ಬಿಜೆಪಿ ಟಿವಿ ಜಾಹೀರಾತಿನಲ್ಲಿ ಅಡ್ವಾಣಿಗೆ ಮುಖಭಂಗ
ಬೆಂಗಳೂರು, ಏ 24: ಚುನಾವಣಾ ಸಂಬಂಧ ಟಿವಿ ಜಾಹೀರಾತಿನಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಭಾವಚಿತ್ರ ಮಿಸ್ ಆಗಿದೆ. ಇದು ಅಚಾತುರ್ಯವೋ ಅಥವಾ ಉದ್ದೇಶಪೂರ್ವಕವಾಗಿ ನಡೆದಿದ್ದೋ ಅನ್ನೋದಕ್ಕೆ ಬಿಜೆಪಿ ರಾಜ್ಯ ಮುಖಂಡರೇ ಉತ್ತರಿಸ ಬೇಕು.
ಈಗಾಗಲೇ ಅಡ್ವಾಣಿ ತಮ್ಮ ಈ ಇಳಿ ವಯಸ್ಸಿನಲ್ಲಿ ಒಂದು ಸುತ್ತಿನ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂದು ಬುಧವಾರ (ಏ 24) ಮತ್ತೆ ಬೆಳಗಾವಿ ಜಿಲ್ಲೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಅಡ್ವಾಣಿ ಭಾಗವಹಿಸಲಿದ್ದಾರೆ.
ಸಂಸದ ರಮೇಶ್ ಜಿಗಜಿಣಗಿ ಮತ್ತು ಸುರೇಶ್ ಅಂಗಡಿ ಜೊತೆ ಅಡ್ವಾಣಿ ಸವದತ್ತಿ ಮತ್ತು ಇಂಡಿಯಲ್ಲಿ ಇಂದು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಈ ನಡುವೆ ಖಾಸಾಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಪಕ್ಷದ ಜಾಹೀರಾತಿನಲ್ಲಿ ಅಡ್ವಾಣಿ ಭಾವಚಿತ್ರ ಮಿಸ್ ಆಗಿ ಅವರು ಮುಖಭಂಗ ಅನುಭವಿಸಿದಂತಾಗಿದೆ.

ಪಕ್ಷದ ಜಾಹೀರಾತಿನಲ್ಲಿ ಯಾರ್ಯಾರು ಇದ್ದಾರೆ?
ಪಕ್ಷದ ಪ್ರಚಾರ ಕುರಿತ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿ, ಭವಿಷ್ಯದ ಪ್ರಧಾನಿಯೆದೇ ಬಿಂಬಿತವಾಗುತ್ತಿರುವ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರಗಳನ್ನು ಮಾತ್ರ ಕಾಣಿಸಲಾಗಿದೆ.

ಪಕ್ಷದ ಜಾಹೀರಾತಿನಲ್ಲಿ ಯಾರ್ಯಾರು ಇದ್ದಾರೆ?
ಇನ್ನು ಈ ಜಾಹೀರಾತಿನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಭಾವಚಿತ್ರವೂ ಇಲ್ಲ. ಅಲ್ಲದೇ ಅಡ್ವಾಣಿ ಮಾನಸಪುತ್ರ ಎಂದೇ ಕರೆಯಲ್ಪಡುವ ಅನಂತ್ ಕುಮಾರ್ ಅದು ಹೇಗೆ ಅಡ್ವಾಣಿ ಭಾವಚಿತ್ರ ಮಿಸ್ ಮಾಡ್ಕೊಂಡ್ರು ಎನ್ನುವುದು ಅರ್ಥವಾಗದ ಪ್ರಶ್ನೆ.

ಪಕ್ಷದ ಜಾಹೀರಾತಿನಲ್ಲಿ ಯಾರ್ಯಾರು ಇದ್ದಾರೆ?
ಇನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ಮಾಜಿ ಸಿಎಂ ಸದಾನಂದ ಗೌಡ ಭಾವಚಿತ್ರವೂ ಇಲ್ಲ. ಅಡ್ವಾಣಿ ಅವರ ಭಾವಚಿತ್ರ ಹಾಕಿದರೆ ಮತ ಬ್ಯಾಂಕಿಗೆ ಉಪಯೋಗವಾಗುವುದಿಲ್ಲ ಎನ್ನುವ ಅಭಿಪ್ರಾಯ ಪಕ್ಷದೊಳಗಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

ಪಕ್ಷದ ಜಾಹೀರಾತಿನಲ್ಲಿ ಯಾರ್ಯಾರು ಇದ್ದಾರೆ?
ಇಬ್ಬರು ಉಪಮುಖ್ಯಮಂತ್ರಿಗಳಾದ ಈಶ್ವರಪ್ಪ ಮತ್ತು ಅಶೋಕ್ ಭಾವಚಿತ್ರವೂ ಜಾಹೀರಾತಿನಲ್ಲಿಲ್ಲ.

ಪಕ್ಷದ ಜಾಹೀರಾತಿನಲ್ಲಿ ಯಾರ್ಯಾರು ಇದ್ದಾರೆ?
ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಚಿತ್ರವೂ ಜಾಹೀರಾತಿನಲ್ಲಿಲ್ಲ. ಈ ಇಬ್ಬರೂ ಮುಖಂಡರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications