ಡಿಕೆ) ಹೇಳಿದಂತೆ ಚುನಾವಣಾ ಸಮೀಕ್ಷೆಗಳಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲದವರೂ ಇದ್ದಾರೆ.
ಆದರೆ ಮತದಾರನ ದೃಷ್ಟಿಯಿಂದ ನೋಡಿದರೆ ಈ ಬಾರಿಯ ಸಮೀಕ್ಷೆಗಳು ನಿಜಕ್ಕೂ ಆತಂಕಕಾರಿಯಾಗಿವೆ. ಏಕೆಂದರೆ ಈಗಿನ ರಾಜಕಾರಣಿಗಳ ಬಗ್ಗೆ ಜನ ಈಗಾಗಲೇ ರೋಸಿಹೋಗಿದ್ದಾರೆ. ಇದೇ ವೇಳೆ ಗೊಂದಲಾಪುರವನ್ನೂ ಸೇರಿಕೊಂಡಿದ್ದಾರೆ. ಯಾರನ್ನು ಗೆಲ್ಲಿಸುವುದು ಯಾವ ಪಕ್ಷವನ್ನು ಸೋಲಿಸುವುದು ಎಂಬ ಜಿಜ್ಞಾಸೆ ಮತದಾರನನ್ನು ಬಹುವಾಗಿ ಕಾಡುತ್ತಿದೆ.
ಪ್ರಚಲಿತ ಹೀಗಿರುವಾಗ ಸಮೀಕ್ಷಗಳು ಅವುಗಳ ಮೂಗಿನ ನೇರಕ್ಕೆ ಒಂದೊಂದು ಪಕ್ಷಕ್ಕೆ ಒಂದೊಂದು ರೀತಿಯ ಫಲಿತಾಂಶಗಳನ್ನು ನೀಡುತ್ತಾ, ಮತ್ತಷ್ಟು ಗೊದಲವೆಬ್ಬಿಸುತ್ತಿವೆ. ಇವುಗಳ ಮಧ್ಯೆಯೂ ಮತದಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು/ ಉತ್ತಮ ಭವಿಷ್ಯ ಕಾಣುವಂತಾಗಲು ಮತಗಟ್ಟೆವರೆಗೂ ಬಂದು ಮತ ಚಲಾಯಿಸುವ ಮಹತ್ತರ ಹೊಣೆಗಾರಿಕೆ ನಿಭಾಯಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕೆಲ ಹಾಲಿ ಸಮೀಕ್ಷೆಗಳತ್ತ ಮತ್ತೊಮ್ಮೆ ಕಣ್ಣಾಡಿಸುವುದಾದರೆ...












Click it and Unblock the Notifications