• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೆಕ್ಷನ್ ಚಿತ್ರ: ಅಶೋಕ್ ಪರ ಸುದೀಪ್ ಪ್ರಚಾರ

By Mahesh
|

ಬೆಂಗಳೂರು, ಏ.25: ಪ್ರಚಾರ ಕಾರ್ಯ ಆರಂಭವಾದ ಮೊದಲ ದಿನವೇ ಬಿಜೆಪಿ ಮೇಲೆ ವಿಜಯೋತ್ಸವ ಆಚರಿಸಿದ್ದ ಕಾಂಗ್ರೆಸ್ ಈಗಲೂ ತನ್ನ ಭರ್ಜರಿ ಪ್ರಚಾರದ ಭರಾಟೆಯನ್ನು ಮುಂದುವರೆಸಿದೆ. ಸ್ಟಾರ್ ಪ್ರಚಾರಕರನ್ನು ಸಕತ್ ಆಗಿ ಉಪಯೋಗಿಸಿಕೊಂಡು ಮತ ಸೆಳೆಯುವ ಕಾರ್ಯದಲ್ಲಿ ಕಾಂಗ್ರೆಸ್ ನಿರತರಾಗಿದೆ.

ಸ್ಟಾರ್ ಪ್ರಚಾರಕರ ಸಹವಾಸ ಬೇಡ ಎಂದು ಜೆಡಿಎಸ್ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜನತೆಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಪ್ರಗತಿ ಸೊನ್ನೆ ಎನ್ನಬಹುದು. ಪ್ರಚಾರದಲ್ಲಿ ಸ್ವಲ್ಪ ಹೊಡೆತ ತಿಂದರೂ ಬಿಜೆಪಿ ನಿಧಾನವಾಗಿ ಟ್ರ್ಯಾಕ್ ಗೆ ಬರುತ್ತಿದೆ.

ಹೊಚ್ಚ ಹೊಸ ಲುಕ್: ರಾಜ್ಯದೆಲ್ಲೆಡೆ ಆಮದು ಸ್ಟಾರ್ ಪ್ರಚಾರಕರನ್ನು (ಸುಷ್ಮಾ, ರಾಜನಾಥ್, ಮೋದಿ, ಅಡ್ವಾಣಿ) ಇಳಿಸಿ ಜನ ಸೆಳೆಯಲು ಬಿಜೆಪಿ ಹರಸಾಹಸಪಡುತ್ತಿದೆ. ಗೃಹ ಸ‌ಚಿವ ಆರ್ ಅಶೋಕ್ ಅವರು ಕೊನೆಗೂ ತಮ್ಮ ಹೊಚ್ಚ ಹೊಸ ವೆಬ್ ತಾಣಕ್ಕೆ ಚಾಲನೆ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಆರ್ ಅಶೋಕ್ ಅವರ ಫೇಸ್ ಬುಕ್ ಪೇಜ್, ವೆಬ್ ತಾಣ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಅಶೋಕ್ ಸಿಗುವ ಎಲ್ಲಾ ಮಾರ್ಗಗಳ ಗೇಟ್ ಓಪನ್ ಮಾಡಿದ್ದಾರೆ.

ಇನ್ನೊಂದು ಕಡೆ ದರ್ಶನ್ ತೂಗುದೀಪ ಅವರು ನಿನ್ನೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು ಇಂದು ಜೆಡಿಎಸ್ ಪರ ಸಂಗೊಳ್ಳಿ ರಾಯಣ್ಣ ನಿರ್ಮಾಪಕ ಆನಂದ್ ಅಪ್ಪುಗೋಳ್ ಪರ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಲೋಕಸತ್ತಾ, ಕೆಜೆಪಿ ಸೇರಿದಂತೆ ರಂಗು ರಂಗಿನ ಚುನಾವಣಾ ಕಣದ ಚಿತ್ರಗಳು ನಿಮಗೆ ಇಲ್ಲಿ ಮಾತ್ರ ಸಿಗಲಿದೆ.. ನಿಮ್ಮ ನೆಚ್ಚಿನ ನಾಯಕರನ್ನು ಚಿತ್ರ ಸರಣಿಯಲ್ಲಿ ನೋಡಿ...

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಯಾವುದೇ ಪಕ್ಷದ ಪರವಾಗಿ ನಾನು ಪ್ರಚಾರ ಮಾಡಲು ಬಂದಿಲ್ಲ. ಆಶೋಕ್ ಒಬ್ಬ ಒಳ್ಳೆಯ ವ್ಯಕ್ತಿ ಎಂಬ ಕಾರಣಕ್ಕೆ ನಾನು ಅವರ ಕುಟುಂಬ ಸದಸ್ಯ ಎನ್ನುವ ಭಾವನೆ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದೇನೆ.

ಉಪ ಮುಖ್ಯಮಂತ್ರಿ, ಗೃಹ ಸಚಿವ,ಸಾರಿಗೆ ಸಚಿವ ಹೀಗೆ ವಿವಿಧ ಹುದ್ದೆಯನ್ನು ಅಲಂಕರಿಸಿದರೂ ಜನ ಸಂಪರ್ಕ ಇಟ್ಟುಕೊಂಡಿರುವ ಒಳ್ಳೆಯ ನಾಯಕ ಎಂದು ನಟ ಸುದೀಪ್ ಹೇಳಿದರು.

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಕಿಚ್ಚ ಸುದೀಪ್ ಅವರು ವೆಬ್ ತಾಣಕ್ಕೆ ಚಾಲನೆ ನೀಡಿದರು. ನಟಿ ತಾರಾ, ವೆಂಕಯ್ಯ ನಾಯ್ಡು, ಸಂಸದ ಅನಂತ್ ಕುಮಾರ್ ಅವರು ಪದ್ಮನಾಭ ನಗರ ಬಿಜೆಪಿ ಅಭ್ಯರ್ಥಿ ಆರ್ ಆಶೋಕ್ ಅವರ ಪರ ಪ್ರಚಾರ ನಡೆಸಿದರು.

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಈ ಬಾರಿ ನಮ್ಮದೇ ಗೆಲುವು ಎನ್ನುತ್ತಿರುವ ಜೆಡಿಎಸ್ ಪ್ರಥಮ ದಂಪತಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಬೆಳ್ಳಂಬೆಳ್ಳಗೆ ವಾಕಿಂಗ್ ಗೆ ಹೋದ್ರೆ ಬೊಮ್ಮನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯೋಗೇಶ್ ದೇವರಾಜ್ ಸಿಕ್ಕಿದರು.

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಮೌಂಟ್ ಕಾರ್ಮೆಲ್ ಕಾಲೇಜ್ ಬಳಿ ಲಕ್ಕಿ ಸ್ಟಾರ್ ರಮ್ಯಾ ಅವರು ಶಿವಾಜಿನಗರ ಅಭ್ಯರ್ಥಿ ರೋಷನ್ ಬೇಗ್ ಪರ ಮತಯಾಚನೆ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಹೊಸಪೇಟೆ ವಿಜಯನಗರ ಕ್ಷೇತ್ರ ಉಳಿಸಿಕೊಳ್ಳಲು ಅಭ್ಯರ್ಥಿ ಆನಂದ್ ಸಿಂಗ್ ಭಾರಿ ಪ್ರಚಾರ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಪಕ್ಷೇತರ ಅಭ್ಯರ್ಥಿ ಎಸ್ ಆರ್ ಕಂಪ್ಲಿ ಅವರು ಯಮ ವೇಷಧಾರಿಯಾಗಿ ಬಂದು ಹುಬ್ಬಳ್ಳಿ ಧಾರವಾಡ ಕ್ಷೇತ್ರ(ಕೇಂದ್ರ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗ ಕಂಡ ದೃಶ್ಯ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದ ಅನಂತಕುಮಾರ್ ಸೈಕಲ್ ಸವಾರಿ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಅಪ್ಪ ನನಗೂ ಒಂದು ಕೊಡಿ ಜೆಡಿಎಸ್ ಸಾಧನೆ ಪುಸ್ತಕ : ಕುಮಾರಸ್ವಾಮಿ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಬಿಗ್ ಎಫ್ ಎಂ ನಲ್ಲಿ ಕುಮಾರಸ್ವಾಮಿ ವಾಯ್ಸ್ ಕೇಳಿದ್ರಾ

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಕೈಎತ್ತಿ ಮುಗಿದಿದ್ದು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ಎಲೆಕ್ಷನ್ ರಂಗು ರಂಗಿನ ಚಿತ್ರಗಳು

ರಾಜ್ಯದೆಲ್ಲೆಡೆ ಅಕ್ರಮ ಮದ್ಯಗಳದ್ದೇ ಕಾರು ಬಾರು, ಪ್ರತಿದಿನ ಬೇನಾಮಿ ನಗದು, ಆಭರಣ, ಬಾಂಬ್, ಆಲ್ಕೋಹಾಲ್ ರಾಶಿಗಟ್ಟಲೆ ಒಟ್ಟು ಮಾಡುವುದೇ ಚುನಾವಣಾಧಿಕಾರಿಗಳ ಕೆಲಸವಾಗಿದೆ.

ಇನ್ನಷ್ಟು ಚಿತ್ರಗಳು ನಾಳೆ ಸಿಗಲಿದೆ. ಸದ್ಯಕ್ಕೆಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly election 2013 in pictures. Bharatiya Janata Party, Congress, Karnataka Janata Party, Janata Dal (Secular), BSR Congress, Loksatta party are the leading contenders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more